Health Tips: ಪಿಡ್ಸ್ ಬಂದಾಗ, ಅಂಥವರ ಕೈಗೆ ಕಬ್ಬಿಣದ ತುಂಡನ್ನು, ಕಬ್ಬಿಣದ ಚಾವಿಯನ್ನು ಕೊಡಲಾಗುತ್ತದೆ. ಆಗ ಪಿಡ್ಸ್ ನಿಲ್ಲುತ್ತದೆ ಎಂದು ಹೇಳುತ್ತಾರೆ. ಆದರೆ ವೈದ್ಯರ ಪ್ರಕಾರ, ಪಿಡ್ಸ್ ಬಂದವರಿಗೆ ಕಬ್ಬಿಣ ಕೊಟ್ಟರೆ ಏನೂ ಪ್ರಯೋಜನವಿಲ್ಲ. ಹಾಗಾದ್ರೆ ಪಿಡ್ಸ್ ಬಂದಾಗ ಏನು ಮಾಡಬೇಕು..? ಇದರ ಲಕ್ಷಣಗಳೇನು ಅಂತಾ ತಿಳಿಯೋಣ ಬನ್ನಿ..
ಡಾ.ಸುರೇಂದ್ರ ಪಿಡ್ಸ್ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ. 6 ತಿಂಗಳ ಮಕ್ಕಳಿಂದ 5 ವರ್ಷದವರೆಗಿನ ಮಕ್ಕಳಿಗೆ ಜ್ವರ ಬಂದಾಗ, ಸರಿಯಾದ ಚಿಕಿತ್ಸೆ ಕೊಡಿಸದಿದ್ದರೆ, ನಿರ್ಲಕ್ಷ್ಯ ಮಾಡಿದರೆ, ಜ್ವರ ತಲೆಗೇರಿ ಪಿಡ್ಸ್ ಬರುತ್ತದೆ. ಇನ್ನು ಕೆಲ ಮಕ್ಕಳಿಗೆ ಜ್ವರ ಬರದೆಯೂ ಪಿಡ್ಸ್ ಬರುತ್ತದೆ. ಅನುವಂಶಿಕವಾಗಿಯೂ ಈ ರೋಗ ಬರುತ್ತದೆ. ಅಂದರೆ ಕುಟುಂಬದಲ್ಲಿ ಯಾರಿಗಾದರೂ ಪಿಡ್ಸ್ ಬರುತ್ತಿದ್ದರೆ, ಅಂಥವರ ಮಕ್ಕಳು, ಮೊಮ್ಮಕ್ಕಳು, ಅಥವಾ ರಕ್ತ ಸಂಬಂಧಿಕರಿಗೂ ಹೀಗೆ ಪಿಡ್ಸ್ ಬರುವ ಸಾಧ್ಯತೆ ಇರುತ್ತದೆ.
ಇನ್ನು ಪಿಡ್ಸ್ ಬಂದಿರುವ ಮಕ್ಕಳ ಪೋಷಕರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೇ, ವೈದ್ಯರ ಸೂಚಿಸಿದ ಚಿಕಿತ್ಸೆ, ಔಷಧಿಯನ್ನು ಕೊಡಿಸಬೇಕು. ಮಕ್ಕಳನ್ನು ಒಂಟಿಯಾಗಿ ಬಿಡಬಾರದು. ಸ್ವಿಮ್ಮಿಂಗ್ ಮಾಡುವಾಗ, ಎಚ್ಚರ ವಹಿಸಬೇಕು. ಏಕೆಂದರೆ, ಸ್ವಿಮ್ಮಿಂಗ್ ಮಾಡುವಾಗ, ಪಿಡ್ಸ್ ಬಂದರೆ, ನೀರು ಕುಡಿದು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಅಲ್ಲದೇ ನಿಮ್ಮ ಮಕ್ಕಳು ಶಾಲೆಗೆ ಹೋಗುತ್ತಿದ್ದರೆ, ಟೀಚರ್ಸ್‌ಗೆ ಈ ಬಗ್ಗೆ ತಿಳಿಸಿ. ಈ ರೀತಿ ಪಿಡ್ಸ್ ಬಂದಾಗ, ವೈದ್ಯರ ಬಳಿ ಕರೆದುಕೊಂಡು ಹೋಗಿ ಎಂದು ಹೇಳಿರಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಚೈಲ್ಡ್ ಹುಡ್ ಅಸ್ತಮಾ ಬಗ್ಗೆ ಗಾಬರಿ ಇದೆಯಾ..? ಈ ಬಗ್ಗೆ ವೈದ್ಯರೇ ಸಲಹೆ ಕೊಟ್ಟಿದ್ದಾರೆ ನೋಡಿ..
ಲಂಗ್ ಟ್ರಾನ್ಸಪ್ಲಾಂಟ್ ಅಂದ್ರೇನು..? ಈ ಆಪರೇಷನ್ ಆದವರು ಎಷ್ಟು ವರ್ಷ ಬದುಕುತ್ತಾರೆ..?