ನಮಗೆ ಎಲ್ಲರೂ ಗೌರವಿಸಬೇಕು. ಯಾರೂ ಅವಮಾನಿಸಬಾರದು. ನಮ್ಮ ಬೆಲೆ ಏನು ಅನ್ನುವುದು, ನಮ್ಮವರಿಗೆ ಗೊತ್ತಾಗಬೇಕು. ಇತ್ಯಾದಿ ಆಸೆಗಳು ನಿಮ್ಮಲ್ಲಿದ್ದರೆ, ನೀವು ಕೆಲ ನಿಯಮಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ನಾವಿಂದು ಮೊದಲ ಭಾಗದಲ್ಲಿ 6 ಟ್ರಿಕ್ಸ್‌ಗಳ ಬಗ್ಗೆ ವಿವರಣೆ ನೀಡಲಿದ್ದೇವೆ.
ಮೊದಲನೇಯದ್ದು, ನಿಮಗೆ ಯಾರ ಬಳಿಯಾದರೂ ನೀವು ಸರಿ ಅನ್ನೋದನ್ನ ಪ್ರೂವ್ ಮಾಡಬೇಕೆಂದಲ್ಲಿ, ವಾದಿಸಬೇಡಿ, ಬದಲಾಗಿ ಆ್ಯಕ್ಷನ್‌ನಲ್ಲಿ ಹೇಳಿ. ಅಂದ್ರೆ ನೀವೇ ಸರಿ ಅನ್ನೋದನ್ನ ಎದುರಿಗಿದ್ದರು, ನೋಡಿ ಅರಿಯುವ ರೀತಿ, ನಿಮ್ಮ ನಡತೆ ಇರಬೇಕು. ನಿಮ್ಮ ನಡುವಳಿಕೆ, ನೀವು ಜೀವಿಸುವ ರೀತಿ ನೋಡಿ ಎದುರಿಗಿರುವವರು, ನೀವು ಸರಿ ಎನ್ನುವುದನ್ನ ಅರಿತುಕೊಳ್ಳಬೇಕೇ ಹೊರತು, ನೀವು ಮಾಡುವ ವಾದವನ್ನು ಕೇಳಿ ಅಲ್ಲ.
ಎರಡನೇಯದ್ದು, ಯಾವತ್ತೂ ನಿಮ್ಮ ಮೇಲಿನವರಿಗೆ ಬಕೇಟ್ ಹಿಡಿಯಬೇಡಿ. ಅಥವಾ ನೀವು ಅವರಿಗಿಂತ ಹೆಚ್ಚು ಬುದ್ಧಿವಂತರು ಅಂತಲೂ ತೋರಿಸಿಕೊಳ್ಳಬೇಡಿ. ನೀವು ಹೆಚ್ಚು ಬಕೇಟ್ ಹಿಡಿದರೆ, ಆಫೀಸಿನಲ್ಲಿ ನಿಮ್ಮ ಸಹೋದ್ಯೋಗಿಗಳ ಮುಂದೆ ನಿಮ್ಮ ಗೌರವ ಕಡಿಮೆಯಾಗುತ್ತದೆ. ಅದೇ ರೀತಿ ಬಾಸ್ ಎದುರು, ನೀವು ಅವರಿಗಿಂತ ಸ್ಮಾರ್ಟ್ ಅನ್ನೋದನ್ನ ತೋರಿಸಿದರೆ, ಅವರು ನಿಮ್ಮನ್ನು ಕೆಲಸದಿಂದ ಕಿತ್ತೆಸೆಯುವ ನಿರ್ಧಾರವನ್ನೂ ತೆಗೆದುಕೊಳ್ಳಬಹುದು. ಈಗಲೂ ನಿಮ್ಮ ಗೌರವ ಕಡಿಮೆಯಾಗುತ್ತದೆ.
ಹಾಗಾಗಿ ನೀವು ಕಲಿಯುವುದು ತುಂಬಾ ಇದೆ ಅನ್ನೋ ರೀತಿ ಇರಿ. ನಿಮ್ಮ ಬಾಸ್ ಮುಂದೆ ಓವರ್ ಸ್ಮಾರ್ಟ್ ಆಗಿರದೇ, ಅವರೇ ನಿಮಗಿಂತ ಬುದ್ಧಿವಂತರು, ತಿಳುವಳಿಕೆಯುಳ್ಳವರು ಅನ್ನೋ ರೀತಿ ಇರಿ. ಆಗ ನಿಮ್ಮ ಬಗ್ಗೆ ಅವರಿಗೆ ಉತ್ತಮ ಭಾವನೆ ಮೂಡುತ್ತದೆ. ಈ ಹುಡುಗನಿಗೆ ಕೆಲಸ ಕಲಿಯುವ ಆಸಕ್ತಿ ಇದೆ ಎಂದು ತಿಳಿಯುತ್ತದೆ.
