Spiritual: ನಮ್ಮ ದೇಶದಲ್ಲಿ ಹಲವಾರು ದೇವಸ್ಥಾನಗಳಿದೆ. ಗಲ್ಲಿಗೊಂದು ದೇವಸ್ಥಾನವೆಂದರೂ ತಪ್ಪಾಗದು. ಚಿಕ್ಕ ಪುಟ್ಟ ದೇವಸ್ಥಾನವಂತೂ ಇದ್ದೇ ಇದೆ. ಅದರಲ್ಲೂ ಹನುಮಂತನ ದೇವಸ್ಥಾನಗಳು ಸಾಕಷ್ಟಿದೆ. ಇಂದು ನಾವು ಭಾರತದ ಪ್ರಸಿದ್ಧ ದಕ್ಷಿಣಾಭಿಮುಖ ಹನುಮಂತನ ದೇವಸ್ಥಾನದ ಬಗ್ಗೆ ಮಾಹಿತಿ ತಿಳಿಯೋಣ.
ದೆಹಲಿಯ ಕನ್ನಾಟ್ ಎಂಬಲ್ಲಿ ದಕ್ಷಿಣಾಭಿಮುಖ ಹನುಮಂತನ ದೇವಸ್ಥಾನವಿದೆ. ಪಾಂಡವರಿಂದ ಈ ದೇವಸ್ಥಾನ ಸ್ಥಾಪನೆಯಾಗಿದ್ದು, ಯಮುನಾ ನದಿ ದಡದಲ್ಲಿರುವ ಈ ಪ್ರದೇಶದ ಐತಿಹಾಸಿಕ ಹೆಸರು ಇಂದ್ರಪ್ರಸ್ಥ. ಇದಕ್ಕೆ ದಕ್ಷಿಮಾಭಿಮುಖ ದೇವಸ್ಥಾನ ಅಂತಾ ಕರೆಯಲು ಕಾರಣವೇನೆಂದರೆ, ಇದು ದಕ್ಷಿಣಕ್ಕೆ ಮುಖ ಮಾಡಿ ಇದೆ. ಹಾಗಾಗಿ ಇದನ್ನು ದಕ್ಷಿಣಾಭಿಮುಖ ಹನುಮಂತ ದೇವಸ್ಥಾನವೆಂದು ಕರೆಯಲಾಗುತ್ತದೆ.
ತುಳಸಿದಾಸರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಇಲ್ಲಿ ಹನುಮಾನ್ ಚಾಲೀಸಾವನ್ನು ಬರೆದಿದ್ದರು ಅಂತಾ ಹೇಳಲಾಗುತ್ತದೆ. ಬರೀ ಹಿಂದೂಗಳಷ್ಟೇ ಅಲ್ಲದೇ, ಮುಸ್ಲಿಂಮರು ಕೂಡ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಮೊಘಲ್ ಚಕ್ರವರ್ತಿ ಅಕ್ಬರ್ ಸಂತಾನಕ್ಕಾಗಿ, ಈ ದೇವಸ್ಥಾನಕ್ಕೆ ಬಂದು ಪ್ರಾರ್ಥಿಸಿದ್ದನಂತೆ. ಇವನಿಗೊಂದು ಪುತ್ರ ಸಂತಾನವಾಗಿದ್ದು, ಇದಾದ ಬಳಿಕ ಅಕ್ಬರ್ ವಿಶೇಷ ಪೂಜೆ ಸಲ್ಲಿಸಿದ ಎನ್ನಲಾಗಿದೆ. ಇಲ್ಲಿ ಹನುಮಂತ ಓಂ ಮತ್ತು ಚಂದ್ರನ ರೂಪದಲ್ಲಿ ಭಾವೈಕ್ಯತೆಗೆ ಹೆಸರಾಗಿದ್ದಾನೆ ಎನ್ನಲಾಗಿದೆ.
ದೇವರ ದಯೆ ಇಲ್ಲದಿದ್ದರೆ, ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುವುದ್ಯಾಕೆ..?