ಚಿಕ್ಕಮಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿದ್ದ ಗೌರಿಗದ್ದೆಯ ದತ್ತಾಶ್ರಮದ ವಿನಯ್ ಗುರೂಜಿ ಇನ್ನು ಮುಂದೆ ಗುಹೆ ವಾಸ ಮಾಡಲಿದ್ದು, ತಮ್ಮ ಲಕ್ಷಾಂತರ ಭಕ್ತರಿಂದ ದೂರ ಉಳಿಯೋ ನಿರ್ಧಾರ ತೆಗೆದುಕೊಂಡಿದ್ದಾರೆ.
ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಗೌರಿಗದ್ದೆಯ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಇನ್ನು ಮುಂದೆ ಗುಹೆಯಲ್ಲಿ ವಾಸ ಮಾಡೋ ನಿರ್ಧಾರ ತೆಗೆದುಕೊಂಡು ಧ್ಯಾನಕ್ಕೆ ಕುಳಿತುಕೊಳ್ಳಲಿದ್ದಾರೆ. ಇನ್ನು ಇವರನ್ನು ಅಪಾರವಾಗಿ ನಂಬೋ ರಾಜಕಾರಣಿಗಳು ಹಾಗೂ ಭಕ್ತರಿಂದ ದೂರ ಉಳಿದು ಏಕಾಂತ ಧ್ಯಾನದಲ್ಲಿ ತಲ್ಲೀನರಾಗಲಿದ್ದಾರೆ.
ಇನ್ನು ವಿನಯ್ ಗುರೂಜಿ ಗುಹೆ ವಾಸಕ್ಕೆ ದತ್ತಾಶ್ರಮದಲ್ಲೇ ಗುಹೆ ನಿರ್ಮಾಣ ಕಾರ್ಯ ಸಾಗುತ್ತಿದೆ. ಧ್ಯಾನಕ್ಕೆ ಧಕ್ಕೆಯುಂಟಾಗದಂತೆ ಗುಹೆ ಸುತ್ತಲೂ ಸಿಮೆಂಟ್ ನಿಂದ ಮುಚ್ಚಲು ಗುರೂಜಿ ಸೂಚಿಸಿದ್ದಾರೆ. ಇನ್ನೊಂದು ತಿಂಗಳೊಳಗೆ ಸಂಪೂರ್ಣವಾಗಲಿದೆ.
ಹೀಗೆ ಮಾಡದಿದ್ರೆ ಇನ್ನು ಮುಂದೆ ರೇಷನ್ ಸಿಗೋದಿಲ್ಲ…!! ಮಿಸ್ ಮಾಡದೇ ಈ ವಿಡಿಯೋ ನೋಡಿ