Shopping: ಇಂದಿನ ಕಾಲದಲ್ಲಿ ಬ್ಲೌಸ್ ಡಿಸೈನ್ ಗೆ ತುಂಬಾ ಬೇಡಿಕೆ ಇದೆ. ಎಲ್ಲಾ ಕಲರ್ ಸೀರೆಗೆ ಮ್ಯಾಚ್ ಆಗುವ ವೆರೈಟಿ ವೆರೈಟಿ ಡಿಸೈನ್‌ಗಳಿರುವ ಬ್ಲೌಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ನಾವು ಇಂದು ಹೀಗೆ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಯಾವ ಅಂಗಡಿಗೆ ಭೇಟಿ ನೀಡಬಹುದು ಎಂದು ಹೇಳಲಿದ್ದೇವೆ.
ಬೆಂಗಳೂರಿನ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಎಸ್.ಕೆ.ಫ್ಯಾಶನ್ಸ್‌ನಲ್ಲಿ ಈ ಡಿಸೈನರ್ ಬ್ಲೌಸ್ ಅಂಗಡಿ ಇದೆ. ಇಲ್ಲಿ ವಿವಿಧ ರೀತಿಯ ಬ್ಲೌಸ್‌ಗಳು ಸಿಗುತ್ತದೆ. ನೀವು ಸೀರೆ ಖರೀದಿಸಿ, ಅದಕ್ಕೆ ಬ್ಲೌಸ್ ಹೊಲಿಸಿಕೊಳ್ಳಬೇಕು ಅಂದ್ರೂನು ನಿಮಗೆ ಎರಡರಿಂದ ಮೂರು ಸಾವಿರ ರೂಪಾಯಿ ಬೇಕಾಗುತ್ತದೆ. ಆದರೆ ನೀವು ಈ ಅಂಗಡಿಯಲ್ಲಿ ಬ್ಲೌಸ್ ಖರೀದಿಸಿದರೆ, ನಿಮ್ಮ ಸೀರೆಗೆ ಮ್ಯಾಚ್ ಆಗುವ ಬ್ಲೌಸ್ ನಿಮಗೆ ಕಡಿಮೆ ದರದಲ್ಲಿ ಸಿಗುತ್ತದೆ.
ಈ ಅಂಗಡಿಯಲ್ಲಿ 2 ಸಾವಿರಕ್ಕೂ ಹೆಚ್ಚು ಬ್ಲೌಸ್ ಕಲೆಕ್ಷನ್ ಇದೆ. ಸಿಂಪಲ್ ಬ್ಲೌಸ್, ಕುಂದನ್ ವರ್ಕ್ ಇರುವ ಬ್ಲೌಸ್, ರೇಷ್ಮೆ ಬಟ್ಟೆ ಬ್ಲೌಸ್, ಟ್ರೆಂಡಿ ಬ್ಲೌಸ್, ಕಾಟನ್ ಬ್ಲೌಸ್, ಫುಲ್ ಸ್ವೀವ್ಸ್, ಸ್ಲೀವ್ ಲೆಸ್, ಹೀಗೆ ಹಲವು ವಿಧದ ಬ್ಲೌಸ್‌ಗಳು ಇಲ್ಲಿ ಸಿಗುತ್ತದೆ. ಅಲ್ಲದೇ ಕಪ್ ಇರುವ ಬ್ಲೌಸ್ ಜೊತೆ ಕಪ್ಸ್ ಇಲ್ಲದಿರುವ ಬ್ಲೌಸ್ ಕೂಡ ಇಲ್ಲಿ ಲಭ್ಯವಿದೆ.
ಇನ್ನು ನಿಮ್ಮ ಬಳಿ ಲೆಹೆಂಗಾ ಇದೆ. ಆದ್ರೆ ಅದರ ಬ್ಲೌಸ್ ಸಿಕ್ಕಾಪಟ್ಟೆ ಹೆವಿ ವರ್ಕ್ ಇರೋದಾಗಿದೆ ಅಂದ್ರೆ, ನೀವು ಅದಕ್ಕೆ ಮ್ಯಾಚ್ ಆಗುವ ಹೆಚ್ಚು ವರ್ಕ್ ಇಲ್ಲದೇ, ಸಿಂಪಲ್ ಆಗಿರುವ ಬ್ಲೌಸ್ ಅನ್ನು ಇಲ್ಲಿ ಖರೀದಿಸಬಹುದು. ಇಲ್ಲಿ ವೆಲ್ವೆಟ್ ಬ್ಲೌಸ್ ಕೂಡ ಸಿಗುತ್ತದೆ. ಇಂಥ ಬ್ಲೌಸ್‌ಗಳು ಲೆಹೆಂಗಾಗಳಿಗೆ ಮ್ಯಾಚ್ ಆಗುತ್ತದೆ. ಇಲ್ಲಿ ಸಿಗುವ ಬ್ಲೌಸ್‌ಗಳ ಕ್ವಾಲಿಟಿ ಕೂಡ ಉತ್ತಮವಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..