Friday, June 20, 2025

Latest Posts

ಮಂಡಿನೋವು, ಕಾಲು ನೋವಿದ್ರೆ ಈ ಔಷಧಿ ಬಳಸಿ ನೋಡಿ..

- Advertisement -

ವಯಸ್ಸಾದ ಮೇಲೆ ಮಂಡಿನೋವು, ಕಾಲು ನೋವು ಬರೋದು ಸಹಜ. ಆದ್ರೆ ಇತ್ತೀಚಿನ ದಿನಗಳಲ್ಲಿ ಬರೀ ವಯಸ್ಸಾದವರಿಗಷ್ಟೇ ಅಲ್ಲ, ಯುವ ಪೀಳಿಗೆಯವರಿಗೂ ಮಂಡಿ ನೋವು, ಕಾಲು ನೋವು ಬರುತ್ತಿದೆ. ಹಾಗಾಗಿ ಇಂದು ನಾವು ಕಾಲು ನೋವು, ಮಂಡಿನೋವಿಗಾಗಿ ಮನೆಯಲ್ಲೇ ಯಾವ ಮದ್ದು ತಯಾರಿಸಿ, ಸೇವಿಸಬೇಕು ಎಂದು ಹೇಳಲಿದ್ದೇವೆ..

ರಾತ್ರಿ ಮಲಗುವಾಗ ಬಿಸಿ ನೀರಿನಲ್ಲಿ ಒಂದು ಚಮಚ ಮೆಂತ್ಯೆಯನ್ನು ಹಾಕಿಡಿ. ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಿರಿ. ಮತ್ತು ನೆನೆದ ಮೆಂತ್ಯೆಯನ್ನ ಕೂಡ ತಿನ್ನಬೇಕು. ಇದರಿಂದ ಮಂಡಿ ನೋವು, ಕಾಲು ನೋವು ಕಡಿಮೆಯಾಗುತ್ತದೆ.

ಇನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಸ್ಪೂನ್ ತುಪ್ಪ ತಿಂದು, ಒಂದು ಗ್ಲಾಸ್ ಬಿಸಿ ಬಿಸಿ ನೀರು ಕುಡಿದ್ರೂ ನಿಮ್ಮ ಮೂಳೆ ಗಟ್ಟಿಯಾಗತ್ತೆ. ಕಾಲು ನೋವು, ಕೈ ನೋವು ಬರುವುದಿಲ್ಲ. ನಿಮ್ಮ ಆಹಾರದಲ್ಲಿ ತುಪ್ಪ, ಮೊಸರನ್ನ ತಪ್ಪಿಸದೇ ತಿನ್ನಿ. ರಾತ್ರಿ ಮಲಗುವಾಗ ಹಾಲು ಕುಡಿದು ಮಲಗಿ. ಹಾಲು , ಮೊಸರು, ತುಪ್ಪ, ಪಾಲಕ್, ಶೇಂಗಾ ಚಿಕ್ಕಿ ಇವನ್ನೆಲ್‌ಲ ತಿನ್ನುವುದರಿಂದ ನಮ್ಮ ದೇಹದಲ್ಲಿ ಕ್ಯಾಲ್ಶಿಯಂ ಅಂಶ ಹೆಚ್ಚತ್ತೆ. ಕ್ಯಾಲ್ಶಿಯಂ ಅಂಶ ಹೆಚ್ಚಿದ್ದಷ್ಟು ಮೂಳೆ ಗಟ್ಟಿಗೊಳ್ಳತ್ತೆ. ಕೈ ಕಾಲು ನೋವು ಕಡಿಮೆಯಾಗತ್ತೆ.

ಪಾರಿಜಾತದ ಎಲೆಯಿಂದಲೂ ನೀವು ಕೈ ಕಾಲು ನೋವಿಗೆ ಪರಿಹಾರ ಕಂಡುಕೊಳ್ಳಬಹುದು. ನಡೆಯಲಾಗದೇ, ಕೈ ಕಾಲು ಅಲ್ಲಾಡಿಸಲಾಗದೇ ಒದ್ದಾಡುವವರು ಕೂಡ ಈ ಪ್ರಯೋಗ ಮಾಡಿ ನೋಡಬಹುದು. 6ರಿಂದ 7 ಪಾರಿಜಾತದ ಎಲೆಯನ್ನು ತೆಗೆದುಕೊಳ್ಳಿ. ಇದನ್ನ ಕಲ್ಲಿನಿಂದ ಜಜ್ಜಿ ಪೇಸ್ಟ್ ಮಾಡಿಕೊಳ್ಳಿ. ಮಿಕ್ಸಿಯಲ್ಲಿಯೂ ಹಾಕಿ ಪೇಸ್ಟ್ ಮಾಡಬಹುದು. ಆದ್ರೆ ಕಲ್ಲಿನಿಂದ ಜಜ್ಜಿದ್ರೆ ಒಳ್ಳೆಯದು.

ಈಗ ಈ ಪೇಸ್ಟನ್ನ ಒಂದು ಗ್ಲಾಸ್ ನೀರಿನಗೆ ಸೇರಿಸಿ. ಇವೆರಡನ್ನ ಚೆನ್ನಾಗಿ ಕುದಿಸಿ. ಎಷ್ಟು ಕುದಿಸಬೇಕು ಅಂದ್ರೆ, ಆ ನೀರು ಅರ್ಧವಾಗಬೇಕು. ಅಷ್ಟು ಕುದಿಸಬೇಕು. ಈಗ ಇದು ಕಹಿ ನೀರಾಗಿರುತ್ತದೆ. ಇದು ತಣ್ಣಗಾದ ಮೇಲೆ ಸೇವಿಸಬೇಕು. ಇದನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲೇ ಕುಡಿಯಬೇಕು. ನೀವು ಬೇಕಾದ್ರೆ ರಾತ್ರಿ ಈ ಜ್ಯೂಸ್ ಮಾಡಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿಯಬಹುದು. ಎಷ್ಟೇ ಹಳೆಯ ಕೈ ಕಾಲು ನೋವಿದ್ರೂ, ಗುಣವಾಗುತ್ತದೆ. ಆದ್ರೆ ಈ ಜ್ಯೂಸ್ ಕುಡಿದು ನಿಮಗೆ ಅಲರ್ಜಿಯಾಗಿದ್ದಲ್ಲಿ, ಮತ್ತೆ ಇದನ್ನ ಸೇವಿಸಬೇಡಿ. ನೀವು ಜ್ಯೂಸ್ ಮಾಡುವಾಗ, ಸ್ವಚ್ಛತೆ ಕಾಪಾಡಿ.

ಮಹಿಳೆಯರಲ್ಲಿ ಕ್ಯಾಲ್ಶಿಯಂ ಕಡಿಮೆ ಇರಲು ಕಾರಣವೇನು..? ಪರಿಹಾರವೇನು..?

ಗರ್ಭಿಣಿಯಾಗುವುದಕ್ಕೆ 5 ಉತ್ತಮ ಆಹಾರಗಳಿವು..

ಮುಟ್ಟಿನ ಸಮಯದಲ್ಲಿ ಕಡಿಮೆ ಬ್ಲೀಡಿಂಗ್ ಆಗಲು ಕಾರಣವೇನು..?

- Advertisement -

Latest Posts

Don't Miss