ಅಧಿಕ ಮಾಸದ ವಿಶೇಷತೆಗಳೇನು..? ಈ ಮಾಸದಲ್ಲೇ ದಾನ ಮಾಡಬೇಕು ಅಂತಾ ಹೇಳುವುದೇಕೆ..?

Spiritual: ಅಧಿಕ ಮಾಸದಲ್ಲಿ ಶ್ರೀವಿಷ್ಣುವನ್ನು ಪೂಜಿಸಲಾಗುತ್ತದೆ. ಹಾಗಾಗಿ ಉಪವಾಸ, ಪೂಜೆ, ದಾನ ಧರ್ಮಗಳನ್ನು ಈ ಮಾಸದಲ್ಲಿ ಮಾಡಿದರೆ, ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ದಾನ ಮಾಡುವುದಿದ್ದರೆ ಏನನ್ನು ದಾನ ಮಾಡಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಅಧಿಕ ಮಾಸ ಎಂದರೆ, ಹೆಚ್ಚುವರಿಯಾಗಿ ಬರುವ ಮಾಸ. ಈ ಮಾಸದಲ್ಲಿ ವಿಷ್ಣುವಿನ ಪೂಜೆ ಮಾಡಬೇಕು. ವಿಷ್ಣುವಿಗೆ ಸಂಬಂಧಿಸಿದ ಮಂತ್ರ ಪಠಿಸಬೇಕು. ವಿಷ್ಣುವಿನ ದೇಗುಲಕ್ಕೆ ಭೇಟಿ ನೀಡಿ, ದರ್ಶನ ಪಡೆಯಬೇಕು. ಇದರಿಂದ ವೈಕುಂಠ ಪ್ರಾಪ್ತಿಯಾಗುತ್ತದೆ. ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಅದರಲ್ಲೂ ಈ ಬಾರಿ ಅಧಿಕ ಮಾಸ, ಶ್ರಾವಣ ಮಾಸದೊಂದಿಗೆ ಬಂದಿದೆ. ಹೀಗಾಗಿ ನೀವು ವಿಷ್ಣುವಿನ ಜೊತೆ, ಶಿವನನ್ನು ಆರಾಧಿಸಿ, ಇಬ್ಬರ ಕೃಪೆಗೂ ಪಾತ್ರರಾಗಬಹುದು.

ಅಧಿಕ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಏಕೆಂದರೆ, ಇದು ದೇವರ ಪೂಜೆಗೆ ಸೀಮಿತವಾದ ಮಾಸವಾಗಿದೆ. ಹಾಗಾಗಿ ಹೋಮ-ಹವನ, ಪೂಜೆ, ಆರಾಧನೆ, ಉಪವಾಸ, ದಾನ ಧರ್ಮ ಮಾಡಿದರೆ, ಉತ್ತಮ. ಹಾಗಾಗಿ ಅನುಕೂಲಸ್ಥರು ಈ ಮಾಸದಲ್ಲಿ ದೀಪವನ್ನು ದಾನ ಮಾಡುತ್ತಾರೆ. ಅಷ್ಟು ಅನುಕೂಲವಿಲ್ಲದಿದ್ದರೂ, ಕೆಲವರು ಅಕ್ಕಿ, ತುಪ್ಪವನ್ನು ದಾನ ಮಾಡುತ್ತಾರೆ. ನಿಮಗೆ ಇದನ್ನು ದಾನ ಮಾಡಲಾಗದಿದ್ದಲ್ಲಿ ನೀವು ಬಡವರಿಗೆ, ನಿಮ್ಮ ಕೈಲಾದುದ್ದನ್ನು ದಾನ ಮಾಡಿ. ದಾನವೆಂಬುದೇ ಪುಣ್ಯಕ್ಕೆ ಸಮ. ಹಾಗಾಗಿ ಉತ್ತಮವಾಗಿರುವ ಏನೇ ದಾನ ಮಾಡಿದರೂ, ಅದರ ಪುಣ್ಯ ನಿಮಗೆ ಲಭ್ಯವಾಗುತ್ತದೆ.

ಇನ್ನು ಈ ಮಾಸದಲ್ಲಿ ಮೊಟ್ಟೆ, ಮಾಂಸ, ಈರುಳ್ಳಿ- ಬೆಳ್ಳುಳ್ಳಿ ಸೇವನೆ ಮಾಡುವುದು ಅಷ್ಟು ಸೂಕ್ತವಲ್ಲ. ಇನ್ನು ಮದ್ಯಪಾನ ಮಾಡಬಾರದು ಅನ್ನೋ ನಿಯಮವೂ ಇದೆ. ಮದ್ಯಪಾನ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇನ್ನು ಮಾಂಸ, ಈರುಳ್ಳಿ, ಬೆಳ್ಳುಳ್ಳಿ ಸೇವನೆ ಮಾಡಿದರೆ, ಮಳೆಗಾಲವಾದ ಕಾರಣ, ಅಷ್ಟು ಸುಲಭವಾಗಿ ಜೀರ್ಣವಾಗುವುದಿಲ್ಲ. ಹಾಗಾಗಿ ಈ ಆಹಾರ ನಿಷಿದ್ಧವೆನ್ನಲಾಗಿದೆ.

ಅಮರನಾಥ ಯಾತ್ರೆಗೆ ಹೋಗುವ ಮುನ್ನ ಈ ವಿಷಯಗಳನ್ನು ನೆನಪಿನಲ್ಲಿರಿಸಿ..

ಕೊಲ್ಹಾಪುರ ಮಹಾಲಕ್ಷ್ಮೀ ದೇವಸ್ಥಾನದ ಹಿನ್ನೆಲೆ ಏನು..?

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಇತಿಹಾಸವೇನು..?

About The Author