Friday, November 22, 2024

Latest Posts

ದೇವರಲ್ಲಿ ನಾವು ಅದು ಕೊಡು, ಇದು ಕೊಡು ಎಂದು ಬೇಡಬಾರದಂತೆ.. ಯಾಕೆ ಗೊತ್ತಾ..?

- Advertisement -

Spiritual: ಯಾವುದಕ್ಕೆ ಕೊನೆ ಇದ್ದರೂ, ಮನುಷ್ಯನ ಆಸೆಗೆ ಮಾತ್ರ ಎಂದಿಗೂ ಕೊನೆಯಾಗುವುದಿಲ್ಲ. ಸಾಯುವವರೆಗೂ ಏನಾದರೂ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಮನುಷ್ಯ ದೇವರಲ್ಲಿ ನನಗೆ ಕಾರು ಕೊಡು, ಬಂಗಲೆ ಕೊಡು, ದುಡ್ಡು ಕೊಡು, ಆಸ್ತಿ ಕೊಡು, ಹೀಗೆ ಹಲವಾರು ಬೇಡಿಕೆಗಳನ್ನು ಇಡುತ್ತಾನೆ. ಆದರೆ ದೇವರಲ್ಲಿ ನಾವು ಏನನ್ನೂ ಕೊಡು ಎಂದು ಬೇಡಬಾರದಂತೆ. ಯಾಕೆ ಹೀಗೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಹಿರಿಯರ ಪ್ರಕಾರ, ನಾವು ದೇವರಲ್ಲಿ ಏನನ್ನೂ ಬೇಡಬಾರದಂತೆ. ಈ ಮೊದಲೇ ಹೇಳಿದರೆ, ಹಲವರು ದೇವರಲ್ಲಿ, ನನಗೆ ಬೇಗ ಮದುವೆ ಮಾಡಿಸು, ಮಗು ವಿದ್ಯಾಭ್ಯಾಸದಲ್ಲಿ ಮುಂದೆ ಬರುವಂತೆ ಮಾಡು, ಒಳ್ಳೆ ಮನೆ ಕಟ್ಟಿಸುವ ಅವಕಾಶ ಕೊಡು, ಒಳ್ಳೆ ಕೆಲಸ ಸಿಗುವ ಹಾಗೆ ಮಾಡು, ಸಿಕ್ಕ ಕೆಲಸದಲ್ಲಿ ಪ್ರಮೋಷನ್ ಸಿಗುವ ಹಾಗೆ ಮಾಡು. ಹೀಗೆ ಹತ್ತು ಹಲವು ಪ್ರಾರ್ಥನೆಗಳನ್ನು ಮಾಡುತ್ತೇವೆ.

ಆದರೆ ದೇವರು ನಮಗಾಗಿ ಇದಕ್ಕಿಂತ ಉತ್ತಮವಾದ ವ್ಯವಸ್ಥೆ ಮಾಡಿರಬಹುದು. ನೀವು ಕೇಳಿದ್ದಕ್ಕಿಂತಲೂ ಉತ್ತಮ ಜೀವನ ಕೊಡಲು ಅವನು ನಿರ್ಧರಿಸಿರಬಹುದು. ಆದರೆ, ನೀವು ಅದಕ್ಕಿಂತ ಚಿಕ್ಕ, ಅದಕ್‌ಕಿಂತ ಕಡಿಮೆ ಮಟ್ಟದ ಪ್ರಾರ್ಥನೆ ಮಾಡಿ, ನಿಮ್ಮ ಲಕ್‌ನ್ನು ನೀವೇ ಕಳೆದುಕೊಳ್ಳುತ್ತೀರಿ. ದೇವರು ಎಂದರೆ ಪ್ರಕೃತಿ. ಆ ಪ್ರಕೃತಿಗೆ ನಮಗೆ ಏನು ಕೊಡಬೇಕು ಮತ್ತು ಏನು ಕೊಡಬಾರದು ಅನ್ನೋದು ಗೊತ್ತಿರುತ್ತದೆ. ಹಾಗಾಗಿಯೇ ಹಿರಿಯರು, ದೇವರು ಹಣೆಬರಹದಲ್ಲಿ ಬರೆದ ಹಾಗೆ ಆಗುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ನಾವು ದೇವರಲ್ಲಿ ಏನನ್ನೂ ಕೇಳಬಾರದು. ಅದು ಪ್ರಕೃತಿಗೆ ವಿರುದ್ಧವಾದದ್ದು.

ನಾವು ಜೀವನದಲ್ಲಿ ಕಷ್ಟಪಟ್ಟು, ನಿಯತ್ತಿನಿಂದ ಇದ್ದರೆ, ನಮ್ಮ ಹಣೆಬರಹ ಅತ್ಯುತ್ತಮವಾಗಿರುತ್ತದೆ. ದೇವರಲ್ಲಿ ಬೇಡುವ ಬದಲು, ನಿಮಗೇನು ಬೇಕೋ ಅದನ್ನು ಪಡೆಯಲು, ನೀವು ಕಷ್ಟ ಪಡಿ. ನಿಯತ್ತಾಗಿರಿ. ನಿಮಗೆ ಲೇಟ್ ಆದರೂ, ಅತ್ಯುತ್ತಮ ಯಶಸ್ಸು ಸಿಗಬಹುದು. ಏಕೆಂದರೆ, ಸತ್ಯವಂತರಿಗೆ, ಕಷ್ಟಪಡುವವರಿಗೆ ಎಂದಿಗೂ ದೇವರು ಕೈ ಬಿಡುವುದಿಲ್ಲ.

ನಮ್ಮ ಆತ್ಮವಿಶ್ವಾಸದಿಂದಲೇ, ನಾವು ನಮ್ಮ ಜೀವನದ ಗುರಿ ತಲುಪಬೇಕೆ ಹೊರತು, ದೇವರಿಗೆ ಹರಕೆ ಹೊತ್ತಿದ್ದೇನೆ. ದೇವರಿಗೆ ಬೇಡಿದ್ದೇನೆ ಅವನೆಲ್ಲ ನೋಡಿಕೊಳ್ಳುತ್ತಾನೆ ಎಂದು ಹೇಳಿ, ನಮ್ಮ ಕೆಲಸ ನಾವು ಮಾಡದೇ, ಬಿಂದಾಸ್ ಆಗಿ ಇರುವುದು ಮೂರ್ಖತನ. ಶ್ರಮಪಡದೇ, ಯಾರಿಗೂ ಯಶಸ್ಸು ಸಿಗುವುದಿಲ್ಲ.

ಬಿಸಿ ಬಿಸಿ ನೀರಿನ ಸ್ನಾನ ಮಾಡುವುದರಿಂದ ಹೃದಯಾಘಾತವಾಗುತ್ತದೆಯಾ..?

ನುಗ್ಗೇಕಾಯಿ ಸೇವನೆಯಿಂದ ಆಗುವ ಆರೋಗ್ಯ ಲಾಭಗಳೇನು..?

ಅಕ್ಕಿ ತೊಳೆದ ನೀರನ್ನು ಬಳಸುವುದರಿಂದ ಎಷ್ಟೆಲ್ಲ ಚಮತ್ಕಾರಿ ಉಪಯೋಗವಿದೆ ಗೊತ್ತಾ..?

- Advertisement -

Latest Posts

Don't Miss