ಆಗಾಗ ತಲೆನೋವು ಕಾಡೋಕ್ಕೆ ಕಾರಣವೇನು..?

Health Tips: ಮಕ್ಕಳಿಗೆ ಆಗಾಗ ತಲೇನೋವು ಕಾಣಿಸಿಕೊಂಡರೆ, ಅದನ್ನು ನೀವು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ, ಇದು ದೃಷ್ಟಿದೋಷದ ಸಂಕೇತವಾಗಿರಬಹುದು ಎಂದು ವೈದ್ಯೆಯಾದ ಡಾ.ಮೈತ್ರಿ ಹೇಳಿದ್ದಾರೆ. ವೈದ್ಯರು ಈ ಬಗ್ಗೆ ಇನ್ನೂ ಏನೇನು ಹೇಳಿದ್ದಾರೆಂದು ತಿಳಿಯೋಣ ಬನ್ನಿ..

ವೈದ್ಯರು ಹೇಳುವ ಪ್ರಕಾರ, ಮಕ್ಕಳಿಗೆ ಸುಮ್ಮ ಸುಮ್ಮನೆ ತಲೆನೋವು ಬರುವುದಿಲ್ಲ. ಅದರಲ್ಲೂ ಪದೇ ಪದೇ ತಲೆನೋವು ಬರುವುದಿಲ್ಲ. ಹಾಗೇನಾದರೂ ನಿಮ್ಮ ಮಕ್ಕಳಿಗೆ ಪದೇ ಪದೇ ತಲೆನೋವು ಬಂತೆಂದರೆ, ಕಣ್ಣಿನ ದೋಷವಿದೆ ಎಂದರ್ಥ ಎನ್ನುತ್ತಾರೆ ವೈದ್ಯರು.

ದೊಡ್ಡವರು ಹೆಚ್ಚಾಗಿ ಕಂಪ್ಯೂಟರ್, ಮೊಬೈಲ್ ಬಳಸುವ ಕಾರಣಕ್ಕೆ ಅವರಿಗೆ ಕನ್ನಡಕ ಬರುತ್ತಿದೆ. ಮಕ್ಕಳು ಕೂಡ ಟಿವಿ, ಮೊಬೈಲ್ ನೋಡುವುದನ್ನು ಹೆಚ್ಚು ಮಾಡಿದ್ದಲ್ಲಿ, ಸ್ಕ್ರೀನ್ ಟೈಮ್ ಹೆಚ್ಚು ಮಾಡಿದ್ದಲ್ಲಿ, ಮಕ್ಕಳಿಗೂ ಕಣ್ಣಿನ ದೋಷ ಬರುತ್ತದೆ. ಅದರಲ್ಲೂ ಕತ್ತಲಲ್ಲಿ ಮೊಬೈಲ್ ನೋಡುವುದರಿಂದ ಬಹುಬೇಗ ದೃಷ್ಟಿದೋಷ ಬರುತ್ತದೆ.

ಮಕ್ಕಳಿಗೆ ಹೀಗೆ ದೃಷ್ಟಿದೋಷ ಬಂದಾಗ, ಅವರಿಗೆ ಸರಿಯಾಗಿ ಅಕ್ಷರಗಳು ಕಾಣಿಸುವುದಿಲ್ಲ. ಇನ್ನು ಕಣ್ಣಿನ ಸಮಸ್ಯೆ ಇದ್ದಲ್ಲಿ, ಮಕ್ಕಳು ಪದೇ ಪದೇ ಕಣ್ಣು ಉಜ್ಜಿಕೊಳ್ಳುತ್ತಿರುತ್ತಾರೆ. ಅವರಿಗೆ ಕಣ್ಣಿನ ಸುತ್ತಲೂ ಕಪ್ಪಾಗುತ್ತದೆ. ಕಣ್ಣಿನ ಸುತ್ತಲೂ ನೋವು ಬರುತ್ತದೆ. ಕಣ್ಣಿನ ಸಮಸ್ಯೆ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..

Joint Pain ಕಾಡ್ತಿದ್ಯಾ? ಇಲ್ಲಿದೆ ಮನೆಮದ್ದು..

ಮಕ್ಕಳ ಈ ಹುಚ್ಚಿಗೆ ಕಾರಣ ಯಾರು?

Liver Cancer ಅಂದ್ರೆ ಏನು? ವೈದ್ಯರ ವಿವರಣೆ ಇಲ್ಲಿದೆ ನೋಡಿ..

About The Author