Health Tips: ದೇಹದಲ್ಲಿರುವ ಬೆವರು ಹೊರಗೆ ಹೋದಾಗ, ನಮ್ಮ ದೇಹದಲ್ಲಿ ದುರ್ಗಂಧ ಬರುತ್ತದೆ. ಅದರಲ್ಲೂ ಸ್ಪ್ರೇ ಹೆಚ್ಚಾಗಿ ಯಾರು ಬಳಸುತ್ತಾರೋ, ಅಂಥವರ ದೇಹದಲ್ಲೇ ಹೆಚ್ಚು ದುರ್ಗಂಧ ಬರುತ್ತದೆ. ಹಾಗಾದ್ರೆ ದೇಹದ ದುರ್ಗಂಧವನ್ನು ಹೇಗೆ ಹೋಗಲಾಡಿಸುವುದು. ಈ ಬಗ್ಗೆ ವೈದ್ಯರು ಏನೆಂದು ಸಲಹೆ ಕೊಟ್ಟಿದ್ದಾರೆಂದು ತಿಳಿಯೋಣ ಬನ್ನಿ..
ದೇಹದಲ್ಲಿ ಬೆವರು ಬಂದಾಗ, ದುರ್ಗಂಧ ಹೆಚ್ಚಾಗಿದ್ದರೂ ಕೂಡ, ನಮ್ಮ ದೇಹದ ಬೆವರು ಹೊರಗೆ ಹೋದಾಗಲೇ, ನಾವು ಹೆಚ್ಚಾಗಿ ಆರೋಗ್ಯವಾಗಿರುತ್ತೇವೆ. ಆದರೆ ಇದರಿಂದ ದೇಹಕ್ಕೆ ದುರ್ಗಂಧ ಬರಬಾರದು ಅಂದ್ರೆ, ನಾವು ಚೆನ್ನಾಗಿ ನೀರು ಕುಡಿಯಬೇಕು. ನೀರು ಕುಡಿದರೆ, ಬೆವರಿನ ಮೂಲಕ ಹೋಗುವಂಥ ನೀರು, ಮೂತ್ರದ ಮೂಲಕ ಹೊರಹೋಗುತ್ತದೆ.
ಇನ್ನು ದೇಹದ ದುರ್ಗಂಧ ಹೋಗಲಾಡಿಸಲು ನೀವು ಲಾವಂಚದ ಕಶಾಯ ಮಾಡಿ, ರಾತ್ರಿ ಮತ್ತು ಬೆಳಿಗ್ಗೆ ಸೇವಿಸಬೇಕು. ಕೊಂಚ ಲಾವಂಚ ತೆಗೆದುಕೊಂಡು ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಅದನ್ನು ಕುದಿಸಿ, ಕಶಾಯ ಮಾಡಿಕೊಳ್ಳಬೇಕು. ಬೆಳಿಗ್ಗೆ 1ವರೆ ಎಂಎಲ್, ರಾತ್ರಿ 1ವರೆ ಎಂಎಲ್‌ನಂತೆ ಅದನ್ನು ಸೇವಿಸಬೇಕು. ಹೀಗೆ ಮಾಡಿದ್ದಲ್ಲಿ, ದೇಹದ ದುರ್ಗಂಧ ಹೋಗುತ್ತದೆ.
ಇನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶ್ರೀಗಂಧವನ್ನು ತೇಯ್ದು, 1 ಚಮಚ ಶ್ರೀಗಂಧದ ಪೇಸ್ಟನ್ನು ಸೇವಿಸಬೇಕು. ಆದರೆ ಯಾವುದೇ ಕಾರಣಕ್ಕೂ ಶ್ರೀಗಂಧದ ಪುಡಿಯನ್ನು ಖರೀದಿಸಿ, ಸೇವಿಸಬೇಡಿ. ಇದಕ್ಕಿಂತ, ಶ್ರೀಗಂಧದ ಕೊರಡನ್ನು, ಸಾಣೆ ಕಲ್ಲಿನ ಮೇಲೆ ತೇಯ್ದು ಬಳಸುವುದು ಉತ್ತಮ. ದೇಹದ ದುರ್ಗಂಧ ಹೋಗಲಾಡಿಸಲು, ವೈದ್ಯರು ಇನ್ನು ಏನೇನು ಟಿಪ್ಸ್ ಕೊಟ್ಟಿದ್ದಾರೆಂದು ತಿಳಿಯಲು ವೀಡಿಯೋ ನೋಡಿ..