Saturday, July 20, 2024

Latest Posts

ಪುದೀನಾ ಎಲೆಯಲ್ಲೂ ಇದೆ ಆರೋಗ್ಯಕರ ಗುಣಗಳು..

- Advertisement -

Health tips: ಪುದೀನಾ ಎಂದರೆ ಚಾಟ್ಸ್ ತಯಾರಿಸುವಾಗ ಬಳಸುವ ಚಟ್ನಿಯ ಒಂದು ಭಾಗ. ಪುದೀನಾ ಚಟ್ನಿ ಇದ್ದಾಗಲೇ, ಆ ಚಾಟ್ ರುಚಿ ಹೆಚ್ಚುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಅದೇ ರೀಕಿ ಮನೆಯಲ್ಲಿ ರೈಸ್ ಭಾತ್ ಮಾಡುವಾಗ ಪುದೀನಾ ಎಲೆ ಸೇರಿಸಿದರೆ, ಸಾಕು. ಅದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಆದರೆ ಇದು ಬರೀ ರುಚಿ ಹೆಚ್ಚಿಸುವುದಷ್ಟೇ ಅಲ್ಲದೇ, ಆರೋಗ್ಯಕ್ಕೂ ಉತ್ತಮ. ಇಂದು ನಾವು ಪುದೀನಾ ಎಲೆಯ ಆರೋಗ್ಯಕರ ಗುಣಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ನೀವು ವಾರದಲ್ಲಿ ಮೂರು ಬಾರಿಯಾದರೂ pudina ಸೇವನೆ ಮಾಡಬೇಕು. ಆದರೆ ಚಾಟ್ಸ್ ಅಥವಾ ಪಲಾವ್ ತಿಂದು ನೀವು ಪುದೀನಾ ಸೇವನೆ ಮಾಡಿದರೆ, ಅದರಿಂದೇನೂ ಪ್ರಯೋಜನವಾಗುವುದಿಲ್ಲ. ಬದಲಾಗಿ, ಪುದೀನಾ ಚಟ್ನಿ ತಿನ್ನಿ, ಪುದೀನಾ ಎಲೆ ತಿನ್ನಿ. ಪುದೀನಾ ರಸದೊಂದಿಗೆ ನಿಂಬೆ ಜ್ಯೂಸ್ ಬಳಸಿ. ಈ ರೀತಿ, ಹಸಿಯಾಗಿ ಪುದೀನಾ ಬಳಸಿದಾಗಲೇ, ನಿಮಗೆ ಆರೋಗ್ಯ ಲಾಭವಾಗುತ್ತದೆ.

ಇದರ ಸೇವನೆಯಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜ್ವರ, ಶೀತ, ಕೆಮ್ಮಿನಂಥ ರೋಗಗಳನ್ನು ಗುಣಪಡಿಸಲು ಪುದೀನಾ ಸಹಾಯಕವಾಗಿದೆ. ವಾಕರಿಕೆ, ತಲೆನೋವನ್ನೆಲ್ಲ ಶಮನ ಮಾಡುವಲ್ಲಿ ಪುದೀನಾ ಪ್ರಮುಖ ಪಾತ್ರ ವಹಿಸುತ್ತದೆ. ಹೊಟ್ಟೆ ನೋವಿನ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ, ಮುಟ್ಟಿನ ಹೊಟ್ಟೆ ನೋವಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪುದೀನಾ ಸಹಕಾರಿಯಾಗಿದೆ.

ಅಷ್ಟೇ ಅಲ್ಲದೇ, ನಿಮ್ಮ ಬಾಯಿಯಿಂದ ವಾಸನೆ ಬರುತ್ತಿದ್ದರೆ, ಎರಡು ಪುದೀನಾ ಎಲೆ ತಿಂದರೆ ಸಾಕು. ನಿಮ್ಮ ಬಾಯಿಯಿಂದ ಘಮ ಬರಲು ಶುರುವಾಗುತ್ತದೆ. ಪುದೀನಾ ಕಶಾಯ ಮಾಡಿ ಕುಡಿಯುವುದರಿಂದಲೂ ನೀವು ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು.

ರಾತ್ರಿ ಉತ್ತಮ ನಿದ್ರೆ ಬರಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ..

ಕಾಳು ಮೆಣಸಿನಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆ ಬಗೆಹರಿಸಬಹುದು ಗೊತ್ತಾ..?

ಮೊಸರು ಸೇವಿಸುವ ರೀತಿ ಮೊದಲು ತಿಳಿದುಕೊಳ್ಳಿ..

- Advertisement -

Latest Posts

Don't Miss