ಯಾವುದೇ ಕೆಲಸ ಮಾಡುವಾಗಲೂ, ಮೊದಲು ನಾವು ಪೂಜಿಸುವುದೇ ಗಣೇಶನನ್ನು. ಪ್ರಥಮ ಪೂಜಿತನಾದ ಮಹಾಗಣಪತಿಯನ್ನು ನೆನೆದು, ಕೆಲಸ ಮುಂದುವರಿಸಿದರೆ, ಯಶಸ್ಸು ನಮ್ಮದಾಗುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಆದರೆ ಗಣೇಶನನ್ನು ಏಕದಂತ ಎಂದು ಕರೆಯಲಾಗುತ್ತದೆ. ಹಾಗಾದರೆ, ಗಣೇಶನನ್ನು ಏಕದಂತ ಎಂದು ಕರೆಯಲು ಕಾರಣವೇನು ಅನ್ನೋದರ ಬಗ್ಗೆ ಕಥೆಯನ್ನ ತಿಳಿಯೋಣ ಬನ್ನಿ..
ಒಮ್ಮೆ ಶಿವ ಕೈಲಾಸದಲ್ಲಿ ಧ್ಯಾನ ಮಾಡಲು ಹೋಗುವಾಗ, ಬಾಲ ಗಣೇಶನನ್ನು ಬಾಗಿಲಲ್ಲಿ ನಿಲ್ಲಿಸಿ, ತನ್ನ ಧ್ಯಾನಕ್ಕೆ ಯಾರೂ ಭಂಗ ತರದಂತೆ ನೋಡಿಕೋ, ಯಾರು ನನ್ನನ್ನು ಭೇಟಿಯಾಗಲು ಬಂದರೂ, ಅವರನ್ನು ನನ್ನ ಬಳಿ ಬಿಡದೇ, ನಾನು ಧ್ಯಾನ ಪೂರ್ತಿ ಮುಗಿಸುವವರೆಗೂ, ಕಾಯಲು ಹೇಳು, ಎಂದು ಆದೇಶಿಸಿ, ಹೋಗುತ್ತಾನೆ.
ಅಪ್ಪನ ಮಾತನ್ನು ಮೀರದ ಗಣೇಶ, ಬಾಗಿಲಲ್ಲಿ ನಿಲ್ಲುತ್ತಾನೆ. ಅದೇ ಸಮಯಕ್ಕೆ ಪರಶುರಾಮರು, ಶಿವನ ದರ್ಶನ ಪಡೆಯಲು ಕೈಲಾಸಕ್ಕೆ ಬರುತ್ತಾರೆ. ಆದರೆ ತನ್ನ ತಂದೆ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಅವರ ಧ್ಯಾನವನ್ನು ಯಾರೂ ಭಂಗ ಮಾಡಕೂಡದು ಎಂದು, ನಾನಿಲ್ಲಿ ನಿಂತಿದ್ದೇನೆ. ನೀವು ಅವರಲ್ಲಿಗೆ ಹೋಗುವಂತಿಲ್ಲ ಎಂದು ಹೇಳುತ್ತಾನೆ.
ಪುಟ್ಟ ಬಾಲಕ, ತನಗೇ ಆಜ್ಞೆ ಮಾಡುತ್ತಾನೆಂದು ಸಿಟ್ಟಿಗೀಡಾದ ಪರಶುರಾಮರು, ತಮ್ಮ ಕೈಯಲ್ಲಿದ್ದ ಕೊಡಲಿಯಿಂದ ಗಣೇಶನಿಗೆ ಪೆಟ್ಟು ಕೊಡುತ್ತಾರೆ. ಇದರಿಂದ ಗಣೇಶನ ಹಲ್ಲು ತುಂಡಾಗುತ್ತದೆ. ಗಣೇಶನ ಆಕ್ರಂದನಕ್ಕೆ, ಶಿವನ ಧ್ಯಾನದಿಂದ ಎದ್ದು ಬರುತ್ತಾನೆ. ಆಗ ಪಾರ್ವತಿಗೆ ಪರಶುರಾಮನ ಮೇಲೆ ಕೋಪ ಬರುತ್ತದೆ. ಆಕೆಯ ಕೋಪವನ್ನು ತಣ್ಣಗಾಗಿಸಲು, ಪರಶುರಾಮ ಕ್ಷಮೆ ಕೇಳುತ್ತಾನೆ. ಅಲ್ಲದೇ, ಇಂದಿನಿಂದ ಗಣೇಶ ಏಕದಂತನೆಂದು ಪ್ರಖ್ಯಾತಿ ಪಡೆಯುತ್ತಾನೆ.
ಸ್ನಾನಕ್ಕೂ ಮುನ್ನ ಮತ್ತು ಸ್ನಾನ ಮಾಡಿದ ಬಳಿಕ ಈ ತಪ್ಪುಗಳನ್ನು ಮಾಡಲೇಬೇಡಿ..