Spiritual Story: ಏನಾದರೂ ತೊಂದರೆಯಾದಾಗ, ಶನಿ ವಕ್ಕರಿಸದಂತಿದೆ. ಅದಕ್ಕೆ ಜೀವನದಲ್ಲಿ ಇಷ್ಟೆಲ್ಲ ತೊಂದರೆಗಳಾಗುತ್ತಿದೆ ಅಂತಾ ಗೊಣಗುವ ಹಲವರನ್ನು ನಾವು ನೋಡಿದ್ದೇವೆ. ಏಕೆಂದರೆ ಶನಿ ಕಾಟ ಶುರುವಾದರೆ, ಶನಿ ಸಿಕ್ಕಾಪಟ್ಟೆ ಚಡಪಡಿಸುವಂತೆ ಮಾಡುತ್ತಾನೆ. ಜೊತೆ ಸ್ವಲ್ಪ ಸ್ವಲ್ಪ ಶುಭಫಲಗಳನ್ನು ಕೊಡುತ್ತಾನೆಂದು ಹೇಳುತ್ತಾರೆ. ಹಾಗಾದ್ರೆ ಸಾಡೇಸಾಥಿ ಇದ್ದವರ ಜೀವನ ಯಾವ ರೀತಿ ಇರತ್ತೆ ಅಂತಾ ತಿಳಿಯೋಣ ಬನ್ನಿ..
ಸಾಡೇಸಾಥಿ ಅಂದ್ರೆ ಏಳುವರೆ ಶನಿ. ಎರಡುವರೆ ವರ್ಷದಂತೆ ಮೂರು ಭಾಗವಾದಾಗ, ಏಳೂವರೆ ವರ್ಷವಾಗುತ್ತದೆ. ಮೊದಲ ಎರಡುವರೆ ವರ್ಷ ಶನಿ ದೇಹದ ಮೇಲ್ಭಾಗದಲ್ಲಿರುತ್ತಾನೆ. ಈ ವೇಳೆ ಮಾನಸಿಕ ತೊಂದರೆ ಇರುತ್ತದೆ. ಕೆಟ್ಟ ಆಲೋಚನೆ, ಕೊಂಕು ಮಾತು, ಚುಚ್ಚು ಮಾತು, ಮಾನಸಿಕ ಹಿಂಸೆ ನೆಮ್ಮದಿಯೇ ಇಲ್ಲದಿರುವಂತಾಗುತ್ತದೆ. ಅಲ್ಲದೇ, ಸರಿಯಾಗಿ ಊಟ ಸೇರುವುದಿಲ್ಲ. ಇದರಿಂದ ಆರೋಗ್ಯವೂ ಹಾಳಾಗಬಹುದು.
ಇನ್ನು ಮುಂದಿನ ಎರಡೂವರೆ ವರ್ಷ ಶನಿ ಹೊಟ್ಟೆಯ ಭಾಗಕ್ಕೆ ಒಕ್ಕರಿಸುತ್ತಾನೆ. ಆಗ ನಿಮಗೆ ಹೊಟ್ಟೆಯ ಸಮಸ್ಯೆ ಬರುತ್ತದೆ. ಅಜೀರ್ಣ ಸಮಸ್ಯೆ ಸೇರಿ ಹೊಟ್ಟೆ ನೋವು ಇತ್ಯಾದಿ ಆರೋಗ್ಯ ಸಮಸ್ಯೆಯಾಗುತ್ತದೆ. ಏಕೆಂದರೆ, ಶನಿ ಮೇಲ್ಭಾಗದಿಂದ ಮಧ್ಯಭಾಗಕ್ಕೆ ಬಂದಿರುತ್ತಾನೆ. ಹಾಗಾಗಿ ಏನೂ ಚಿಂತೆ ಇರುವುದಿಲ್ಲ. ಒಳ್ಳೊಳ್ಳೆ, ರುಚಿ ರುಚಿಯಾದ ಊಟ ಸಿಗುತ್ತದೆ. ಹಾಗಾಗಿ ಸಿಕ್ಕಿದ್ದನ್ನು ಚೆನ್ನಾಗಿ ಬಾರಿಸಿದ ಕಾರಣ, ಹೊಟ್ಟೆನೋವು ಬರುತ್ತದೆ.
ಇನ್ನು ಉಳಿದ ಎರಡೂವರೆ ವರ್ಷ ಶನಿ ಕಾಲಿಗೆ ಬರುತ್ತಾನಂತೆ, ಹೊಸತರಲ್ಲಿ ಕಾಲಿಗೆ ಪೆಟ್ಟಾಗುವುದು, ಕಾಲು ನೋವು ಇದ್ದರೂ, ಕೊನೆಗೆ ಶನಿ ನಮ್ಮನ್ನು ಬಿಟ್ಟು ಹೋಗುವಾಗ, ಸುಖ, ಉತ್ತಮ ಆರ್ಥಿಕತೆ, ಅಭಿವೃದ್ಧಿ ಕೊಟ್ಟು ಹೋಗುತ್ತಾನೆ ಅನ್ನೋ ನಂಬಿಕೆ ಇದೆ. ಹಾಗಾಗಿ ಶನಿದೆಸೆ ಶುರುವಾದಾಗ, ಆದಷ್ಟು ಉತ್ತಮ ಕೆಲಸಗಳನ್ನೇ ಮಾಡಿ. ಶನಿ ಸ್ತೋಸ್ತ್ರ ಪಠಿಸಿ, ಹನುಮಾನ್ ಚಾಲೀಸಾ ಕೇಳಿ ಅಥವಾ ಓದಿ.
ದೇವರ ಚಿತ್ರವಿರುವ ಪೆಂಡೆಂಟ್ ಧರಿಸಬಾರದು ಅಂತಾ ಹೇಳುವುದೇಕೆ ಗೊತ್ತಾ..?