Sunday, September 8, 2024

Latest Posts

ದಿನನಿತ್ಯ ಮದ್ಯಪಾನ ಮಾಡುವುದರಿಂದ ಆಗುವ ಸಮಸ್ಯೆಗಳೇನು..?

- Advertisement -

Health Tips: ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಅಂತಾ ಎಲ್ಲರಿಗೂ ಗೊತ್ತು. ಆದರು ಕೂಡ ಕೆಲವರಿಗೆ ಪ್ರತಿದಿನ ಮದ್ಯಪಾನ ಸೇವನೆ ಮಾಡಲೇಬೇಕು. ಅದಕ್ಕಾಗಿ ಅವರು ಬೆಳ್ಳಂಬೆಳಿಗ್ಗೆ ಬಾರ್ ಮುಂದೆ ಬಂದು ನಿಲ್ಲುತ್ತಾರೆ. ಏಕೆಂದರೆ, ಒಂದು ದಿನ ಅವರು ಮದ್ಯಪಾನ ಮಾಡದಿದ್ದಲ್ಲಿ, ಅವರ ದೇಹದಲ್ಲಿರುವ ಶಕ್ತಿಯೇ ಕುಂದುಹೋಗುತ್ತದೆ ಎನ್ನುವುದು ಅವರ ಭ್ರಮೆ. ಅಲ್ಲದೇ, ಕುಡಿಯದ ದಿನ ಅವರು ಯಾವ ಕೆಲಸವನ್ನೂ ಮಾಡಲಾಗುವುದಿಲ್ಲ ಅಂತಲೇ ಎಲ್ಲ ಕುಡುಕರು ಹೇಳುತ್ತಾರೆ. ಆದ್ರೆ ಪ್ರತಿದಿನ ಮದ್ಯಪಾನ ಮಾಡುವುದು ನಮ್ಮ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಅನ್ನುವ ಅಂದಾಜು ಕೂಡ ಕೆಲವರಿಗಿರುವುದಿಲ್ಲ. ಈ ಬಗ್ಗೆ ವೇದ್ಯರೇ ವಿವರಿಸಿದ್ದಾರೆ ನೋಡಿ.

ವೈದ್ಯರು ಹೇಳುವ ಪ್ರಕಾರ, ಪ್ರತಿದಿನ ಯಾರು ಮದ್ಯಪಾನ ಮಾಡುತ್ತಾರೋ, ಅವರು ತಮ್ಮ ಜೀವನವನ್ನು ಕಂಠಕಕ್ಕೆ ತಳ್ಳುತ್ತಿದ್ದಾರೆ ಎಂದರ್ಥ. ಕೆಲವರು ತಾವು ಕಡಿಮೆ ಕುಡಿಯುತ್ತಿದ್ದೇವೆ. ಹೆಚ್ಚು ಕುಡಿಯುವವರೇ ಬದುಕಿರುವಾಗ, ನನಗೇನೂ ಆಗುವುದಿಲ್ಲ ಎಂಬ ಭ್ರಮೆಯಲ್ಲಿರುತ್ತಾರೆ. ಆದರೆ ಅವೆಲ್ಲವೂ ಅವರವರ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ನೀವು ಕಡಿಮೆ ಮದ್ಯಪಾನ ಮಾಡಿದರೂ, ಅದು ನಿಮ್ಮ ಲಿವರ್‌ ಹಾಳು ಮಾಡಬಹುದು.

ನಿಮ್ಮ ಆರೋಗ್ಯವನ್ನು ಹಾಳು ಮಾಡಿ, ನಿಮ್ಮನ್ನು ಸಾವಿನ ದವಡೆಗೆ ಕೊಂಡೊಯ್ಯಬಹುದು. ಪ್ರತಿದಿನ ಆಲ್ಕೋಹಾಲ್ ತೆಗೆದುಕೊಳ್ಳುವವರ ದೇಹದ ಎಲ್ಲಾ ಭಾಗಗಳು ಡ್ಯಾಮೇಜ್ ಆಗುತ್ತದೆ. ಇದರಿಂದ ಇರುವ ನೆಮ್ಮದಿ, ಆರೋಗ್ಯ ಎಲ್ಲವೂ ಹಾಳಾಗುತ್ತದೆ. ಹಾಗಾಗಿ ಪ್ರತಿದಿನ ಮದ್ಯಪಾನ ಸೇವನೆ ಮಾಡುವುದು ಒಳ್ಳೆದಲ್ಲ ಅಂತಾರೆ ವೈದ್ಯರು.

ಬರೀ ಆರೋಗ್ಯ, ನೆಮ್ಮದಿ ಹಾಳು ಮಾಡಿಕೊಳ್ಳುವುದಲ್ಲದೇ, ಪತ್ನಿಗೆ ಕಿರುಕುಳ ನೀಡುವುದು. ಮಕ್ಕಳ ಮಾನಸಿಕ ನೆಮ್ಮದಿ ಹಾಳಾಗಲು ಕೂಡ ಅಪ್ಪನ ಕುಡಿತವೇ ಕಾರಣವಾಗುತ್ತದೆ. ಹಾಗಾಗಿ ನೀವು ಕುಡಿದು, ಪತ್ನಿ ಮಕ್ಕಳ ನೆಮ್ಮದಿ ಹಾಳು ಮಾಡುವ ಬದಲು, ಕುಡಿತ ಬಿಟ್ಟು ನೀವೂ ಆರೋಗ್ಯವಾಗಿರಿ, ನಿಮ್ಮ ಕುಟುಂಬಸ್ಥರೂ ನೆಮ್ಮದಿಯಿಂದ ಇರಲು ಬಿಡಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss