Health Tips: ನಾವು ನೀವು ನೋಡಿರುವಂತೆ, ಹಲವು ರೋಗಗಳು ಅನುವಂಶಿಕವಾಗಿ ಬರುತ್ತದೆ. ಅದರಿಂದ ಆ ವಂಶದಲ್ಲಿ ಮಕ್ಕಳು ಹುಟ್ಟುವಾಗ, ತಂದೆ ತಾಯಿ ಹಲವು ಆರೋಗ್ಯ ಸಲಹೆಗಳನ್ನು ಪಡೆಯಲೇಬೇಕು. ಹಾಗಾದ್ರೆ ಕ್ಯಾನ್ಸರ್ ಅನುವಂಶಿಕವಾಗಿ ಬರುತ್ತದೆಯಾ..? ಸ್ತನ ಕ್ಯಾನ್ಸರ್ ಲಕ್ಷಣಗಳೇನು ಅನ್ನೋ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ನಾವು ಜೀವಿಸುವ ರೀತಿ, ಆಹಾರ ಪದ್ಧತಿ, ವಾಸಿಸುವ ಸ್ಥಳ ಹೀಗೆ ಕ್ಯಾನ್ಸರ್ ಬರುವುದು, ಇವೆಲ್ಲದರ ಮೇಲೆ ಡಿಪೆಂಡ್ ಆಗುತ್ತದೆ. ಹಾಗಾಗಿ ಕ್ಯಾನ್ಸರ್ ಇದೇ ಕಾರಣಕ್ಕೆ ಬರುತ್ತೆದಯಾ ಅಂತಾ ಹೇಳಲು ಆಗುವುದಿಲ್ಲ. ಅದೇ ರೀತಿ ಕೆಲವೊಂದು ಕೇಸ್‌ನಲ್ಲಿ ಕ್ಯಾನ್ಸರ್ ರೋಗ ಅನುವಂಶಿಕವಾಗಿಯೂ ಬಂದಿದ್ದಿದೆ. ಹಾಗಾಗಿ ತಾಯಿಗೆ ಬ್ರೀಸ್ಟ್ ಕ್ಯಾನ್ಸರ್ ಬಂದರೆ, ಅವರ ಮಕ್ಕಳಿಗೂ ವಯಸ್ಸು 40 ದಾಟಿದ ಬಳಿಕ, ಒಂದು ಕ್ಯಾನ್ಸರ್ ಟೆಸ್ಟ್ ಮಾಡಿಸಲು ವೈದ್ಯರು ಸಲಹೆ ನೀಡುತ್ತಾರೆ.
ಇನ್ನು ಸ್ತನ ಕ್ಯಾನ್ಸರ್ ಬರುವುದು ಹೇಗೆ ಎಂದರೆ, ಸ್ತನದಲ್ಲಿ ಗಡ್ಡೆ ಬೆಳೆಯುತ್ತದೆ. ನೋವಾಗುತ್ತದೆ. ಆ ರೀತಿ ನೋವು, ಗಡ್ಡೆ ಬೆಳೆದಿದ್ದು ಗೊತ್ತಾದ ತಕ್ಷಣವೇ ವೈದ್ಯರ ಬಳಿ ಬಂದು ಪರೀಕ್ಷಿಸಿಕೊಳ್ಳಬೇಕು. ಆಗ ವೈದ್ಯರು ಸಣ್ಣ ಚಿಕಿತ್ಸೆ ಮೂಲಕವೇ, ಆ ಗಡ್ಡೆಯನ್ನು ತೆಗೆದು, ಕ್ಯಾನ್ಸರ್ ಗುಣಪಡಿಸುತ್ತಾರೆ. ಆದರೆ ನೀವು ಈ ವಿಷಯದಲ್ಲಿ ನಿರ್ಲಕ್ಷ ಮಾಡಿದ್ದಲ್ಲಿ, ಆ ಗಡ್ಡೆ ನಿಮ್ಮ ಪ್ರಾಣಕ್ಕೆ ಹಾನಿಯುಂಟು ಮಾಡುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1
ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 2

