Health Tips: ಬಾಳೆಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳು ಅಷ್ಟಿಷ್ಟಲ್ಲ. ಹೊಟ್ಟೆ ನೋವಿನ ಸಮಸ್ಯೆ, ಅಜೀರ್ಣ ಸಮಸ್ಯೆ, ಮಲಬದ್ಧತೆ ಸಮಸ್ಯೆ, ಸೌಂದರ್ಯ ಸಮಸ್ಯೆ, ಉಷ್ಣತೆ ಸಮಸ್ಯೆ ಎಲ್ಲದಕ್ಕೂ ಅತ್ಯುತ್ತಮ ಪರಿಹಾರವೆಂದರೆ, ಬಾಳೆಹಣ್ಣಿನ ಸೇವನೆ. ಅದೇ ರೀತಿ ಬಾಳೆಹಣ್ಣಿನ ಮಾಸ್ಕ್ ಕೂಡ, ಕೂದಲ ಬುಡ ಗಟ್ಟಿಗೊಂಡು, ಕೂದಲು ಸಧೃಡವಾಗಿ ಬೆಳೆಯಲು ಸಹಕಾರಿಯಾಗಿದೆ. ಹಾಗಾದ್ರೆ ಬಾಳೆಹಣ್ಣಿನ ಹೇರ್ ಮಾಸ್ಕ್ ತಯಾರಿಸುವುದು ಹೇಗೆ..? ಅದರಿಂದೇನು ಲಾಭ ಅಂತಾ ತಿಳಿಯೋಣ ಬನ್ನಿ..
ಬಾಳೆಹಣ್ಣಿನೊಂದಿಗೆ ಕೆಲವು ಪದಾರ್ಥಗಳನ್ನು ಸೇರಿಸಿ ಬೇರೆ ಬೇರೆ ಹೇರ್ ಮಾಸ್ಕ್ ತಯಾರಿಸಲಾಗುತ್ತದೆ. ಇದನ್ನು ಬಳಸುವುದರಿಂದ, ಕೂದಲು ಶೈನ್ ಆಗುತ್ತದೆ. ಕೂದಲ ಬುಡ ಗಟ್ಟಿಯಾಗುತ್ತದೆ. ಕೂದಲು ಉದ್ದವಾಗಿ ಬೆಳೆಯುತ್ತದೆ. ಏಕೆಂದರೆ ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು ಕೂದಲ ಬುಡವನ್ನು ಮತ್ತು ಕೂದಲನ್ನು ಗಟ್ಟಿಗೊಳಿಸುತ್ತದೆ. ವಯಸ್ಸಾಗುವ ಮುನ್ನವೇ ಕೂದಲು ಬಿಳಿಯಾಗುವುದನ್ನು ಕೂಡ ಇದು ತಡೆಯುತ್ತದೆ.
ಬಾಳೆಹಣ್ಣು ಮತ್ತು ಮೊಸರು ಬಳಸಿ ಪೇಸ್ಟ್ ತಯಾರಿಸಬೇಕು. ಈ ಹೇರ್ ಮಾಸ್ಕ್ ಕೂದಲ ಬುಡಕ್ಕೆ ಮತ್ತು ಕೂದಲಿಗೆ ಹಚ್ಚಿ, ಅರ್ಧ ಗಂಟೆ ಬಳಿಕ, ಕೆಮಿಕಲ್ ಇಲ್ಲದ ಶ್ಯಾಂಪೂ ಬಳಸಿ, ತಲೆಸ್ನಾನ ಮಾಡಬೇಕು. ಈ ಹೇರ್ ಮಾಸ್ಕ್ ಹಾಕುವುದರಿಂದ, ಕೂದಲು ಸ್ಪ್ಲಿಟ್ ಆಗುವುದು ನಿಲ್ಲುತ್ತದೆ.
ಬಾಳೆಹಣ್ಣು ಮತ್ತು ಮೊಟ್ಟೆಯ ಹೇರ್ ಮಾಸ್ಕ್. ಮೊಟ್ಟೆಯ ಪೇಸ್ಟ್ ಕೂದಲಿಗೆ ಎಷ್ಟು ಉತ್ತಮ ಅಂತಾ ಹಲವರಿಗೆ ಗೊತ್ತು. ಹಾಗಾಗಿ ಇದರೊಂದಿಗೆ, ನೀವು ಬಾಳೆಹಣ್ಣನ್ನು ಸೇರಿಸಿ, ಕೂದಲ ಬುಡಕ್ಕೆ ಹಚ್ಚಿದ್ರೆ, ಕೂದಲು ಸುಂದರವಾಗಿ ಬೆಳೆಯುತ್ತದೆ.
ಬಾಳೆಹಣ್ಣು ಮತ್ತು ಆ್ಯಲೋವೆರಾ ಹೇರ್ ಮಾಸ್ಕ್. ಇವೆರಡನ್ನು ಸೇರಿಸಿ, ಪೇಸ್ಟ್ ಮಾಡಿ, ಕೂದಲಿಗೆ ಹಚ್ಚಬೇಕು. ಆ್ಯಲೋವೆರಾ ಕೂದಲು ಉದುರದಂತೆ ಕಾಪಾಡಿದರೆ, ಬಾಳೆಹಣ್ಣು ಕೂದಲು ಶೈನ್ ಆಗುವಂತೆ ಮಾಡುತ್ತದೆ.
ಈ ಹೇರ್ ಮಾಸ್ಕ್ ಗಳನ್ನು ಬಳಸುವ ಮುನ್ನ ಇದು ನಿಮ್ಮ ತ್ವಚೆಗೆ, ಕೂದಲಿಗೆ ಯಾವುದೇ ಅಲರ್ಜಿ ಮಾಡುವುದಿಲ್ಲವೆಂದು ನೀವು ಮೊದಲು ಪರೀಕ್ಷಿಸಿಕೊಳ್ಳಬೇಕು. ಬಳಿಕ ಇದನ್ನು ಅಪ್ಲೈ ಮಾಡಬೇಕು. ಇದನ್ನು ಕೂದಲು ವಾಶ್ ಮಾಡುವಾಗ, ಬಾಳೆಹಣ್ಣು ಮತ್ತು ಇತರ ಪದಾರ್ಥಗಳು ಕೂದಲಿಗೆ ಅಂಟಿಕೊಳ್ಳದಂತೆ, ಸ್ವಚ್ಛವಾಗಿ ಹೇರ್ ವಾಶ್ ಮಾಡಬೇಕು. ಆಗಲೇ ಕೂದಲು ಆರೋಗ್ಯಕರವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಮತ್ತು ಹೇರ್ ಪ್ಯಾಕ್ ಹಾಕುವ ಮುನ್ನ ನಿಮ್ಮ ಕೂದಲಲ್ಲಿ ಎಣ್ಣೆ ಅಂಶ ಇರಬಾರದು.