Health Tips: ಮಳೆಗಾಲ- ಚಳಿಗಾಲ ಶುರುವಾದ ಬಳಿಕ, ರೋಗಿ ರುಜಿನಗಳು ಕೂಡ ಶುರುವಾಗುತ್ತದೆ. ಅದೇ ರೀತಿ ಇತ್ತೀಚೆಗೆ ಮಲೇರಿಯಾ ಜ್ವರದ ಸಮಸ್ಯೆ ಕೂಡ ಹೆಚ್ಚಾಗಿದೆ. ಹಾಗಾಗಿ ವೈದ್ಯರಾದ ಡಾ.ಆಂಜೀನಪ್ಪಾ ಮಲೇರಿಯಾ ಜ್ವರದ ಲಕ್ಷಣಗಳು ಏನೇನು ಎಂದು ವಿವರಿಸಿದ್ದಾರೆ.
ಮಲೇರಿಯಾ ಅಂದ್ರೆ ಸೊಳ್ಳೆಯಿಂದ ಬರುವ ರೋಗ. ಹಾಗಾಗಿ ನಿಮ್ಮ ಮನೆಯ ಸುತ್ತಮುತ್ತಲು ಸ್ವಚ್ಚವಾಗಿರಿಸಿಕೊಳ್ಳಬೇಕು. ಎಲ್ಲಿಯೂ ನೀರು ನಿಂತುಕೊಳ್ಳದಂತೆ ಎಚ್ಚರ ವಹಿಸಬೇಕು. ಮಲೇರಿಯಾ ಬಂದಾಗ, ಮೊದಲು ಚಳಿ ಜ್ವರ ಬರುತ್ತದೆ. ಬಳಿಕ ನಡುಕ ಬರುತ್ತದೆ. ದಿನ ಬಿಟ್ಟು ದಿನ ಜ್ವರ ಬರುತ್ತದೆ. ಮಲೇರಿಯಾ ಬಂದಾಗ, ಖಂಡಿತ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು. ಆದರೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುವ ಅವಶ್ಯಕತೆ ಇಲ್ಲ.
ಇನ್ನು ಹಲವರಿಗೆ ಡೆಂಗ್ಯೂ ಮತ್ತು ಮಲೇರಿಯಾ ಬಗ್ಗೆ ಕನ್‌ಫ್ಯೂಷನ್ ಇದೆ. ಟೈಗರ್ ಸೊಳ್ಳೆ ಕಚ್ಚುವುದರಿಂದ ಬರುವ ರೋಗವೆಂದರೆ ಡೆಂಗ್ಯೂ. ಅದೇ ರಾತ್ರಿ ಕಚ್ಚುವ ಸೊಳ್ಳೆಯಿಂದ ಬರುವ ರೋಗ ಅಂದ್ರೆ, ಮಲೇರಿಯಾ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..