Tuesday, April 15, 2025

Latest Posts

ಚಟ ಅಂದ್ರೇನು..? ಮಾನಸಿಕ ರೋಗದ ಬಗ್ಗೆ ವೈದ್ಯರಿಂದ ವಿವರಣೆ..

- Advertisement -

Health Tips: ನಾವು ನಿಮಗೆ ಮಾನಸಿಕ ಅನಾರೋಗ್ಯ ಎಂದರೇನು. ಹದಿಹರೆಯದ ಮಕ್ಕಳಿಗೆ ಒಮ್ಮೆ ಚಟ ಹಿಡಿದರೆ, ಅವರೇನು ಮಾಡುತ್ತಾರೆ..? ಈ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಚಟ ಅಂದರೇನು ಎನ್ನುವ ಬಗ್ಗೆ ವೈದ್ಯರು ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಕೆಲವು ಚಟುವಟಿಕೆಗಳು ಇಷ್ಟವಿದ್ದರೂ, ಇಲ್ಲದಿದ್ದರೂ ಅದನ್ನು ತಪ್ಪದೇ, ಮೈಗೂಡಿಸಿಕೊಳ್ಳುವುದೇ ಚಟ. ಚಟ ಹಿಡಿದ ಮೇಲೆ ಅದು ನಮ್ಮನ್ನು ನಿಗ್ರಹಿಸುತ್ತದೆ ಹೊರತು, ನಾವು ಅದನ್ನು ನಿಗ್ರಹಿಸಲು ಆಗುವುದಿಲ್ಲ. ಉದಾಹರಣೆಗೆ ಒಮ್ಮೆ ಹೆಣ್ಣು, ಹೆಂಡ, ಡ್ರಗ್ಸ್‌ ಇತ್ಯಾದಿ ಕೆಟ್ಟ ಅಭ್ಯಾಸಗಳು ಮೊದಲ ಬಾರಿ ಮೈಗೂಡಿಸಿಕೊಂಡಾಗ, ಅದು ದೇಹಕ್ಕೆ ಸುಖ ಕೊಡುತ್ತದೆ. ಮಾರನೇಯ ದಿನ ಆ ಸುಖ ಮರೆತು ಹೋಗುತ್ತದೆ. ಮತ್ತೆ ಆ ಸುಖವನ್ನು ಪಡೆಯಬೇಕೆಂದು ಮನುಷ್ಯ ಪದೇ ಪದೇ ಅದೇ ಕೆಲಸವನ್ನು ಮಾಡಿ, ಚಟವನ್ನು ಮೈಗೂಡಿಸಿಕೊಂಡು ಬಿಡುತ್ತಾನೆ. ಹೀಗೆ ಮನುಷ್ಯನಿಗೆ ಚಟ ಹತ್ತುತ್ತದೆ.

ಇಷ್ಟೇ ಅಲ್ಲದೇ, ಹಣ ಮಾಡುವ ಚಟ ಕೂಡ ಹತ್ತುತ್ತದೆ. ಅದು ಎಷ್ಟರ ಮಟ್ಟಿಗೆ ಎಂದರೆ, ಪತ್ನಿ- ಮಕ್ಕಳು ಅಥವಾ ತಂದೆ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡ, ಅದನ್ನು ಲೆಕ್ಕಿಸದೇ, ತಾನು ದುಡಿಯಬೇಕು. ಹಣ ಮಾಡಬೇಕು ಎನ್ನುವ ಮಟ್ಟಿಗೆ ಹಣದ ಚಟ ಹಿಡಿಯುತ್ತದೆ. ಇಂಥ ಚಟಗಳು ಕೂಡ ಮನುಷ್ಯನ ಜೀವನವನ್ನು ಹಾಳು ಮಾಡುತ್ತದೆ.

ಮನೋವೈದ್ಯರ ಪ್ರಕಾರ, ಚಟ ಎಂದರೆ ರೋಗ. ಏಕೆಂದರೆ ಚಟ ಮೆದುಳಿನ ಬಲವನ್ನು ಕಸಿದುಕೊಂಡು ಬಿಡುತ್ತದೆ. ಅಲ್ಲದೇ, ಬದುಕನ್ನು ವಿನಾಶದ ಹಾದಿಗೆ ಕೊಂಡೊಯ್ಯುತ್ತದೆ. ಹಾಗಾಗಿ ಚಟವನ್ನು ಮಾನಸಿಕ ರೋಗವೆಂದು ಕರೆಯಲಾಗುತ್ತದೆ. ಚಟ ಇದ್ದವರ ಬಳಿ ನೀವು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಮಾತನಾಡಿದರೂ ಪ್ರಯೋಜನವಾಗುವುದಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಈ ಚಟ್ನಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ..

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 2

- Advertisement -

Latest Posts

Don't Miss