Thursday, December 26, 2024

Latest Posts

ಮಹಿಳೆಯರಲ್ಲಿ ಕ್ಯಾಲ್ಶಿಯಂ ಕಡಿಮೆ ಇರಲು ಕಾರಣವೇನು..? ಪರಿಹಾರವೇನು..?

- Advertisement -

ಮಹಿಳೆಯಲ್ಲಿ ಕ್ಯಾಲ್ಶಿಯಂ ಇರೋದು ತುಂಬಾ ಮುಖ್ಯ. ಅದರಲ್ಲೂ ನೀವು ಗರ್ಭಿಣಿಯಾಗಿದ್ದರೆ, ನಿಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಶಿಯಂ ಇರಬೇಕು. ಆಗಲೇ ನಿಮ್ಮ ಮಗು ಚುರುಕಾಗಿ, ಆರೋಗ್ಯಕರವಾಗಿ ಇರತ್ತೆ. ಇನ್ನು 40 ದಾಟಿದ ಬಳಿಕ, ದೇಹದಲ್ಲಿ ಕ್ಯಾಲ್ಶಿಯಂ ಕಡಿಮೆಯಾಗುತ್ತ ಬರತ್ತೆ. ಹಾಗಾದ್ರೆ ಇದಕ್ಕೆ ಕಾರಣವೇನು..? ಹೇಗೆ ಪರಿಹಾರ ಕಂಡುಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ..

ನಮ್ಮ ಮೂಳೆಗಳಲ್ಲಿ ಮತ್ತು ನಮ್ಮ ಹಲ್ಲುಗಳಲ್ಲಿ ಕ್ಯಾಲ್ಶಿಯಂ ಇರುತ್ತದೆ. ನಿಮ್ಮ ಹಲ್ಲು ಉದುರಲು ಶುರುವಾದ್ರೆ, ನೋವಲು ಶುರುವಾದ್ರೆ, ಮೂಳೆ ನೋವು, ಕೈ ಕಾಲು ನೋವಲು ಶುರುವಾದ್ರೆ, ನಿಮ್ಮ ದೇಹದಲ್ಲಿ ಕ್ಯಾಲ್ಶಿಯಂ ಅಂಶ ಕಡಿಮೆ ಇದೆ ಎಂದರ್ಥ. ಒಂದು ಹೆಣ್ಣು ಋತುಮತಿಯಾಗುವ ಮುನ್ನ ಆಕೆಯ ದೇಹದಲ್ಲಿ ಪುರುಷರ ದೇಹದಲ್ಲಿರುವಷ್ಟೇ ಪ್ರಮಾಣದಲ್ಲಿ ಕ್ಯಾಲ್ಶಿಯಂ ಇರುತ್ತದೆ. ಆದ್ರೆ ಆ ಋತುಮತಿಯಾಗಲು ಶುರುವಾದಾಗ, ಆಕೆಯ ದೇಹದಲ್ಲಿ ಹಾರ್ಮೋನಲ್ ಇಂಬ್ಯಾಲೆನ್ಸ್ ಆಗುತ್ತದೆ.

ಇನ್ನು ಮಹಿಳೆ ಗರ್ಭಣಿಯಾದಾಗ ಆಕೆಯ ದೇಹದಲ್ಲಿ ಹೆಚ್ಚು ಕ್ಯಾಲ್ಶಿಯಂ ಇರುವುದು ಮುಖ್ಯವಾಗಿರುತ್ತದೆ. ಹಾಗಾಗಿ ಗರ್ಭಿಣಿಯರಿಗೆ ಕ್ಯಾಲ್ಶಿಯಂ ಮಾತ್ರೆ ಕೊಡಲಾಗುತ್ತದೆ. ಆಕೆ ಮಗುವನ್ನ ಹೆತ್ತ ಬಳಿಕ, ಮತ್ತೆ ಆಕೆಯ ದೇಹದಲ್ಲಿ ಕ್ಯಾಲ್ಶಿಯಂ ಅಂಶ ಕಡಿಮೆಯಾಗತ್ತೆ. ನಂತರದ ದಿನಗಳಲ್ಲಿ ಮೂಳೆ ನೋವು ಶುರುವಾಗತ್ತೆ. ಹೀಗೆ ಮುಂದೆ ಆಕೆಗೆ ಮುಟ್ಟು ನಿಲ್ಲುವ ಸಂದರ್ಭದಲ್ಲೂ ದೇಹದಲ್ಲಿ ಕ್ಯಾಲ್ಶಿಯಂ ಕೊರತೆ ಉಂಟಾಗುತ್ತದೆ.

