Health Tips: ನಾವು ಈಗಾಗಲೇ ಪಟಾಕಿಯಿಂದ ಗಾಯ ಮಾಡಿಕೊಂಡಾಗ, ಹೇಗೆ ಪ್ರಥಮ ಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದೇವೆ. ಅದೇ ರೀತಿ ಇಂದು ವೈದ್ಯರಾದ ಡಾ.ಆಂಜೀನಪ್ಪ ಸುಟ್ಟ ಗಾಯವಾದಾಗ, ಏನು ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ, ಕಳೆದ 40 ವರ್ಷಗಳಿಂದ, ಪ್ರತೀ ದೀಪಾವಳಿ ಹಬ್ಬಕ್ಕೆ, ಕನಿಷ್ಠ 20 ಜನರಾದರೂ ಈ ಸುಟ್ಟ ಗಾಯಗಳಿಗೆ, ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಆದರೆ ನೀವು ಪಟಾಕಿ ಹಚ್ಚುವಾಗ, ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ, ಒಮ್ಮೆ ದೃಷ್ಟಿ ಹೋದರೆ, ಬರುವುದು ತುಂಬಾ ಕಷ್ಟ. ಹಾಗಾಗಿ ಕಣ್ಣಿನ ಆರೋಗ್ಯವನ್ನು ಮಾತ್ರ, ಸದಾ ಕಾಪಾಡಿಕೊಳ್ಳಲೇಬೇಕು.
ಇನ್ನು ಬೇರೆ ಪಟಾಕಿ ಬಳಕೆಯಿಂದ, ಹಸಿರು ಪಟಾಕಿ, ನಮಗೂ, ನಮ್ಮ ಆರೋಗ್ಯಕ್ಕೂ ಮತ್ತು ನಮ್ಮ ಪರಿಸರಕ್ಕೂ ತುಂಬಾ ಉತ್ತಮ ಅಂತಾರೆ ವೈದ್ಯರು. ಇನ್ನು, ಸುಟ್ಟ ಗಾಯಕ್ಕೆ ಪ್ರಥಮ ಚಿಕಿತ್ಸೆ ತಣ್ಣೀರು. ನಿಮಗೆ ಸುಟ್ಟ ಗಾಯವಾದಾಗ, ಆದಷ್ಟು ಬೇಗ ತಣ್ಣೀರು ಹಾಕಿಕೊಳ್ಳಿ. ಕೆಲವರಿಗೆ ಸುಟ್ಟಗಾಯಕ್ಕೆ ತಣ್ಣೀರು ಹಾಕಿದರೆ, ಸೆಪ್ಟಿಕ್ ಆಗುತ್ತದೆ. ಬೊಬ್ಬೆ ಬರುತ್ತದೆ ಅನ್ನೋ ತಪ್ಪು ತಿಳುವಳಿಕೆ ಇದೆ. ಆದರೆ ಸುಟ್ಟ ಗಾಯಕ್ಕೆ ತಣ್ಣೀರು ಹಾಕಿದಾಗಲೇ, ಅದರಿಂದಾಗುವ ತೊಂದರೆ, ಕಡಿಮೆಯಾಗುತ್ತದೆ ಎಂದಿದ್ದಾರೆ ವೈದ್ಯರು.
ವೈದ್ಯರು ನಿಮಗೆ ನೀಡುವ ಇನ್ನೊಂದು ಎಚ್ಚರಿಕೆ ಎಂದರೆ, ಸಿಂಥೆಟಿಕ್ ಬಟ್ಟೆ ಧರಿಸಿ, ಪಟಾಕಿ ಹೊಡೆದರೆ, ಆ ಬಟ್ಟೆಗೆ ಬೇಗ ಬೆಂಕಿ ಕೊತ್ತಿಕೊಳ್ಳುತ್ತದೆ. ಹಾಗಾಗಿ ಸಿಂಥೆಟಿಕ್ ಬಟ್ಟೆ ಧರಿಸಿ, ಪಟಾಕಿ ಹೊಡೆಯಬೇಡಿ. ವೈದ್ಯರು ಈ ಬಗ್ಗೆ ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ವೀಡಿಯೋ ನೋಡಿ.




