Tuesday, April 29, 2025

Latest Posts

ರಷ್ಯಾ- ಉಕ್ರೇನ್‌ ಯುದ್ಧಕ್ಕೆ ಫುಲ್‌ ಸ್ಟಾಪ್‌ ನೀಡಿದ ಟ್ರಂಪ್ ಎಂಟ್ರಿ : ಥ್ಯಾಂಕ್ಸ್‌ ಎಂದ ಪುಟಿನ್

- Advertisement -

International News: ರಷ್ಯಾ ಹಾಗೂ ಉಕ್ರೇನ್‌ ನಡುವಿನ ಸಮರ ಕೊನೆಗೊಳ್ಳುವ ಸಮಯ ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ನಡೆಸಿರುವ ಮಾತುಕತೆಯು ಆಶಾದಾಯಕವಾಗಿದೆ. ಅಲ್ಲದೆ ಯುದ್ಧವನ್ನು ನಿಲ್ಲಿಸಲು ನಾನು ಪುಟಿನ್‌ ಅವರಲ್ಲಿ ವಿನಮ್ರವಾಗಿ ಕೇಳಿಕೊಂಡಿದ್ದೇನೆ. ಅಲ್ಲದೆ ಸೌದಿ ಅರೇಬಿಯಾದಲ್ಲಿ ಕದನ ವಿರಾಮಕ್ಕೆ ಸಂಬಂಧಿಸಿದಂತೆ ನಡೆದಿದ್ದ ಒಪ್ಪಂದದ ಬಗ್ಗೆಯೂ ಮಾತನಾಡಿದ್ದೇನೆ. ಅವರು ಯುದ್ಧಕ್ಕೆ ಪೂರ್ಣ ವಿರಾಮ ಘೋಷಿಸುವ ಕುರಿತು ಒಲವು ವ್ಯಕ್ತಪಡಿಸಿದ್ದಾರೆ ಎಂದು ಟ್ರಂಪ್‌ ತಮ್ಮ ಸಾಮಾಜಿಕ ಜಾಲತಾಣ ಟ್ರುಥ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ಯುದ್ಧಕ್ಕೆ ತೆರೆ ಎಳೆಯುವ ಸಂದರ್ಭ ಎದುರಾಗಲಿದೆ. ಆದರೆ ನಾವು ಯುದ್ಧವನ್ನು ನಿಲ್ಲಿಸಲು ಯೋಚಿಸುತ್ತಿರುವ ಈ ವೇಳೆಯಲ್ಲಿಯೇ ರಷ್ಯಾ ಸೇನೆಯು ಉಕ್ರೇನ್‌ ಸೈನ್ಯವನ್ನು ವಶ ಪಡೆಯಲು ಮುಂದಾಗಿರುವುದು ದುರಾದೃಷ್ಟ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೆಲ್ಲ ಗಮನಿಸಿಯೇ ನಾನು ಉಕ್ರೇನ್‌ ಸೈನಿಕರನ್ನು ರಕ್ಷಣೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಅಲ್ಲದೆ ಜಾಗತಿಕ ಮಟ್ಟದಲ್ಲಿ ನಡೆದಿದ್ದ ಎರಡನೇ ವಿಶ್ವ ಯುದ್ಧದ ಬಳಿಕ ನಡೆದಿರುವ ಅತಿದೊಡ್ಡ ಮರಣ ಮೃದಂಗ ಇದಾಗಿದೆ. ಇದರಲ್ಲಿ ಹತರಾದ ಎಲ್ಲ ಸೈನಿಕರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ಇನ್ನೂ ಮಹತ್ವದ ಬೆಳವಣಿಗೆಯೊಂದರಲ್ಲಿ ಟ್ರಂಪ್‌ ಸಂದೇಶದ ಜೊತೆಗೆ ಮಾಸ್ಕೊಗೆ ಆಗಮಿಸಿದ್ದ ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್‌ ವಿಟ್ಕಾಫ್‌ ಅವರು ಯುದ್ಧಕ್ಕೆ ಪೂರ್ಣ ವಿರಾಮ ನೀಡುವ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗೂ ಹಿರಿಯ ರಾಜತಾಂತ್ರಿಕ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದರು. ಅಲ್ಲದೆ ಯುದ್ಧದಿಂದ ಎರಡೂ ರಾಷ್ಟ್ರಗಳ ಮೇಲೆ ಭವಿಷ್ಯದಲ್ಲಿ ದೊಡ್ಡ ಪರಿಣಾಮ ಬೀರಲಿದೆ. ಹೀಗಾಗಿ ಯುದ್ಧ ನಿಲ್ಲಿಸುವುದು ಸೂಕ್ತ ಎಂದು ವಿಟ್ಕಾಫ್‌ ಪುಟಿನ್‌ಗೆ ಕಿವಿ ಮಾತು ಹೇಳಿದ್ದರು. ಇನ್ನೂ 30 ದಿನಗಳ ಕದನ ವಿರಾಮದ ಬಗ್ಗೆಯೂ ಸುದೀರ್ಘ ಮಾತುಕತೆಯ ಬಳಿಕ ಅಂತಿಮವಾಗಿ ಷರತ್ತುಬದ್ಧವಾಗಿ ಪುಟಿನ್‌ ಉಕ್ರೇನ್‌ ಜೊತೆಗಿನ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಮೋದಿ, ಟ್ರಂಪ್‌ ಸೇರಿ ಜಾಗತಿಕ ನಾಯಕರಿಗೆ ಥ್ಯಾಂಕ್ಸ್‌ ಹೇಳಿದ ಪುಟಿನ್..‌

