Health tips: ಎಚ್ಐವಿ ಅಂದ್ರೆ ಒಂದು ಮಾರಕ ಖಾಯಿಲೆ. ಆ ಖಾಯಿಲೆ ಇದ್ದವರ ರಕ್ತ, ಅಥವಾ ಎಂಜಿಲು ಇನ್ನೊಬ್ಬರಿಗೆ ತಾಕಬಾರದು. ಹಾಗೆ ತಾಕಿದರೆ, ಅವರಿಗೂ ಎಚ್‌ಐವಿ ಹರಡುವ ಸಾಧ್ಯತೆ ಇರುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಹೆಚ್‌ಐವಿ ಅಂದ್ರೇನು..? ಅದರ ಲಕ್ಷಣಗಳೇನು ಅಂತಾ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಹೆಚ್‌ಐವಿ ಹೇಗೆ ಬರುತ್ತದೆ ಎಂದರೆ, ಒಬ್ಬರ ರಕ್ತ ಅಥವಾ ಎಂಜಿಲು ಇನ್ನೊಬ್ಬರ ದೇಹ ಸೇರಿದಾಗ, ಅಥವಾ ದೈಹಿಕ ಸಂಬಂಧವಿದ್ದಾಗ ಹೆಚ್‌ಐವಿ ಹರಡುತ್ತದೆ. ಈ ಬಗ್ಗೆ ವಿವರಿಸಿದ ಡಾ.ಸುರೇಂದ್ರ ಹೀಗೆ ಹೇಳಿದ್ದಾರೆ. ಮಗುವಿಗೆ ಅನೇಮಿಯಾ ಬಂದ ಕಾರಣಕ್ಕೆ, ಸರಿಯಾಗಿ ಟೆಸ್ಟ್ ಮಾಡದೇ, ಇನ್ನೊಬ್ಬರ ರಕ್ತವನ್ನು ಅದರ ದೇಹಕ್ಕೆ ಸೇರಿಸಿದ ಕಾರಣ, ಆ ಮಗುವಿಗೆ ಹೆಚ್‌ಐವಿ ಬಂದಿತ್ತು.
ಇನ್ನೊಂದು ಮಗುವನ್ನು ಇದೇ ರೀತಿ ಚಿಕಿತ್ಸೆಗೆ ಕರೆತಂದಾಗ, ಆ ಮಗು ದತ್ತು ತೆಗೆದುಕೊಂಡಿದ್ದರು. ಮತ್ತು ಆ ಮಗುವಿನ ತಂದೆ ತಾಯಿ ಏಡ್ಸ್ ರೋಗದಿಂದ ತೀರಿಕೊಂಡಿದ್ದರು. ಹಾಗಾಗಿ ಆ ಮಗು ಹೆಚ್‌ಐವಿ ಪಾಸಿಟಿವ್ ಆಗಿತ್ತು. ಈ ರೀತಿ ದತ್ತು ತೆಗೆದುಕೊಳ್ಳುವಾಗ, ಇನ್ನೊಬ್ಬರ ರಕ್ತವನ್ನು ತೆಗೆದುಕೊಳ್ಳುವಾಗ, ಮುನ್ನೆಚ್ಚರಿಕೆ ವಹಿಸಬೇಕು.
ಇನ್ನು ಏಡ್ಸ್ ಲಕ್ಷಣಗಳು ಏನೆಂದರೆ, ನಿಮೋನಿಯಾ ಬರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಬ್ರೇನ್ ಫಿವರ್ ಆಗುತ್ತದೆ. ಕ್ರಮೇಣ ತೂಕ ಕಡಿಮೆಯಾಗುತ್ತದೆ. ಇವು ಏಡ್‌ಸ್ ಲಕ್ಷಣಗಳು. ಕೆಲವರಿಗೆ ಮೈ ತುಂಬ ಕಜ್ಜಿಗಳಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಗರ್ಭಿಣಿಯಾದ ತಕ್ಷಣ ಈ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಿ..
ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?
ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..