ಮೂರನೇಯದ್ದು, ಸ್ವಾವಲಂಬಿಯಾಗಿರುವುದನ್ನು ಕಲಿಯಿರಿ. ಆದಷ್ಟು ನಾವು ಯಾರ ಮೇಲೂ ಅವಲಂಬಿತರಾಗಿರದಂತೆ ನೋಡಿಕೊಳ್ಳಬೇಕು. ನಮ್ಮ ಅನ್ನವನ್ನು ನಾವೇ ಸಂಪಾದಿಸುವ ಅರ್ಹತೆ ನಮಗಿರಬೇಕು. ಯಾಕಂದ್ರೆ ನೀವು ಅನ್ನಕ್ಕಾಗಿ ಯಾರ ಮೇಲಾದರೂ ಡಿಪೆಂಡ್ ಇದ್ದರೆ, ಅವರು ಹೇಳಿದ ಹಾಗೆ ಕೇಳಬೇಕು. ಅಲ್ಲದೇ, ಅವರಿಂದ ಇಲ್ಲಸಲ್ಲದ್ದನ್ನ ಹೇಳಿಸಿಕೊಳ್ಳಬೇಕು. ಹಾಗಾಗಿ ನಿಮ್ಮ ಅನ್ನವನ್ನು ನೀವೇ ಸಂಪಾದಿಸುವ ಅರ್ಹತೆ ಹೊಂದಿ. ಆಗ ನಿಮ್ಮ ಗೌರವ ಹೆಚ್ಚುತ್ತದೆ.
ನಾಲ್ಕನೇಯದ್ದು, ನೀವು ಯಶಸ್ಸು ಹೊಂದಿದ ಮೇಲೆ, ಇದಕ್ಕಾಗಿ ನೀವೆಷ್ಟು ಕಷ್ಟಪಟ್ಟಿದ್ದಿರಿ ಎಂಬುದನ್ನು ಯಾರಲ್ಲಿಯೂ ಹೇಳಿಕೊಳ್ಳಬೇಡಿ. ಬದಲಾಗಿ ಜನರಿಗೆ ನಿಮ್ಮ ಯಶಸ್ಸಷ್ಟೇ ಕಾಣಿಸುವಂತೆ ಇರಿ. ಯಾಕಂದ್ರೆ ನೀವು ಯಶಸ್ಸು ಗಳಿಸಲು ಏನೆಲ್ಲ ಕಷ್ಟಪಟ್ಟಿದ್ದಿರಿ ಎಂಬುದನ್ನು ಎಲ್ಲರಿಗೂ ಹೇಳುತ್ತ ಹೋದರೆ, ಯಾರೂ ನಿಮ್ಮನ್ನು ಗೌರವಿಸುವುದಿಲ್ಲ. ಹಾಗಾಗಿ ನೀವು ತುಂಬಾ ಸುಲಭವಾಗಿ ಯಶಸ್ಸು ಗಳಿಸಿದ್ದೀರಿ ಅನ್ನುವ ರೀತಿ ಇರಬೇಕು.
ಐದನೇಯದ್ದು, ಯಾರ ಮೇಲೂ ಹೆಚ್ಚು ವಿಶ್ವಾಸ ಮಾಡಬೇಡಿ. ಹಲವರು ತಮ್ಮ ಸಂಬಂಧಿಕರ ಮೇಲೆ ಅಥವಾ ಸ್ನೇಹಿತರ ಮೇಲೆ ಅಗತ್ಯಕ್ಕಿಂತ ಹೆಚ್ಚು, ವಿಶ್ವಾಸವಿಡುತ್ತಾರೆ. ತಮ್ಮ ಜೀವನದ ಸಿಕ್ರೇಟ್‌ಗಳನ್ನ ಮತ್ತು ಕಷ್ಟವನ್ನು ಎಲ್ಲರಲ್ಲಿಯೂ ಹೇಳಿಕೊಳ್ಳುತ್ತಾರೆ. ಮುಂದೊಂದು ದಿನ ಅದೇ ಸ್ನೇಹಿತರು ಅಥವಾ ಸಂಬಂಧಿಕರು ನಿಮಗೆ ವಿಶ್ವಾಸ ದ್ರೋಹ ಮಾಡಿದರೆಂದಿಟ್ಟುಕೊಳ್ಳಿ, ಆಗ ನಿಮಗಾಗುವ ಬೇಸರವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹಾಗಾಗಿ ಯಾರ ಮೇಲೆಯೂ ಹೆಚ್ಚು ವಿಶ್ವಾಸವಿಟ್ಟು, ನಿಮ್ಮ ಜೀವನದ ಗುಟ್ಟನ್ನು ಹೇಳಬೇಡಿ.
ಇನ್ನುಳಿದ ಟ್ರಿಕ್ಸ್‌ಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..