Sunday, September 8, 2024

Latest Posts

ಸಲಿಂಗ ವ್ಯಕ್ತಿಗಳಾಗಿ ಬದಲಾಗಲು ಕಾರಣವೇನು..?

- Advertisement -

Health Tips: ಸಲಿಂಗ ಪ್ರೇಮದ ಬಗ್ಗೆ ಮನೋವೈದ್ಯರಾದ ಡಾ.ಶ್ರೀಧರ್ ಮಾತನಾಡಿದ್ದು, ಈಗಾಗಲು ಹಲವು ಮಾಹಿತಿಗಳನ್ನು ನೀಡಿದ್ದಾರೆ. ಅದೇ ರೀತಿ ಇಂದು ಸಲಿಂಗ ವ್ಯಕ್ತಿಗಳಾಗಿ ಬದಲಾಗಲು ಕಾರಣವೇನು ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ.

ನಾವು ಈ ಮೊದಲೇ ಹೇಳಿದಂತೆ, ಸಲಿಂಗ ಪ್ರೇಮ ಎನ್ನುವುದು ಅನಾರೋಗ್ಯ, ಕೆಟ್ಟ ಚಟ, ಕೆಟ್ಟ ಗುಣ ಅಲ್ಲ. ಇದೊಂದು ಅಪರೂಪದ ಜೀವನದ ರೀತಿ. ಸಾಮಾನ್ಯ ಜನರಿಗೆ ವಿರುದ್ಧ ಲಿಂಗದವರನ್ನು ನೋಡಿದಾಗ, ಆಕರ್ಷಣೆಯಾಗುತ್ತದೆ. ಆದರೆ ಸಲಿಂಗಿಗಳಲ್ಲಿ ಅವರ ಲಿಂಗದವರನ್ನು ನೋಡಿದಾಗ ಆಕರ್ಷಣೆಯಾಗುತ್ತದೆ. ಓರ್ವ ಹೆಣ್ಣನ್ನು ನೋಡಿ ಇನ್ನೊಂದು ಹೆಣ್ಣು ಆಕರ್ಷಿತವಾಗಿರುವುದು. ಓರ್ವ ಪುರುಷನನ್ನು ನೋಡಿ, ಇನ್ನೋರ್ವ ಪುರುಷ ಆಕರ್ಷಿತನಾಗಿರುವುದು. ಈ ರೀತಿಯಾಗಿರುತ್ತದೆ.

ನೀವು ಸಲಿಂಗಿಗಳಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಇಬ್ಬರಲ್ಲಿ ಒಬ್ಬರಿಗೆ ಹೆಚ್ಚು ಹೆಣ್ಣಿನ ಗುಣ, ಹೆಣ್ಣಿನ ಹಾವಭಾವ ಇರುತ್ತದೆ. ಇನ್ನೊಬ್ಬರಿಗೆ ಪುರುಷರಂಥ ಗುಣ, ಹಾವಭಾವ ಇರುತ್ತದೆ. ಇಬ್ಬರು ಪುರುಷ ಸಲಿಂಗಿಯಲ್ಲಿ ಓರ್ವ ಹೆಣ್ಣಿನಂತೆ ನಡೆದುಕೊಳ್ಳುತ್ತಾನೆ. ಅದೇ ರೀತಿ ಸ್ತ್ರೀ ಸಲಿಂಗಿಗಳಲ್ಲಿ ಓರ್ವ ಹೆಣ್ಣಿನಲ್ಲಿ ಪುರುಷರ ರೀತಿಯ ಸ್ವಭಾವವಿರುತ್ತದೆ. ಆಕೆಗೆ ಗಂಡು ಮಕ್ಕಳ ರೀತಿಯೇ ಬಟ್ಟೆ ತೊಡಬೇಕು. ಅವರಂತೆ ಕೂದಲು ಕತ್ತರಿಸಬೇಕು. ಅವರಂತೆ ನಡೆಯಬೇಕು ಎಂದಿರುತ್ತದೆ.

ಇವರೆಲ್ಲ ಬದಲಾಗುವವರಲ್ಲ. ಇವರಿಗೆ ಹುಟ್ಟಿದಾಗಿನಿಂದಲೇ, ಈ ಭಾವನೆ ಇರುತ್ತದೆ. ಇದು ನಾರ್ಮಲ್ ಇದ್ದವರಿಗೆ ವಿಚಿತ್ರ ಎನ್ನಿಸಿದರೂ. ವಿಶೇಷ ಲೈಂಗಿಕ ಆಸಕ್ತಿ ಇರುವವರು ಹೀಗೆ ಇರುತ್ತಾರೆ. ಈ ಬಗ್ಗೆ ವಿವರವಾಗಿ ತಿಳಿಯಲು ಈ ವೀಡಿಯೋ ನೋಡಿ..

ಈ ಚಟ್ನಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ..

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 2

- Advertisement -

Latest Posts

Don't Miss