Tuesday, May 21, 2024

Latest Posts

ಸ್ತನಪಾನ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು ಅನ್ನೋದಕ್ಕೆ ಕಾರಣವೇನು..?

- Advertisement -

Health Tips: ಮೊದಲೆಲ್ಲಾ ಬಾಣಂತಿಯರಿಗಾಗಿ ಒಂದು ರೂಮ್ ಮೀಸಲಿಡುತ್ತಿದ್ದರು. ಅವರು ಸ್ನಾನ ಮಾಡಲು, ಊಟ ಮಾಡಲು, ಶೌಚಾಲಯಕ್ಕೆ ಹೋಗಲಷ್ಟೇ ಹೊರಬರಬೇಕಿತ್ತು. ಉಳಿದ ಹೊತ್ತು ರೂಮಿನಲ್ಲೇ ಮಲಗಿರಬೇಕು. ಮಗುವಿನೊಂದಿಗೆ ಸಮಯ ಕಳೆಯಬೇಕಿತ್ತು. ಆದರೆ ಇಂದಿನ ಕಾಲದ ಬಾಣಂತಿಯರಿಗೆ ಹಾಗಲ್ಲ. ಪಥ್ಯ ಇರುವುದಿಲ್ಲ. ಮೊಬೈಲ್, ಟಿವಿ ನೋಡುವ ಅವಕಾಶವಿದೆ. ಆದರೆ ಮಗುವಿಗೆ ಹಾಲು ಕುಡಿಸುವ ಸಮಯದಲ್ಲಿ ಮೊಬೈಲ್ ಬಳಸಬಾರದು ಅಂತಾ ಹೇಳುತ್ತಾರೆ. ಹಾಗಾದ್ರೆ ಹೀಗೆ ಹೇಳುವುದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಸ್ತನಪಾನ ಮಾಡಿಸುವಾಗ ತಾಯಿ, ಟಿವಿ, ಮೊಬೈಲ್ ನೋಡಬಾರದು ಅಂತಾ ಹೇಳುವುದು ಏಕೆಂದರೆ, ನೀವು ಹಾಲು ಕುಡಿಸುವಾಗ, ನಿಮ್ಮ ಮಗುವಿನ ಕಣ್ಣನ್ನೇ ನೋಡುತ್ತಿರಬೇಕು. ಇದು ತಾಯಿ ಮಗುವಿನ ಬಾಂಧವ್ಯ ಹೆಚ್ಚಿಸುತ್ತದೆ. ಮೊದಲ 6 ತಿಂಗಳು ನೀವು ಮಗುವಿನೊಂದಿಗೆ ಕಣ್ಣಲ್ಲಿ ಕಣ್ಣಿಟ್ಟು ಕಂಡು ಹಾಲು ಕುಡಿಸಿದರೆ, ಅದರೊಂದಿಗಿನ ನಿಮ್ಮ ಬಾಂಧವ್ಯ ಅತ್ಯುತ್ತಮವಾಗುತ್ತದೆ. ಸದಾ ಅದು ನಿಮ್ಮನ್ನು ಪ್ರೀತಿಸುತ್ತದೆ. ಅಮ್ಮನ ಪ್ರೀತಿ, ಕಾಳಜಿ ಬಯಸುತ್ತದೆ. ಅಮ್ಮನೊಂದಿಗಿನ ಬಾಂಧವ್ಯ, ಪ್ರೀತಿ, ಮಮತೆ ಹೆಚ್ಚಾಗುವುದೇ ಈ ಸಂದರ್ಭದಲ್ಲಿ.

ಇನ್ನು ಮಗು 9 ತಿಂಗಳು ನಿಮ್ಮ ಗರ್ಭದಲ್ಲಿರುತ್ತದೆ. ಅದಕ್ಕೆ ಅಮ್ಮನೇ ಪ್ರಪಂಚ. ಹಾಗಾಗಿ ನೀವು ಅದನ್ನ ಸ್ಪರ್ಷಿಸಿದಾಗ, ಅದಕ್ಕೆ ಆಗುವ ಸಮಾಧಾನ ಅದಕ್ಕೆ ಮಾತ್ರ ಗೊತ್ತಾಗುತ್ತದೆ. ಅಲ್ಲದೇ ಮಕ್ಕಳು ಸ್ತನಪಾನ ಮಾಡುವವರೆಗೂ ಅಮ್ಮನೆಂದರೆ, ಮಗುವಿಗೆ ಹಾಲೇ ನೆನಪಾಗುತ್ತದೆ. ಹಾಗಾಗಿ ಹಲವು ಮಕ್ಕಳು, ಅಮ್ಮನನ್ನು ಕಂಡರೆ, ಹಾಲಿಗಾಗಿಯೇ ಅಳಲು ಶುರು ಮಾಡುವುದು. ನೀವೆಷ್ಟೇ ಸಮಾಧಾನ ಮಾಡಿದರೂ, ಕೊನೆಗೆ ಸ್ತನಪಾನ ಮಾಡಿದಾಗಲೇ ಅದು ಸಮಾಧಾನವಾಗುತ್ತದೆ. ಹಾಗಾಗಿ ಸ್ತನಪಾನ ಮಾಡುವಾಗ, ಸಮಾಧಾನವಾಗಿ ಕುಳಿತು, ಮಗುವಿನೊಂದಿಗೆ ಮಾತನಾಡುತ್ತಾ ಇರಿ.

ನೀವು ಮಗುವಿನ ಕಣ್ಣಲ್ಲಿ ಕಣ್ಣಿಟ್ಟು ನೋಡದಿದ್ದಲ್ಲಿ, ಅದಕ್ಕೆ ನಿಮ್ಮ ಬಗೆಗಿನ ಪ್ರೀತಿ, ಮಮತೆ ಕಡಿಮೆಯಾಗಬಹುದು. ಅಮ್ಮನಿಗಿಂತ, ಅಪ್ಪನ ಮೇಲೆ ಅಥವಾ, ಬೇರೆ ಮನೆಮಂದಿಯ ಬಗ್ಗೆ ಅದು ಹೆಚ್ಚು ಒಲವು ತೋರಬಹುದು. ನಿಮ್ಮ ಬಗ್ಗೆಅದಕ್ಕೆ ತಾತ್ಸಾರ ಹುಟ್ಟಬಹುದು. ಹಾಗಾಗಿ ಸ್ತನಪಾನ ಮಾಡುವಾಗ ಮೊಬೈಲ್ ಬಳಕೆ ಮಾಡಬೇಡಿ.

ಇಷ್ಟೇ ಅಲ್ಲದೇ, ಸ್ತನಪಾನ ಮಾಡುವಾಗ ಮೊಬೈಲ್ ಬಳಸಿದ್ದಲ್ಲಿ, ಅದರ ವಿಕಿರಣಗಳಿಂದ ಮಗುವಿನ ಆರೋಗ್ಯದ ಮೇಲೆ, ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಮಗು ಹತ್ತಿರವಿದ್ದಾಗ, ಮೊಬೈಲ್ ದೂರವಿರಲಿ.

ನುಗ್ಗೆಸೊಪ್ಪನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಅತ್ಯುತ್ತಮ ಲಾಭಗಳೇನು..?

ಪುದೀನಾ ಎಲೆಯಲ್ಲೂ ಇದೆ ಆರೋಗ್ಯಕರ ಗುಣಗಳು..

ಬೇಧಿ ಶುರುವಾದಾಗ ಯಾವ ಆಹಾರ ತಿಂದರೆ ಉತ್ತಮ..?

- Advertisement -

Latest Posts

Don't Miss