ಇನ್ನೂ ಈ ರಷ್ಯಾ ಹಾಗೂ ಉಕ್ರೇನ್‌ ಕದನವನ್ನು ನಿಲ್ಲಿಸುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳ ಅಧ್ಯಕ್ಷರಿಗೆ ಪುಟಿನ್‌ ಧನ್ಯವಾದ ಸಲ್ಲಿಸಿದ್ದಾರೆ. ಇನ್ನೂ ಪ್ರಸ್ತಾಪಿತ 30 ದಿನಗಳ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಬೆಲಾರಸ್‌ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಜೊತೆಯಾಗಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಪುಟಿನ್‌, ಜನ ಸಾಮಾನ್ಯರ ಜೀವ ರಕ್ಷಣೆ ಮಾಡುವ ಮಹತ್ವದ ಗುರಿಯೊಂದಿಗೆ ಹಾಗೂ ಸಂಘರ್ಷ ಕೊನೆಗೊಳಿಸುವ ಉದಾತ್ತ ಧ್ಯೇಯದ ಜೊತೆಗೆ ಶ್ರಮಿಸಿರುವ ವಿಶ್ವದ ಎಲ್ಲ ನಾಯಕರಿಗೂ ಕೃತಜ್ಞತೆ ತಿಳಿಸುವೆ ಎಂದಿದ್ದಾರೆ. ಅಲ್ಲದೆ ಈ ಯುದ್ಧದ ಅನಾನುಕೂಲ ಹಾಗೂ ಅಪಾಯಗಳ ಕುರಿತು ಹೇಳಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ಸಮರಕ್ಕೆ ತೆರೆ ಎಳೆಯಲು ಮುಂದಾಳತ್ವ ವಹಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ದಕ್ಷಿಣ ಆಫ್ರಿಕಾ,ಚೀನಾ ಹಾಗೂ ಬ್ರೆಜಿಲ್‌ ದೇಶಗಳ ಅಧ್ಯಕ್ಷರಿಗೂ ರಷ್ಯಾದ ಜನರ ಪರವಾಗಿ ಥ್ಯಾಂಕ್ಸ್‌ ಎಂದು ಪುಟಿನ್‌ ಹೇಳಿದ್ದಾರೆ.

- Advertisement -

Latest Posts

Don't Miss