Spiritual: ದೇವಸ್ಥಾನದಕ್ಕೆ ಹೋದಾಗ, ಏನೋ ಒಂದು ರೀತಿಯ ಸುಂದರ ಮೌನವಿರುತ್ತದೆ. ಸುಂದರ ವಾತಾವರಣವಿರುತ್ತದೆ. ಸಣ್ಣದಾಗಿ ಕೇಳುವ ಭಕ್ತಿಗೀತೆ, ಆಗಾಗ ಕೇಳುವ ಗಂಟೆ ಸದ್ದು, ಭಕ್ತಿಯನ್ನು ಮೂಡಿಸುತ್ತದೆ. ಸಕಾರಾತ್ಮಕ ಮನಸ್ಥಿತಿಯನ್ನು ತರುತ್ತದೆ. ಮಾನಸಿಕ ನೆಮ್ಮದಿ ನೀಡುತ್ತದೆ. ಹಾಗಾದರೆ ದೇವಸ್ಥಾನದಲ್ಲಿ ಗಂಟೆ ಬಾರಿಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಘಂಟೆಯ ನಾದ ಭಗವಂತನಿಗೆ ಪ್ರಿಯವಾದದ್ದು. ಹಾಗಾಗಿ ದೇವಸ್ಥಾನದಲ್ಲಿ ಘಂಟೆ ಬಾರಿಸಲಾಗುತ್ತದೆ. ಕೆಲವರ ಮನೆಯಲ್ಲೂ ದೇವರ ಪೂಜೆಯ ಸಮಯದಲ್ಲಿ ಘಂಟೆ ಬಾರಿಸಲಾಗುತ್ತದೆ. ಏಕೆಂದರೆ, ಘಂಟೆಯ ಸದ್ದಿನಿಂದ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೇ, ಇದು ಮಾನಸಿಕ ನೆಮ್ಮದಿ ಸಿಗುತ್ತದೆ.
ವಿಜ್ಞಾನದ ಪ್ರಕಾರ, ಘಂಟೆ ಬಾರಿಸುವುದರಿಂದ ಕ್ರಿಮಿಕೀಟಗಳು ನಾಶವಾಗುತ್ತದೆ. ವಾತಾವರಣ ಶುದ್ಧವಾಗುತ್ತದೆ. ಇನ್ನು ಪೂಜೆಯ ವೇಳೆ ಗಂಟೆ ಬಾರಿಸಿದರೆ, ದೇವರು ಜಾಗೃತವಾಗುತ್ತಾನೆ. ಪೂಜೆ ಒಪ್ಪಿಸಿಕೊಳ್ಳುತ್ತಾನೆ ಎಂಬ ನಂಬಿಕೆ ಇದೆ. ದೇವಸ್ಥಾನಕ್ಕೆ ಹೋದಾಗ, ಸೂಪ್ತ ಸ್ಥಿತಿಯಲ್ಲಿರುವ ದೇವರನ್ನು ಎಬ್ಬಿಸಲು, ಗಂಟೆ ಬಾರಿಸಲಾಗುತ್ತದೆ. ಇದರಿಂದ ಸಂತುಷ್ಟಗೊಳ್ಳುವ ದೇವರು, ಆಶೀರ್ವದಿಸುತ್ತಾನೆ ಅನ್ನುವ ನಂಬಿಕೆ ಇದೆ.
ದೇವರ ದಯೆ ಇಲ್ಲದಿದ್ದರೆ, ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುವುದ್ಯಾಕೆ..?




