ಮಲಬದ್ಧತೆ ಅಂದ್ರೇನು..? ಇದರಿಂದ ಮುಕ್ತಿ ಹೊಂದುವುದು ಹೇಗೆ..?

Health Tips: ಆಹಾರ ಸೇವನೆಯ ಬಳಿಕ, ಆ ಆಹಾರ ಮಲದ ಮುಖಾಂತರ ನಮ್ಮ ದೇಹದಲ್ಲಿ ಆಚೆ ಹೋಗುತ್ತದೆ. ಅದು ಆರೋಗ್ಯಕರ ಸಂಕೇತ. ಆದರೆ ನೀವು ಆಹಾರ ಸೇವಿಸಿದರೂ, ನಾಲ್ಕೈದು ದಿನವಾದ್ರೂ ನಿಮಗೆ ಮಲವಿಸರ್ಜನೆಯಾಗದಿದ್ದಲ್ಲಿ, ಅದು ಮಲಬದ್ಧತೆ ಸಮಸ್ಯೆಯಾಗಿರುತ್ತದೆ. ಹೀಗಾದಾಗ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ.

ವೈದ್ಯರಾದ ಡಾ.ಆಂಜೀನಪ್ಪ ಅವರು ಈ ಬಗ್ಗೆ ವಿವರಿಸಿದ್ದು, ಮೋಷನ್ ಬಂದಾಗಲಷ್ಟೇ ನಾವು ಮಾಡಬೇಕು. ಅದನ್ನನು ಬಿಟ್ಟು ಮೋಷನ್ ಬರದಿದ್ದಾಗಲೂ, ಒತ್ತಡ ಹಾಕಿ, ಮಲವಿಸರ್ಜನೆ ಮಾಡುವುದು ತಪ್ಪು. ಹೀಗೆ ಮಾಡಿದಾಗಲೇ, ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಹೀಗಾಗಬಾರದು ಅಂದ್ರೆ, ನನಾವು ಸೇವಿಸುವ ಆಹಾರದಲ್ಲಿ ಫೈಬರ್ ಅಂಶವಿರಬೇಕು.

ಫೈಬರ್ ಅಂಶವಿದ್ದಾಗ, ಅದು ನಾವು ತಿಂದ ಆಹಾರವನ್ನು ಸರಿಯಾಗಿ ಜೀರ್ಣಗೊಳಿಸಿ, ಮಲವಿಸರ್ಜನೆಗೆ ಅನುಕೂಲ ಮಾಡಿಕೊಡುತ್ತದೆ. ಹಾಗಾಗಿ ನಾವು ತಿನ್ನುವ ಆಹಾರದಲ್ಲಿ ಫೈಬರ್ ಅಂಶವಿರಬೇಕು. ಅದಕ್ಕಾಗಿ ನಾವು ಪ್ರತಿದಿನ ಊಟದ ಜೊತೆಗೆ, ತರಕಾರಿ ಸೇವನೆ ಮಾಡಬೇಕು. ಚೆನ್ನಾಗಿ ನೀರು ಕುಡಿಯಬೇಕು. ಜ್ಯೂಸ್ ಬದಲು ಹಣ್ಣುಗಳ ಸೇವನೆ ಮಾಡಬೇಕು. ಸೊಪ್ಪು, ಮೊಳಕೆ ಬರಿಸಿದ ಕಾಳಿನ ಸೇವನೆ ಕೂಡ ಅತ್ಯಗತ್ಯ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

About The Author