Monday, April 14, 2025

Latest Posts

ಮುಟ್ಟಿನ ಸಮಯದಲ್ಲಿ ಕಡಿಮೆ ಬ್ಲೀಡಿಂಗ್ ಆಗಲು ಕಾರಣವೇನು..?

- Advertisement -

ಎಲ್ಲಾ ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಬೇರೆ ಬೇರೆ ರೀತಿಯಾಗಿ ನೋವು ಅನುಭವಿಸುತ್ತಾರೆ. ಕೆಲವರಿಗೆ ಮುಟ್ಟಾಗಿದ್ದು, ಮುಗಿದಿದ್ದು ಎರಡೂ ಗೊತ್ತಾಗುವುದಿಲ್ಲ. ಅವರು ಅಷ್ಟು ಆರಾಮವಾಗಿರ್ತಾರೆ. ಇನ್ನು ಕೆಲವರಿಗೆ ಸಿಕ್ಕಾಪಟ್ಟೆ ಹೊಟ್ಟೆನೋವು ,ಬ್ಲೀಡಿಂಗ್ ಇರತ್ತೆ. ಮತ್ತೆ ಕೆಲವರಿಗೆ ಬ್ಲೀಡಿಂಗ್ ಇರೋದಿಲ್ಲಾ. ಹಾಗಾದ್ರೆ ಮುಟ್ಟಿನ ಸಮಯದಲ್ಲಿ ಕಡಿಮೆ ಬ್ಲೀಡಿಂಗ್ ಆಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಕಡಿಮೆ ಬ್ಲೀಡಿಂಗ್‌ ಆಗಲು ಮೊದಲ ಕಾರಣವೆಂದರೆ, ಗರ್ಭಿಣಿಯಾದವರಿಗೆ ಕಡಿಮೆ ಬ್ಲೀಡಿಂಗ್ ಆಗುತ್ತದೆ. ನಿಮಗೆ ತೀರಾ ಕಡಿಮೆ ಬ್ಲೀಡಿಂಗ್ ಆಗುತ್ತಿದೆ ಎಂದಲ್ಲಿ, ನೀವು ವಿವಾಹಿತರಾಗಿದ್ದಲ್ಲಿ, ನೀವು ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿಕೊಳ್ಳಿ. ನೀವು ಇದನ್ನ ಅವೈಡ್ ಮಾಡಿದ್ರೆ, ಮಗುವಿನ ಜೀವಕ್‌ಕೆ ತೊಂದರೆಯುಂಟಾಗುತ್ತದೆ. ಹಾಗಾಗಿ ಈ ಬಗ್ಗೆ ಆದಷ್ಟು ಬೇಗ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು.

ನಿಮಗೆ ಮಕ್ಕಳಾಗಿ, ನೀವು ಆ ಮಗುವಿಗೆ ಹಾಲುಣಿಸುತ್ತಿದ್ದಲ್ಲಿ, ನಿಮ್ಮ ಮುಟ್ಟು ಸರಿಯಾದ ಸಮಯಕ್ಕೆ ಆಗುವುದಿಲ್ಲ. ಅಥವಾ ಮುಟ್ಟಾದರೂ ಬ್ಲೀಡಿಂಗ್ ಹೆಚ್ಚು ಇರುವುದಿಲ್ಲ. ಇನ್ನು ನಿಮಗೆ ವಯಸ್ಸಾಗಿ ನಿಮ್ಮ ಮುಟ್ಟು ನಿಲ್ಲುವ ಸಮಯ ಬಂದಾಗಲೂ ಕಡಿಮೆ ಬ್ಲೀಡಿಂಗ್ ಆಗುತ್ತದೆ. ಅಥವಾ ನಿಮ್ಮದು ಚಿಕ್ಕ ವಯಸ್ಸಾಗಿದ್ದು, ನೀವು ಬೇಗ ಋತುಮತಿಯಾಗಿದ್ದರೂ ಕೂಡ ಬ್ಲೀಡಿಂಗ್ ಕಡಿಮೆ ಇರುತ್ತದೆ.

ಕಡಿಮೆ ಬ್ಲೀಡಿಂಗ್ ಆಗಲು ಇನ್ನೊಂದು ಕಾರಣ ಅಂದ್ರೆ, ನಿಮ್ಮ ಅಮ್ಮ ಅಥವಾ ಅಜ್ಜಿ ಹೀಗೆ ಎಲ್ಲರಿಗೂ ಮುಟ್ಟಿನ ಸಮಯದಲ್ಲಿ ಕಡಿಮೆ ಬ್ಲೀಡಿಂಗ್ ಆಗುತ್ತಿದ್ದರೆ, ನಿಮಗೂ ಕೂಡ ಹೀಗೆ ಆಗಬಹುದು. ಇದು ಅನುವಂಶಿಕವಾಗಿ ಬರುವಂಥದ್ದು. ಇನ್ನು ಪಿಸಿಓಡಿ ಸಮಸ್ಯೆ ಇದ್ದವರಿಗೂ ಹೀಗೆ ಕಡಿಮೆ ಬ್ಲೀಡಿಂಗ್ ಆಗುತ್ತದೆ. ಹೈಪರ್ ಥೈರಾಯ್ಡ್ ಇದ್ದವರಿಗೂ ಕೂಡ ಕಡಿಮೆ ಬ್ಲೀಡಿಂಗ್ ಆಗುತ್ತದೆ. ಅಥವಾ ನೀವು ಹೆಚ್ಚು ತೂಕ ಹೊಂದಿರಬಹುದು. ಅಥವಾ ತೂಕ ಇಳಿಸಿಕೊಂಡಾಗಲೂ ಈ ರೀತಿಯಾಗುತ್ತದೆ. ಎಲ್ಲಕ್ಕಿಂತ ಮುಖ್ಯ ಕಾರಣ ಅಂದ್ರೆ, ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇದ್ದಾಗಲೂ, ಪಿರಿಯಡ್ಸ್ ಸಮಯದಲ್ಲಿ ಕಡಿಮೆ ಬ್ಲೀಡಿಂಗ್ ಆಗುತ್ತದೆ.

ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ 2

ಬೆಳಿಗ್ಗೆ ತಿಂಡಿ ಸರಿಯಾಗಿ ತಿನ್ನದಿದ್ದಲ್ಲಿ ಏನಾಗತ್ತೆ ಗೊತ್ತಾ..?

ಒಂದೇ ವಾರದಲ್ಲಿ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನ ಹೀಗೆ ಕಡಿಮೆ ಮಾಡಿ..

- Advertisement -

Latest Posts

Don't Miss