Wednesday, November 29, 2023

Latest Posts

ದರ್ಶನ್ ದಾಂಪತ್ಯ: ಗಾಳಿ ಸುದ್ದಿಗೆ ಪತ್ನಿ ವಿಜಯಲಕ್ಷ್ಮಿ ಬ್ರೇಕ್..!

- Advertisement -

ಇತ್ತೀಚೆಗೆ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ೫೦ನೇ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ದುರ್ಯೋಧನನಾಗಿ ಡಿ ಬಾಸ್ ಅಬ್ಬರಿಸಿದ್ದಾರೆ. ಈ ನಡುವೆ ಡಿ ಬಾಸ್ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿದ್ದ ಗಾಳಿ ಸುದ್ದಿಯೊಂದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು.

ನಿನ್ನೆ ದರ್ಶನ್ ವಿರುದ್ಧ ವಿಜಯಲಕ್ಷ್ಮಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಅನ್ನೋ ವದಂತಿ ಹರಿದಾಡಿತ್ತು. ಸದ್ಯ ಈ ರೂಮರ್ ಗೆ ದರ್ಶನ ಪತ್ನಿ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಒಂದನ್ನು ಮಾಡಿರುವ ಅವರು, ವದಂತಿಗಳೆಲ್ಲವೂ ಆಧಾರರಹಿತ ಅಂತ ಹೇಳಿದ್ದಾರೆ. ಈ ಮೂಲಕ ಎಲ್ಲಾ ರೂಮರ್ ಗಳಿಗೆ ಬ್ರೇಕ್ ಹಾಕಿದ್ದಾರೆ.

- Advertisement -

Latest Posts

Don't Miss