Spiritual News: ಜೀವನವನ್ನು ಯಾವ ರೀತಿ ಜೀವಿಸಬೇಕು ಅನ್ನೋ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಹಣದ ಉಳಿತಾಯ, ಹಣ ವ್ಯಯಿಸುವುದು ಹೇಗೆ ಅಂತಲೂ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಖರ್ಚು ಕಡಿಮೆ ಮಾಡಿ: ಚಾಣಕ್ಯರ ಹೇಳಿಕೆ ಪ್ರಕಾರ, ನಮಗೆ ಯಾವ ವಸ್ತು ಬೇಕೋ, ಅಂಥ ವಸ್ತುಗಳನ್ನು ಮಾತ್ರ ಖರೀದಿಸಬೇಕು. ಅದನ್ನು ಬಿಟ್ಟು ಕಂಡ ಕಂಡಿದ್ದನ್ನು ಖರೀದಿಸಲು ನಮ್ಮ ಹಣವನ್ನು ವ್ಯಯಿಸಬಾರದು ಅಂತಾರೆ ಚಾಣಕ್ಯರು. ನೀವೇನಾದರೂ ಸಿಕ್ಕ ಸಿಕ್ಕ ವಸ್ತುಗಳನ್ನು ಖರೀದಿಸಲು ಹಣ ಖರ್ಚು ಮಾಡಿದರೆ, ಮುಂದೊಂದು ದಿನ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಆಗ ಇನ್ನೊಬ್ಬರ ಬಳಿ ಸಾಲ ಕೇಳುವ ಸ್ಥಿತಿ ಬರುತ್ತದೆ ಅಂತಾರೆ ಚಾಣಕ್ಯರು.
ಧರ್ಮ ಮಾರ್ಗದಲ್ಲಿ ಸಂಪತ್ತನ್ನು ಗಳಿಸಬೇಕು: ನಾವು ಕಷ್ಟಪಟ್ಟು ದುಡಿದರೆ, ಆ ದುಡ್ಡು ನಮಗೆ ಸಕಲ ಸಮಯಕ್ಕೂ ಒದಗಿ ಬರುತ್ತದೆ. ಆದರೆ ಅದೇ ದುಡ್ಡನ್ನನು ನಾವು ಮೋಸ ಮಾಡಿ ಗಳಿಸಿದರೆ, ಅಂಥ ದುಡ್ಡು ನಮ್ಮ ಕೆಡುಕು ಮಾಡುತ್ತದೆ. ಎಷ್ಟೋ ಜನ ಲಂಚ ತೆಗೆದುಕೊಂಡು, ಹಣ ಮಾಡುತ್ತಾರೆ. ಅದರಿಂದ ಮಜಾ ಮಾಡಬಹುದು ಎಂದುಕೊಳ್ಳುತ್ತಾರೆ. ಕೊನೆಗೆ ಆ ಹಣ ಅವರ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಅಡ್ಡ ದಾರಿ ಹಿಡಿದು ಗಳಿಸಿದ ದುಡ್ಡು, ಆಸ್ಪತ್ರೆ ಪಾಲಾಗುತ್ತದೆ.
ದಾನ ಮಾಡುವ ಗುಣವನ್ನೂ ಮೈಗೂಡಿಸಿಕೊಳ್ಳಿ: ದುಡಿದ ದುಡ್ಡಿನಲ್ಲಿ ಕೊಂಚವಾದರೂ ಹಣವನ್ನು ನೀವು ಬಡವರಿಗೆ ದಾನ ಮಾಡುವುದನ್ನು ಕಲಿಯಿರಿ. ನಿರ್ಗತಿಕರಿಗೆ ಊಟ ಕೊಡಿಸಿ, ಕೊಂಚವಾದರೂ ದಾನದ ಮೂಲಕ ಖರ್ಚು ಮಾಡಿ. ಆದರೆ ನಿಮ್ಮ ಬಳಿಯೇ ಹಣವಿಲ್ಲದಿದ್ದಾಗ, ಇನ್ನೊಬ್ಬರಿಗೆ ದಾನ ಮಾಡುವ ಅವಶ್ಯಕತೆ ಇಲ್ಲ. ಆದರೆ ನೀವು ದಾನ ಮಾಡುವ ಗುಣ ಹೊಂದಿದ್ದರೆ, ದೇವರು ನಿಮ್ಮ ಬಳಿ ದಾನ ಮಾಡುವಷ್ಟು ಹಣವಿರುವಂತೆ, ಕೃಪೆ ತೋರುತ್ತಾನೆ.
ದೇವರ ಚಿತ್ರವಿರುವ ಪೆಂಡೆಂಟ್ ಧರಿಸಬಾರದು ಅಂತಾ ಹೇಳುವುದೇಕೆ ಗೊತ್ತಾ..?