Health Tips: ಹುಟ್ಟಿನ ಪ್ರತೀ ಮಕ್ಕಳು ಕೆಲ ತಿಂಗಳವರೆಗೆ ಸತತವಾಗಿ ಬಿಕ್ಕಳಿಸುತ್ತಲೇ ಇರುತ್ತದೆ. ಕೆಲವರಂತೂ, ನಾನು ಈಗಷ್ಟೇ ಮಗುವಿಗೆ ಹಾಲು ಕುಡಿಸಿದ್ದೆ, ಆದರೆ ಮಗು ಈಗ ಬಿಕ್ಕಳಿಸುತ್ತಿದೆ ಎಂದು ಹೇಳುತ್ತಾರೆ. ಹಾಗಾದ್ರೆ ಪುಟ್ಟ ಮಕ್ಕಳು ಬಿಕ್ಕಳಿಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ವೈದ್ಯರ ಪ್ರಕಾರ, ಶಿಶುಗಳು ಅಮ್ಮನ ಹೊಟ್ಟೆಯಲ್ಲಿರುವಾಗಲೇ ಬಿಕ್ಕಳಿಸುವುದಕ್ಕೆ ಶುರು ಮಾಡುತ್ತದೆ. ಇನ್ನು ಹುಟ್ಟಿದ ನಂತರ, ಮಗು ಸ್ತನಪಾನ ಮಾಡಿದ ಮೇಲೂ ಬಿಕ್ಕಳಿಕೆ ಬರುವುದಕ್ಕೆ ಕಾರಣವೇನೆಂದರೆ, ಮಗು ಹಾಲು ಕುಡಿಯುವಾಗ, ಹಾಲು ಸಿಗದೇ, ಅನಿಲ ಸೇವನೆ ಮಾಡುತ್ತದೆ. ಹಾಗಾಗಿ ಅದಕ್ಕೆ ಹಾಲಿನ ಸೇವನೆ ಬಳಿಕವೂ ಬಿಕ್ಕಳಿಕೆ ಬರುತ್ತದೆ. 5 ನಿಮಿಷ ಕಾದರೆ ಬಿಕ್ಕಳಿಕೆ ನಿಂತು ಹೋಗುತ್ತದೆ. ಬಳಿಕ ನೀವು ಅದಕ್ಕೆ ಸ್ಪೂನ್ ಸಹಾಯದಿಂದ ನೀರು ಕುಡಿಸಬಹುದು.
ಆದರೆ ಯಾವುದೇ ಕಾರಣಕ್ಕೂ ಮಗು ಬಿಕ್ಕಳಿಸುತ್ತಿರುವಾಗಲೇ, ನೀವು ನೀರು, ಹಾಲು ಕೊಟ್ಟರೆ, ಅದು ನೆತ್ತಿಗೆ ಏರಿ, ಕೆಮ್ಮು ಬರಬಹುದು. ಇನ್ನು ನಿಮ್ಮ ಮಗುವಿಗೆ ಪ್ರತಿದಿನ ಸ್ವಲ್ಪ ಸ್ವಲ್ಪ ಗ್ರೈಪ್ ವಾಟರ್ ಕುಡಿಸಿ, ಇದು ಹೊಟ್ಟೆಯ ಸಮಸ್ಯೆಯೊಂದಿಗೆ, ಇನ್ನುಳಿದ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ಮಗು 10 ನಿಮಿಷದವರೆಗೆ ಬಿಕ್ಕಳಿಸಿದರೆ, ಅದು ನಾರ್ಮಲ್ ಎಂದರ್ಥ. ಆದರೆ ಮಗು 15 ನಿಮಿಷಕ್ಕೂ ಹೆಚ್ಚು, ಸತತವಾಗಿ ಬಿಕ್ಕಳಿಸಿದರೆ, ಈ ಬಗ್ಗೆ ವೈದ್ಯರ ಬಳಿ ಖಂಡಿತ ವಿಚಾರಿಸಿ.