Health tips: ಪಾಲಕ್ ಸೊಪ್ಪು, ಮೆಂತ್ಯೆ ಸೊಪ್ಪು, ಸಬ್ಬಸಿಗೆ ಸೊಪ್ಪು, ಹರಿವೆ ಸೊಪ್ಪಿನಲ್ಲಿ ಎಷ್ಟೆಲ್ಲ ಪೋಷಕಾಂಶಗಳಿದೆಯೋ, ಅದೇ ರೀತಿ ನುಗ್ಗೆಸೊಪ್ಪಿನಲ್ಲೂ ಕೂಡ ಸಾಕಷ್ಟು ಪೋಷಕಾಂಶಗಳಿದೆ. ಇಂದು ನಾವು ನುಗ್ಗೆಸೊಪ್ಪನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಏನೇನು ಲಾಭವಾಗಲಿದೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ನುಗ್ಗೆಸೊಪ್ಪಿನಿಂದ ಚಟ್ನಿ, ತಂಬುಳಿ, ಸಾರು ಸೇರಿ ಹಲವು ರುಚಿಕರ ಪದಾರ್ಥಗಳನ್ನು ತಯಾರಿಸಬಹುದು. ನೀವು ವಾರಕ್ಕೆ ಮೂರು ಬಾರಿಯಾದರೂ, ನುಗ್ಗೆಸೊಪ್ಪಿನ ಪದಾರ್ಥ ಮಾಡಿ ಸೇವಿಸಿದ್ದಲ್ಲಿ, ಆರೋಗ್ಯವಾಗಿರುತ್ತೀರಿ. ಸಿಟಿಯಲ್ಲಿರುವ ಹಲವರಿಗೆ ನುಗ್ಗೆಕಾಯಿ ತಿಂದು ಅಭ್ಯಾಸವಿರುತ್ತದೆ ಬಿಟ್ಟರೆ ನುಗ್ಗೆಸೊಪ್ಪೆಂಬ ಸೊಪ್ಪು ಉಂಟು. ಅದರಿಂದ ಪದಾರ್ಥ ತಯಾರಿಸಿ ತಿನ್ನುತ್ತಾರೆ. ಅದು ಆರೋಗ್ಯಕರ ಮತ್ತು ರುಚಿಕರವಾಗಿರುತ್ತದೆ ಅನ್ನೋದು ಕೂಡ ಗೊತ್ತಿಲ್ಲ.
ಆದರೆ ನುಗ್ಗೆಸೊಪ್ಪು ಭರಪೂರ ಆರೋಗ್ಯ ಲಾಭವನ್ನು ಕೊಡುವ ಸೊಪ್ಪಾಗಿದೆ. ಇದು ವಿಟಾಮಿನ್ ಎ, ವಿಟಾಮಿನ್ ಬಿ1, ಬಿ2, ಬಿ3, ಬಿ6, ಕ್ಯಾಲ್ಶಿಯಂ, ಪೊಟ್ಯಾಷಿಯಂ, ಮ್ಯಾಗ್ನಿಷಿಯಂ ಸೇರಿ ಹಲವು ಪೋಷಕಾಂಶಗಳ ಆಗರವಾಗಿದೆ. ನೀವು ನುಗ್ಗೆಸೊಪ್ಪನ್ನು ವಾರಕ್ಕೆ ಮೂರು ಬಾರಿ ತಿಂದರೆ, ನಿಮ್ಮ ಸೌಂದರ್ಯದ ಜೊತೆ ಆರೋಗ್ಯಾಭಿವೃದ್ಧಿಯೂ ಆಗುತ್ತದೆ.
ಇದರಿಂದ ಕೂದಲು ಉದುರುವಿಕೆ, ಬಿಳಿಯಾವುದು ತಪ್ಪುತ್ತದೆ. ಬಿಪಿ- ಶುಗರ್ ಕಂಟ್ರೋಲಿನಲ್ಲಿರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜೀರ್ಣಕ್ರಿಯೆ ಸಮಸ್ಯೆ ನಿವಾರಿಸಿ, ಹೊಟ್ಟೆಯ ಆರೋಗ್ಯ ಉತ್ತಮವಾಗಿರಿಸುತ್ತದೆ. ಬಾಣಂತಿಯರು ಕೂಡ ಹಾಲನ್ನು ಹೆಚ್ಚಿಸಲು, ನುಗ್ಗೆಸೊಪ್ಪನ್ನು ಸೇವಿಸುತ್ತಾರೆ. ಥೈರಾಯ್ಡ್ ಬರದಂತೆ ತಡೆಯಲು ಇದು ರಾಮಬಾಣವಾಗಿದೆ.
ರಕ್ತದೊತ್ತಡ, ಕೊಲೆಸ್ಟ್ರಾಲ್, ಹಿಮೊಗ್ಲೋಬಿನ್ ಕೊರತೆ ಸರಿದೂಗಿಸುವ ಗುಣ ನುಗ್ಗೆಸೊಪ್ಪಿನಲ್ಲಿದೆ. ಇಷ್ಟೇ ಅಲ್ಲದೇ, ತೂಕ ಇಳಿಸಲು ಬಯಸುವವರು ನುಗ್ಗೆಸೊಪ್ಪಿನ ಪದಾರ್ಥ ಸೇವನೆ ಮಾಡಲೇಬೇಕು. ಇನ್ನು ಯಾರು ನುಗ್ಗೆಸೊಪ್ಪು ತಿನ್ನಬಾರದು ಎಂದರೆ, ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದವರು. ಪೈಲ್ಸ್, ಮುಟ್ಟಿನ ಸಮಸ್ಯೆ, ಮೊಡವೆ ಸಮಸ್ಯೆ ಇರುವವರು ನುಗ್ಗೆಸೊಪ್ಪನ್ನು ಹೆಚ್ಚು ತಿನ್ನಬೇಡಿ.
ಕಾಳು ಮೆಣಸಿನಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆ ಬಗೆಹರಿಸಬಹುದು ಗೊತ್ತಾ..?