Health tips: ಓರ್ವ ಮನುಷ್ಯ ತಲೆ ಕೆಟ್ಟವರಂತೆ ಆಡಿದಾಗ, ಅವನು ಅಬ್ನಾರ್ಮಲ್ ಮನುಷ್ಯ ಎನ್ನುತ್ತೇವೆ. ಯಾಕಂದ್ರೆ, ಅವನು ಎಲ್ಲರಂತೆ, ಸಾಧಾರಣವಾಗಿ ಬಿಹೇವ್ ಮಾಡುವುದಿಲ್ಲ. ಅವನ ಬಿಹೇವಿಯರ್ ಇನ್ನೊಬ್ಬರಿಗೆ ಕಿರಿಕಿರಿಯುಂಟು ಮಾಡುತ್ತದೆ. ಹಾಗಾದ್ರೆ ನಾರ್ಮಲ್ ಅಬ್ನಾರ್ಮಲ್ ಅಂದ್ರೇನು..? ಮನಸ್ಸಿಗೂ ರೋಗ ಬರುತ್ತಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ವಯಸ್ಸಿಗೆ ತಕ್ಕಂತೆ ಜೀವಿಸುವ ಮನುಷ್ಯನನ್ನು ಆರೋಗ್ಯಕರ ಮನಸ್ಥಿತಿಯ ಮನುಷ್ಯನೆಂದು ಕರೆಯುತ್ತಾರೆ. ಮಗು ಚಿಕ್ಕಂದಿನಲ್ಲಿ ತುಂಬಾ ಕೀಟಲೆಗಳನ್ನು ಮಾಡುತ್ತೆ. ಶಾಲೆಗೆ ಹೋಗುತ್ತಾ ಸರಿಯಾಗುತ್ತೆ. ಕಾಲೇಜು ಮೆಟ್ಟಲೇರಿದ ಮೇಲೆ, ಓದಿನ ಬಗ್ಗೆ ಗಮನ ಹರಿಸುತ್ತಾನೆ. ನಂತರ ಕೆಲಸ ಸಿಕ್ಕ ಬಳಿಕ, ಜವಾಬ್ದಾರಿ ಬರುತ್ತದೆ. ಹೀಗೆ ವಯಸ್ಸಾದ ಬಳಿ ಗಾಂಭೀರ್ಯ ಬರುತ್ತದೆ. ಇದು ಓರ್ವ ಮನುಷ್ಯನ ಆರೋಗ್ಯಕರ ಜೀವನ.
ಅದೇ ಒಂದು ಮಗು ಚಿಕ್ಕಂದಿನಲ್ಲೂ ಕೀಟಲೆ ಮಾಡಿ, ಶಾಲೆಗೆ, ಕಾಲೇಜಿಗೆ, ಬಳಿಕ ಮದುವೆ ವಯಸ್ಸಿಗೆ ಬಂದು, ಮುದುಕನಾದ ಮೇಲೂ ಬುದ್ಧಿ ಇಲ್ಲದವರಂತೆ ಪೆದ್ದು ಪೆದ್ದಾಗಿ ವರ್ತಿಸಿದರೆ, ಆ ಮನುಷ್ಯನ ಮಾನಸಿಕ ಸ್ಥಿತಿ ಸರಿ ಇಲ್ಲವೆಂದು ಅರ್ಥ. ಅಂಥವರನ್ನೇ ಅಬ್ನಾರ್ಮಲ್ ಎಂದು ಕರೆಯಲಾಗುತ್ತದೆ. ಏಕೆಂದರೆ ಇವರ ಬುದ್ಧಿ ಹತೋಟಿಯಲ್ಲಿ ಇರುವುದಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಗರ್ಭಿಣಿಯಾದ ತಕ್ಷಣ ಈ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಿ..
ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?
ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..