Health tips: ಪಾಲಕ್ ಸೊಪ್ಪು ರುಚಿಕರವೂ, ಆರೋಗ್ಯಕರವೂ ಆಗಿದ್ದು, ಇದರಿಂದ ತಯಾರಿಸುವ ಪದಾರ್ಥ ಸಖತ್ ಟೇಸ್ಟಿಯಾಗಿರುತ್ತದೆ. ಅಲ್ಲದೇ, ಪಾಲಕ್ ಸೇವನೆಯಿಂದ ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಹಾಗಾದ್ರೆ ಪಾಲಕ್ ಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ನಾವು ಪಾಲಕ್ ಸೊಪ್ಪನ್ನು ಯಾರು ತಿನ್ನಬಾರದು ಅಂತಾ ತಿಳಿಯೋಣ. ಯಾರಿಗೆ ಪದೇ ಪದೇ ಮಲವಿಸರ್ಜನೆಯಾಗುತ್ತದೆಯೋ, ಯಾರಿಗೆ ಜೀರ್ಣಕ್ರಿಯೆ ಸಮಸ್ಯೆ ಇರುತ್ತದೆಯೋ ಅಂಥವರು ಪಾಲಕ್ ಸೊಪ್ಪನ್ನು ಸೇವಿಸಬಾರದು. ಯಾಕಂದ್ರೆ ಪಾಲಕ್ ಸೊಪ್ಪಿನ ಸೇವನೆಯಿಂದ ಮಲವಿಸರ್ಜನೆ ಸರಿಯಾಗಿ ಆಗುತ್ತದೆ. ಹಾಗಾಗಿ ಪದೇ ಪದೇ ಮಲವಿಸರ್ಜನೆಯಾಗುತ್ತದೆ, ಅಥವಾ ಸ್ವಲ್ಪ ಆಹಾರದಲ್ಲಿ ಹೆಚ್ಚು ಕಡಿಮೆಯಾದರೂ ಕಷ್ಟವಾಗುತ್ತದೆ ಎನ್ನುವವರು ಪಾಲಕ್ ಸೇವಿಸದಿರುವುದು ಉತ್ತಮ. ವಾಯು ಸಮಸ್ಯೆ ಇರುವವರು ಪಾಲಕ್ ಸೇವನೆಯನ್ನು ಮಿತವಾಗಿ ಮಾಡಬೇಕು.
ಪಾಲಕ್ನಲ್ಲಿ ಐರನ್ ಸತ್ವ ಹೆಚ್ಚಾಗಿದ್ದು, ಇದರ ಸೇವನೆಯಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ. ಇನ್ನು ತೂಕ ಕಡಿಮೆ ಇದ್ದವರು ಪಾಲಕ್ ಸೇವನೆ ಮಾಡಿ, ತೂಕ ಹೆಚ್ಚಿಸಿಕೊಳ್ಳಬಹುದು. ವಾತದ ಸಮಸ್ಯೆ ಇದ್ದವರು ಇದರ ಸೇವನೆ ಮಾಡದಿರುವುದು ಉತ್ತಮ. ಅದೇ ಕಫ ಮತ್ತು ಪಿತ್ತದ ಸಮಸ್ಯೆಯಲ್ಲಿ ಇದು ಉತ್ತಮ ಆಹಾರವಾಗಿದೆ. ಪಿತ್ತದೋಷ, ಕಫದೋಷವಿರುವವರು ಪಾಲಕ್ ಪದಾರ್ಥವನ್ನು ಸೇವಿಸಬಹುದು.
ಮುಟ್ಟಿದ ದಿನಗಳಲ್ಲಿ ಹೆಚ್ಚು ಬ್ಲೀಡಿಂಗ್ ಆಗುತ್ತಿದ್ದರೆ, ಮಲವಿಸರ್ಜನೆ ವೇಳೆ ರಕ್ತ ಬರುತ್ತಿದ್ದರೆ, ಪದೇ ಪದೇ ಮೂಗಿನಿಂದ ರಕ್ತ ಬರುತ್ತಿದ್ದರೆ, ಮಲಬದ್ಧತೆ ಸಮಸ್ಯೆ ಇದ್ದಲ್ಲಿ, ಅಂಥವರು ಪಾಲಕ್ ಸೊಪ್ಪಿನ ಸೇವನೆ ಮಾಡಬಹುದು. ಕೂದಲು ಉದುರುವ ಸಮಸ್ಯೆ, ತ್ವಚೆಯ ಸಮಸ್ಯೆ ಸೇರಿ ಹಲವು ಸಮಸ್ಯೆಗಳನ್ನು ನಿವಾರಿಸುವಲ್ಲಿ ಪಾಲಕ್ ಪ್ರಮುಖ ಪಾತ್ರ ವಹಿಸುತ್ತದೆ. ಕುಳಿತು ಕೆಲಸ ಮಾಡುವವರು ಇದನ್ನು ಲಿಮಿಟಿನಲ್ಲಿ ಸೇವಿಸಬೇಕು. ಮತ್ತು ಪರಿಶ್ರಮ ವಹಿಸುವವರು ಇದನ್ನು ವಾರದಲ್ಲಿ ಎರಡು ಬಾರಿ ಸೇವಿಸಬಹುದು. ಯಾಕಂದ್ರೆ ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಮುಖ್ಯವಾದ ವಿಷಯವೆಂದರೆ, ಪಾಲಕ್ ಸೊಪ್ಪು ಆರೋಗ್ಯಕ್ಕೆ ಉತ್ತಮ. ಆದರೆ ಅದನ್ನು ಲಿಮಿಟಿನಲ್ಲಿ ತಿನ್ನಬೇಕು. ಎಲ್ಲ ಸೊಪ್ಪುಗಳನ್ನು ಸ್ವಚ್ಛಗೊಳಿಸಿಯೇ ಸೇವಿಸಬೇಕು. ಇನ್ನು ನಿಮಗೆ ಪಾಲಕ್ ತಿಂದರೆ, ಅಲರ್ಜಿ ಎಂದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.
ಗೋಧಿ ಬಳಕೆಯಿಂದ ಆರೋಗ್ಯಕ್ಕಾಗುವ ಲಾಭವೇನು..? ಅತಿಯಾಗಿ ಚಪಾತಿ ತಿಂದರೆ ಏನಾಗತ್ತೆ..?