Tuesday, December 24, 2024

Latest Posts

ಶ್ರೀರಾಮ 14 ವರ್ಷ ವನವಾಸಕ್ಕೆ ಹೋಗಲು ಕಾರಣವೇನು..?

- Advertisement -

ರಾಮಾಯಣದಲ್ಲಿ ಬರುವ ಪ್ರಮುಖ, ಅತೀ ಮುಖ್ಯ ಪಾತ್ರಧಾರಿಯಾಗಿರುವ ಶ್ರೀರಾಮನ ಬಗ್ಗೆ ಹಲವರು ಓದಿರುತ್ತೀರಿ. ಆದ್ರೆ ಶ್ರೀರಾಮ 14 ವರ್ಷವೇ ಯಾಕೆ ವನವಾಸಕ್ಕೆ ಹೋದ ಅನ್ನೋ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ..

ಜೀವನದಲ್ಲಿ ಅಪ್ಪಿ ತಪ್ಪಿಯೂ ಈ 5 ತಪ್ಪುಗಳನ್ನು ಮಾಡಬೇಡಿ..

ಶ್ರೀರಾಮ ಕಾಡಿಗೆ ಹೋಗಲು ಕೈಕೆ ಕಾರಣ ಅನ್ನೋದು ಎಲ್ಲರಿಗೂ ಗೊತ್ತು. ಶ್ರೀರಾಮ ಇಲ್ಲೇ ಇದ್ದರೆ, ತನ್ನ ಮಕ್ಕಳಿಗೆ ಪಟ್ಟ ಸಿಗುವುದಿಲ್ಲ ಎಂಬ ಕಾರಣಕ್ಕೆ ಕೈಕೆ, ರಾಮನನ್ನು ಕಾಡಿಗೆ ಕಳುಹಿಸಲು ದಶರಥನಿಗೆ ಹೇಳುತ್ತಾಳೆ. ಕೊಟ್ಟ ಮಾತಿಗೆ ತಪ್ಪಬಾರದೆಂಬ ಕಾರಣಕ್ಕೆ, ದಶರಥ ರಾಮನನ್ನು ಕಾಡಿಗೆ ಕಳುಹಿಸುತ್ತಾನೆ. ರಾಮನೊಂದಿಗೆ ಸೀತೆ ಮತ್ತು ಲಕ್ಷ್ಮಣ ಹೋಗುತ್ತಾರೆ. ಆದ್ರೆ ರಾಮನನ್ನು 14 ವರ್ಷವೇ ಯಾಕೆ ಕಾಡಿಗೆ ಕಳುಹಿಸಲಾಯಿತು..? ಅದಕ್ಕಿಂತ ಹೆಚ್ಚು ವರ್ಷ ಅಥವಾ ಕಡಿಮೆ ವರ್ಷವೇಕೆ ಅಲ್ಲ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಇದಕ್ಕೆ ಕಾರಣವೇನಂತಾ ನಾವು ಹೇಳ್ತೀವಿ ಕೇಳಿ.

ಮಂಥರೆಯ ಮಾತನ್ನು ಕೇಳಿ ಕೈಕೆ ಶ್ರೀರಾಮನನ್ನು ವನವಾಸಕ್ಕೆ ಕಳುಹಿಸಬೇಕು ಎಂದಳು. ಇಲ್ಲಿ ಮಂಥರೆ ಎಂದರೆ, ಆಗಿನ ಕಾಲದ ಖಳ ನಾಯಕಿ. ಆದ್ರೆ ಈಕೆ ದೇವತೆಗಳಿಂದ ಕಳಿಸಲ್ಪಟ್ಟವಳು ಅಂತಾ ಹೇಳಲಾಗುತ್ತದೆ. ಯಾಕಂದ್ರೆಲ ಶ್ರೀರಾಮನಿಗೆ ಪಟ್ಟ ಸಿಕ್ಕರೆ, ಅವನು ರಾಜನಾಗಿ, ರಾಜ್ಯದ ಜನರ ಅಭಿವೃದ್ಧಿಯನ್ನಷ್ಟೇ ಮಾಡಬೇಕಾಗುತ್ತದೆ. ಆಗ ಹಲವು ರಾಕ್ಷಸರ ಅಟ್ಟಹಾಸ ಹೆಚ್ಚಾಗುತ್ತದೆ. ಅವರೆಲ್ಲ ರಾಮನಿಂದಲೇ ವಧಿಸಲ್ಪಡಬೇಕಾದವರು. ಅವರ ವಧೆ ಆ ಸಮಯಕ್ಕೇಆಗದಿದ್ದರೆ, ಲೋಕ ನಾಶವಾಗುತ್ತದೆ.

ಸಾಹುಕಾರನ ಮಾತಿಗೆ ತಿರುಗೇಟು ನೀಡಿದ ಕನಕಪುರ ಬಂಡೆ

ಹಾಗಾಗಿ ಮಂಥರೆಯ ಮಾತಿನ ಮೋಡಿ, ಕೈಕೆಯ ಮೇಲೆ ಆಗುವಂಥೆ ಮಾಡಿ, ಶ್ರೀರಾಮನನ್ನು 14 ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಬೇಕಾಯಿತು. ಈ 14 ವರ್ಷಗಳಲ್ಲಿ ರಾಮ, ಎಷ್ಟೋ ಭಕ್ತರನ್ನ ಭೇಟಿಯಾದ. ಪರಮ ಭಕ್ತನಾದ ಹನುಮ ಸಿಕ್ಕ. ಅಲ್ಲದೇ ಎಷ್ಟೋ ರಾಕ್ಷಸರ ವದೆ ಮಾಡಿದ. ಶಿವನ ಪರಮ ಭಕ್ತನಾದ ರಾವಣನ ವಧೆ ಕೂಡ ರಾಮನಿಂದಲೇ ಆಗಿದ್ದು. ಯಾಕಂದ್ರೆ ರಾಮನ ವನವಾಸ ಶುರುವಾದಾಗಿನಿಂದ ರಾವಣನ ಆಯುಷ್ಯ 14 ವರ್ಷವಿತ್ತು. ಹಾಗಾಗಿ ಆ ಹದಿನಾಲ್ಕು ವರ್ಷ ಮುಗಿಯುತ್ತಿದ್ದಂತೆ, ರಾಮ ರಾವಣನ ವಧೆ ಮಾಡಿ, ಅಯೋಧ್ಯೆಗೆ ಮರಳಿದ..

- Advertisement -

Latest Posts

Don't Miss