ಇಷ್ಟೇ ಅಲ್ಲದೇ, ಭಾರತದಲ್ಲಿ ಮಹಿಳೆಯರು ಮನೆಗೆಲಸ, ಆಫೀಸು ಕೆಲಸ, ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯ ಬಗ್ಗೆ ಹೆಚ್ಚು ಟೆನ್ಶನ್ ತೆಗೆದುಕೊಳ್ಳುತ್ತಾರೆ. ಹಾಗಾಗಿ ಸರಿಯಾಗಿ ಉತ್ತಮ ಆಹಾರ ಸೇವಿಸದ ಕಾರಣ, ದೇಹದಲ್ಲಿ ಕ್ಯಾಲ್ಶಿಯಂ ಅಂಶ ಕಡಿಮೆಯಾಗತ್ತೆ.

ಹಾಗಾದ್ರೆ ನಮ್ಮ ದೇಹದಲ್ಲಿ ಕ್ಯಾಲ್ಶಿಯಂ ಅಂಶ ಹೆಚ್ಚಾಗಬೇಕು ಅಂದ್ರೆ ನಾವೇನು ತಿನ್ನಬೇಕು ಅಂದ್ರೆ, ಹಸುವಿನ ಹಾಲು ಮತ್ತು ಹಾಲಿನಿಂದ ತಯಾರಿಸಲ್ಪಟ್ಟ ಬೆಣ್ಣೆ, ತುಪ್ಪ, ಮೊಸರನ್ನ ತಿನ್ನಬೇಕು. ಜೊತೆಗೆ ಪಾಲಕ್, ಕ್ಯಾಬೇಜ್, ಕಾಬುಲ್ ಕಡ್ಲೆ, ರಾಜ್ಮಾ, ಸೋಯಾಬಿನ್, ರಾಗಿ, ಬಾಳೆಹಣ್ಣು ಮತ್ತು ಖರ್ಜೂರ. ಇವಿಷ್ಟನ್ನ ನೀವು ಸೇವಿಸಿದ್ರೆ, ನಿಮ್ಮ ದೇಹದಲ್ಲಿ ಕ್ಯಾಲ್ಶಿಯಂ ಪ್ರಮಾಣ ಸರಿಯಾಗಿರತ್ತೆ. ಆದ್ರೆ ನೀವು ಇದನ್ನೆಲ್ಲ ಲಿಮಿಟ್‌ನಲ್ಲಿ ಸೇವಿಸಬೇಕು. ಹಾಲು, ಹಾಲಿನ ಪ್ರಾಡಕ್ಟ್, ಬಾಳೆಹಣ್ಣು, ಖರ್ಜೂರ ಇವನ್ನ ಪ್ರತಿದಿನ ಸೇವಿಸಬಹುದು. ಉಳಿದ ಆಹಾರವನ್ನ ವಾರಕ್ಕೆ ಮೂರು ಬಾರಿ ಸೇವಿಸಿದ್ರೆ ಸಾಕು.

ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ 2

ಬೆಳಿಗ್ಗೆ ತಿಂಡಿ ಸರಿಯಾಗಿ ತಿನ್ನದಿದ್ದಲ್ಲಿ ಏನಾಗತ್ತೆ ಗೊತ್ತಾ..?

ಒಂದೇ ವಾರದಲ್ಲಿ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನ ಹೀಗೆ ಕಡಿಮೆ ಮಾಡಿ..

- Advertisement -

Latest Posts

Don't Miss