Health Tips: ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಜನರಿಗೆ ಬೇಕಾದ ಆರೋಗ್ಯ ಮಾಹಿತಿಯನ್ನು ನೀಡಲಾಗುತ್ತಿದೆ. ಕ್ಯಾನ್ಸರ್, ಚರ್ಮದ ರೋಗ, ಸ್ತ್ರೀ ರೋಗ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ, ಹಲವು ಮಾಹಿತಿಯನ್ನು ನೀಡಲಾಗಿದೆ. ಅದೇ ರೀತಿ ಇಂದು ನಾವು ಪೈಲ್ಸ್ ಮತ್ತು ಫಿಸರ್ ಅಂದ್ರೇನು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ವೈದ್ಯರು ಹೇಳುವ ಪ್ರಕಾರ, ಪೈಲ್ಸ್ ಬಂದವರು ಲೇಸರ್ ಚಿಕಿತ್ಸೆ ಮಾಡಿಸಿಕೊಂಡರೆ, ಮತ್ತೆ ಪೈಲ್ಸ್ ಬರುತ್ತದೆ. ಏಕೆಂದರೆ, ಲೇಸರ್ ಚಿಕಿತ್ಸೆ ಮಾಡಿದ್ರೆ, ಪೈಲ್ಸ್ ಗಡ್ಡೆ ತೆಗಿಯಲಾಗುವುದಿಲ್ಲ. ಬದಲಾಗಿ, ಪೈಲ್ಸ್ ಸುಡಲಾಗುತ್ತದೆ. ಹಾಗಾಗಿ ಕೆಲ ಕಾಲದ ಬಳಿಕ, ಪೈಲ್ಸ್ ಮತ್ತೆ ಉದ್ಭವಿಸುವ ಸಾಧ್ಯತೆ ಇರುತ್ತದೆ. ಆದರೆ ಓಪನ್ ಸರ್ಜರಿ ಮಾಡಿದಾಗ, ಇಡೀ ಪೈಲ್ಸ್ ಗಡ್ಡೆಯಲ್ಲೇ ತೆಗೆದು ಬಿಡುತ್ತೇವೆ. ಆಗ ಮತ್ತೆ ಪೈಲ್ಸ್ ಹುಟ್ಟಿಕೊಳ್ಳುವುದಿಲ್ಲ.
ಇನ್ನು ಪೈಲ್ಸ್ ಯಾಕೆ ಬರುತ್ತದೆ ಅನ್ನೋ ಬಗ್ಗೆ ನಾವು ತಿಳಿದುಕೊಳ್ಳಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ, ಪೈಲ್ಸ್ ಬರುತ್ತದೆ. ಪೈಲ್ಸ್ ಬಾರದಂತೆ ತಡೆಯಲು ನಾವು ಸಾಕಷ್ಟು ನೀರು ಕುಡಿಯಬೇಕು ಎನ್ನುತ್ತಾರೆ ವೈದ್ಯರು. ಪ್ರತಿದಿನ ಪುರುಷರು 4ಿರಿಂದ 5 ಲೀಟರ್ ನೀರು ಮತ್ತು ಮಹಿಳೆಯರು 3 ಲೀಟರ್ ನೀರಿನ ಸೇವನೆ ಮಾಡಿದರೆ, ಪೈಲ್ಸ್ ಬರುವ ಸಾಧ್ಯತೆ ಕಡಿಮೆ ಇರುತ್ತದೆ.
ಇನ್ನು ದೇಹದಲ್ಲಿ ನೀರಿನಂಶ ಮತ್ತು ನಾರಿನಂಶ ಕಡಿಮೆಯಾದಾಗ, ಮಲವಿಸರ್ಜನೆ ಗಟ್ಟಿಯಾಗುತ್ತದೆ. ಇದನ್ನು ಫಿಶರ್ ಎಂದು ಕರೆಲಾಗುತ್ತದೆ. ಹಾಗಾಗಬಾರದು ಅಂದ್ರೆ, ಚೆನ್ನಾಗಿ ನೀರು ಕುಡಿಯಬೇಕು. ಹೆಚ್ಚು ಹಸಿ ತರಕಾರಿ ತಿನ್ನಬೇಕು. ಪಿಶರ್ ಮತ್ತು ಪೈಲ್ಸ್ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..