Recipe: ಇಂದು ನಾವು ವೆಜ್ ಮೊಮೋಸ್ ಹೇಗೆ ಮಾಡೋದು ಎಂದು ತಿಳಿಯೋಣ..
ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಮೈದಾ, ಉಪ್ಪು, ನೀರು, 1 ಸ್ಪೂನ್ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ, ಹಸಿಮೆಣಸು, 3 ಸ್ಪೂನ್ ಎಣ್ಣೆ, 1 ಸ್ಪೂನ್ ಸ್ಪ್ರಿಂಗ್ ಆನಿಯನ್, ಕ್ಯಾರೆಟ್ ತುರಿ, ಕ್ಯಾಬೇಜ್ ತುರಿ ತಲಾ ಒಂದೊಂದು ಕಪ್, ಚಿಟಿಕೆ ಪೆಪ್ಪರ್.
ಮಾಡುವ ವಿಧಾನ: ಮೊದಲು ಮಿಕ್ಸಿಂಗ್ ಬೌಲ್‌ಗೆ ಮೈದಾ ಹಾಕಿ, ಅದಕ್ಕೆ ಉಪ್ಪು, ನೀರು ಹಾಕಿ ಹಿಟ್ಟು ಕಲಿಸಿಕೊಳ್ಳಿ. ಚಪಾತಿ ಹಿಟ್ಟಿನ ಹದಕ್ಕೆ ಇರಲಿ. ಇದಕ್ಕೆ ಕೊಂಚ ಎಣ್ಣೆ ಸವರಿ 30 ನಿಮಿಷ ಹಾಗೆ ಬಿಡಿ.
ಈಗ ಪ್ಯಾನ್ ಬಿಸಿ ಮಾಡಿ, ಎಣ್ಣೆ, ಬೆಳ್ಳುಳ್ಳಿ, ಶುಂಠಿ, ಸ್ಪ್ರಿಂಗ್ ಆನಿಯನ್ ಹಾಕಿ ಹುರಿಯಿರಿ. ಬಳಿಕ ಕ್ಯಾರೇಟ್ ತುರಿ, ಕ್ಯಾಬೇಜ್ ತುರಿ ಹಾಕಿ ಚೆನ್ನಾಗಿ ಬಾಡಿಸಿ. ಬಳಿಕ ಪೆಪ್ಪರ್ ಪುಡಿ, ಉಪ್ಪು ಹಾಕಿ ಚೆನ್ನಾಗಿ ಬಾಡಿಸಿ, ನೀವು ಮತ್ತೊಮ್ಮೆ ಕೊಂಚ ಸ್ಪ್ರಿಂಗ್ ಆನಿಯನ್ ಸೇರಿಸಿಕೊಳ್ಳಬಹುದು. ಹೂರಣ ರೆಡಿ.
ಈಗ ರೆಡಿಮಾಡಿಟ್ಟುಕೊಂಡ ಮೊಮೊಸ್ ಹಿಟ್ಟಿನಿಂದ ಸಣ್ಣ ಉಂಡೆ ಮಾಡಿಕೊಂಡು, ಪೂರಿಯಂತೆ ಲಟ್ಟಿಸಿ, ಅದರಲ್ಲಿ ಹೂರಣ ತುಂಬಿಸಿ, ಮೊಮೋಸ್ ಶೇಪ್ ಬರುವಂತೆ ಮಾಡಿ. ಬಳಿಕ ಸ್ಟೀಮರ್‌ಗೆ ಹಾಕಿ, 10 ನಿಮಿಷ ಮಂದ ಉರಿಯಲ್ಲಿ ಸ್ಟೀಮ್ ಮಾಡಿದರೆ, ಮೊಮೋಸ್ ರೆಡಿ. ಮೊಮೋಸ್ ಚಟ್ನಿಯೊಂದಿಗೆ ಇದನ್ನು ಸವಿಯಿರಿ.
ಸೂರ್ಯ ನಮಸ್ಕಾರವನ್ನು ಸಂಜೆಯ ಹೊತ್ತಲ್ಲಿ ಮಾಡುವುದು ತಪ್ಪೋ..? ಸರಿಯೋ..?