ಹೊಟ್ಟೆ ಕ್ಲೀನ್ ಆಗಿದ್ದರೆ, ನಮಗೆ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ಕೂದಲಿನ ಆರೋಗ್ಯ, ತ್ವಚೆಯ ಆರೋಗ್ಯ, ಲಿವರ್, ಹೃದಯದ ಆರೋಗ್ಯ ಸೇರಿ ಹಲವು ಭಾಗಗಳು ಆರೋಗ್ಯವಾಗಿರುತ್ತದೆ. ಹಾಗಾದ್ರೆ ಪ್ರತಿದಿನ ನಿಮ್ಮ ಹೊಟ್ಟೆ ಸರಿಯಾಗಿ ಕ್ಲೀನ್ ಆಗಬೇಕು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ದೇಹದಲ್ಲಿ ರಕ್ತ ಕಡಿಮೆಯಾದ್ರೆ ಅದನ್ನ ತಿಳಿಯುವುದು ಹೇಗೆ..? ಅದಕ್ಕೆ ಪರಿಹಾರವೇನು..?
ರಾತ್ರಿ ಊಟವಾದ ಬಳಿಕ, ಬೆಚ್ಚಗಿನ ಹಾಲಿಗೆ, ಕೊಂಚ ತುಪ್ಪ ಬೆರೆಸಿ ಕುಡಿಯಿರಿ. ಇದರಿಂದ ಬೆಳಿಗ್ಗೆ ಯಾವುದೇ ತೊಂದರೆ ಇಲ್ಲದೇ ಹೊಟ್ಟೆ ಕ್ಲೀನ್ ಆಗುತ್ತದೆ. ಅಥವಾ ನೀವು ಮೂರು ತಿಂಗಳುಗಳ ಕಾಲ, ತ್ರಿಫಲಾ ಚೂರ್ಣವನ್ನು ತೆಗೆದುಕೊಳ್ಳಿ. ಆಯುರ್ವೇದಿಕ ವೈದ್ಯರ ಬಳಿ ನಿಮ್ಮ ಆರೋಗ್ಯ ಚೆಕ್ ಮಾಡಿಸಿ, ನಿಮ್ಮ ದೇಹದ ಪ್ರಕೃತಿಗೆ ಸಂಬಂಧಿಸಿದಂತೆ, ತ್ರಿಫಲಾ ಚೂರ್ಣವನ್ನು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಅಂತಾ ಕೇಳಿ, ತೆಗೆದುಕೊಳ್ಳಿ.
ಇನ್ನು ಚಿಕ್ಕ ಮಕ್ಕಳಿಗೆ ಸರಿಯಾಗಿ ಮಲ ವಿಸರ್ಜನೆಯಾಗದಿದ್ದಲ್ಲಿ, ಅವರಿಗೆ ನೆಲ್ಲಿಕಾಯಿ ತಿನ್ನಲು ಕೊಡಿ. ಇನ್ನು ಶಿಶುಗಳಿಗೆ ಸರಿಯಾಗಿ ಮಲ ವಿಸರ್ಜನೆಯಾಗದಿದ್ದಲ್ಲಿ, ನೀರನ್ನು ಕುದಿಸಿ, ಅದಕ್ಕೆ ಕೊಂಚ ಸೋಂಪು ಹಾಕಿ ಚೆನ್ನಾಗಿ ಕುದಿಸಿ, ಕಶಾಯ ಮಾಡಿ. ಒಂದು ಗಂಟೆಗೊಮ್ಮೆ, ಎರಡೆರಡು ಚಮಚ ಸೋಂಪಿನ ಕಶಾಯ ಕುಡಿಸಿ. ಒಂದು ದಿನ 10 ಚಮಚ ಕಶಾಯ ಕುಡಿಸಿದರೆ ಸಾಕು. ಅದು ಬೇಗ ರಿಸಲ್ಟ್ ಕೊಡುತ್ತದೆ. ಆದ್ರೆ ನಿಮ್ಮ ಮಗುವಿಗೆ ಎಷ್ಟೇ ಮನೆ ಮದ್ದು ಮಾಡಿದರೂ ಮಲ ವಿಸರ್ಜನೆಯಾಗದಿದ್ದಲ್ಲಿ, ವೈದ್ಯರ ಬಳಿ ಚಿಕಿತ್ಸೆ ಕೊಡಿಸಿ.
ರಾತ್ರಿ ಊಟ ಮಾಡಿದ ಬಳಿಕ ಈ ತಪ್ಪನ್ನ ಎಂದಿಗೂ ಮಾಡಬೇಡಿ..
ಇನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿಯುವುದರಿಂದ ಮಲ ವಿಸರ್ಜನೆ ಸರಿಯಾಗಿ ಆಗುತ್ತದೆ. ಆದ್ರೆ ಕೆಲವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ, ಟೀ ಕುಡಿಯುತ್ತಾರೆ., ಯಾಕಂದ್ರೆ ಅವರಿಗೆ ಕಾಫಿ, ಅಥವಾ ಟೀ ಕುಡಿಯದಿದ್ದಲ್ಲಿ, ಹೊಟ್ಟೆ ಖಾಲಿಯಾಗುವುದಿಲ್ಲ ಎಂಬ ಭ್ರಮೆ ಇರುತ್ತದೆ. ಆದ್ರೆ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ, ಕಾಫಿ ಕುಡಿಯುವುದು ವಿಷ ಕುಡಿಯುವುದಕ್ಕೆ ಸಮ. ಹಾಗಾಗಿ ಬೆಚ್ಚಗಿನ ನೀರು ಕುಡಿದರೂ ಸಹ, ನಿಮ್ಮ ಹೊಟ್ಟೆಯ ಸಮಸ್ಯೆಗೆ ಮುಕ್ತಿ ಸಿಗುತ್ತದೆ.