Spiritual Story: ಪೂಜೆ ಮಾಡುವಾಗ ನಾವು ತೆಂಗಿನಕಾಯಿ, ಹೂವು, ಬಾಳೆಹಣ್ಣು, ಕರ್ಪೂರ, ಎಲೆ ಅಡಿಕೆ ಈ ಎಲ್ಲವನ್ನೂ ಕಡ್ಡಾಯವಾಗಿ ಉಪಯೋಗಿಸುತ್ತೇವೆ. ಹಾಗಾದ್ರೆ ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ನಾವು ಯಾವುದೇ ಹಣ್ಣು ಕಾಯಿಯನ್ನು ದೇವಿರೆಗ ನೈವೇದ್ಯಕ್ಕೆ ಇಟ್ಟರೂ, ಅದು ಅಷ್ಟು ವಿಶೇಷವಾಗುವುದಿಲ್ಲ. ಆದರೆ ತೆಂಗಿನಕಾಯಿ ಮತ್ತು ಬಾಳೆಹಣ್ಣಿನ ನೈವೇದ್ಯವೇ ದೇವರಿಗೆ ಶ್ರೇಷ್ಠ ಎನ್ನಲಾಗುತ್ತದೆ. ಏಕೆಂದರೆ, ಇವೆರಡೂ ಫಲಗಳ ಬೀಜವನ್ನು ಎಂಜಿಲು ಮಾಡಿ, ಪುನಃ ಅದರಿಂದ ಗಿಡ ಬೆಳೆಸಲಾಗುವುದಿಲ್ಲ. ಬದಲಾಗಿ ಇವೆರಡೂ ಫಲಗಳನ್ನು ಎಂಜಿಲು ಮಾಡದೇ ಬೆಳೆಸಲಾಗುತ್ತದೆ. ಹಾಗಾಗಿ ಇವೆರಡೂ ಫಲಗಳು ದೇವರ ನೈವೇದ್ಯಕ್ಕೆ ಶ್ರೇಷ್ಠವಾಗಿದೆ.
ತೆಂಗಿನಕಾಯಿ ಶಿವನ ರೂಪವೆಂದು ಪರಿಗಣಿಸಲಾಗಿದೆ. ಏಕೆಂದರೆ, ಶಿವನಿಗೆ ಹೇಗೆ ಮುಕ್ಕಣ್ಣಿದೆಯೋ, ಅದೇ ರೀತಿ ತೆಂಗಿನಕಾಯಿಯೂ ಮುಕ್ಕಣ್ಣಿದೆ. ಹಾಗಾಗಿ ಇದು ತ್ರಿಮೂರ್ತಿಗಳ ವಾಸಸ್ಥಾನವೆಂದು ಬಣ್ಣಿಸಲಾಗುತ್ತದೆ.
ಹಿಂದೂಗಳ ಇನ್ನೊಂದು ವಿಶೇಷತೆ ಅಂದ್ರೆ, ಹಣ್ಣು ಮಕ್ಕಳು ದೇವರ ಕೋಣೆಯೊಳಗೆ ಹೋಗಿ, ದೇವರನ್ನು ಪೂಜಿಸುವಂತಿಲ್ಲ. ಮೂಲ ವಿಗ್ರಹವನ್ನು ಮುಟ್ಟುವಂತಿಲ್ಲ. ಏಕೆಂದರೆ, ಆಕೆ ಋತುಮತಿಯಾಗುತ್ತಾಳೆ. ಹಾಗಾಗಿ ಆಕೆ ಲಕ್ಷ್ಮೀ ದೇವಿಯ ಪೂಜೆ ಮಾಡುವಾಗ, ತೆಂಗಿನಕಾಯಿಯನ್ನು ಕಲಶದ ಮೇಲಿಟ್ಟು ಅಲಂಕರಿಸಿ, ಶ್ಲೋಕಗಳನ್ನು ಹೇಳಿ, ಅದೇ ಕಲಶವನ್ನು ಲಕ್ಷ್ಮೀ ದೇವಿಯೆಂದು ಪೂಜಿಸುತ್ತಾರೆ. ಈ ಮೂಲಕ ತೆಂಗಿನಕಾಯಿ ಇನ್ನಷ್ಟು ಶ್ರೇಷ್ಠವಾಗುತ್ತದೆ.
ಪೂಜೆ, ಹೋಮ-ಹವನ, ಮದುವೆ, ಮುಂಜಿ, ಗೃಹಪ್ರವೇಶ, ಇತ್ಯಾದಿ ಸಮಾರಂಭಗಳಲ್ಲಿ ತೆಂಗಿನಕಾಯಿ ಇರಲೇಬೇಕು. ಕಲಶಕ್ಕೆ, ಪೂಜೆಗೆ, ಹೋಮಕ್ಕೆ ಹಾಕಲು ಹೀಗೆ ಹಲವು ವಿಧದಲ್ಲಿ ತೆಂಗಿನಕಾಯಿಯನ್ನು ಬಳಸುವುದು ಸಂಪ್ರದಾಯ. ಇನ್ನು ತೆಂಗಿನಕಾಯಿಯ ಹೊರಭಾಗವನ್ನು ಮನುಷ್ಯನ ಅಹಂಕಾರದೊಂದಿಗೆ ಹೋಲಿಸಲಾಗುತ್ತದೆ. ಮತ್ತು ಒಳಗಿನ ಪದರವನ್ನು ಮೃದುತ್ವಕ್ಕೆ ಹೋಲಿಸಲಾಗುತ್ತದೆ. ಹಾಗಾಗಿ ಅಹಂಕಾರ ಉಪಯೋಗವಾಗದ ವಸ್ತು ಮತ್ತು ನಮ್ಮಲ್ಲಿರುವ ಸಾತ್ವಿಕತೆ ಅಷ್ಟೇ ಎಲ್ಲದಕ್ಕೂ ಉಪಯುಕ್ತ ಅನ್ನೋದು ತೆಂಗಿನಕಾಯಿಯ ಸಂದೇಶ.
ಇನ್ನೊಂದು ನಂಬಿಕೆಯ ಪ್ರಕಾರ, ತೆಂಗಿನ ಕಾಯಿ ದೇವರಿಗೆ ಒಡೆದಾಗ, ಅದರಲ್ಲಿ ಹೂವು ಬಂದರೆ, ಅದು ಅದೃಷ್ಟದ ಸಂಕೇತ. ಇದರಿಂದ ಎಲ್ಲ ಒಳ್ಳೆಯದಾಗುತ್ತದೆ ಎಂಬ ಸಂಕೇತ. ಆದರೆ ಯಾವಾಗ ನೀವು ದೇವರಿಗೆ ಕಾಯಿ ಒಡೆಸಲು ಹೋಗುತ್ತೀರೋ, ಆವಾಗ ಕಾಯಿ ಕೊಳೆತರೆ, ಅದು ಅಶುಭದ ಸಂಕೇತವೆಂದು ನಂಬಿಕೆ ಇದೆ.