Thursday, October 16, 2025

Latest Posts

ಮನುಷ್ಯನ ಬಾಯಿಗೂ ಜಠರಕ್ಕೂ ಏನು ಸಂಬಂಧ..?

- Advertisement -

Health Tips: ನಾವು ನೆಮ್ಮದಿಯಾಗಿ ಇರಬೇಕು ಅಂದ್ರೆ, ನಮ್ಮ ಬಳಿ ಎಲ್ಲಕ್ಕಿಂತ ಮುಖ್ಯವಾಗಿ ಇರಬೇಕಾಗಿದ್ದುದು ಆರೋಗ್ಯ. ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನಾವು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಈ ಆಹಾರ ನಮ್ಮ ಜಠರ ಸೇರಿ, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುವಂತೆ ಮಾಡುತ್ತದೆ. ಹಾಗಾಗಿ ಮನುಷ್ಯನ ಬಾಯಿಯೇ ಜಠರದ ಆರೋಗ್ಯ ಕಾಪಾಡೋದು. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..

ವೈದ್ಯರಾದ ಡಾ.ಆಂಜೀನಪ್ಪ ಈ ಬಗ್ಗೆ ವಿವರಿಸಿದ್ದು, ನಮ್ಮ ಜಠರ ಚೆನ್ನಾಗಿರಬೇಕು ಅಂದ್ರೆ, ನಮ್ಮ ಬಾಯಿ ಚೆನ್ನಾಗಿರಬೇಕು ಎಂದಿದ್ದಾರೆ. ಅಂದರೆ, ಪ್ರತಿದಿನ ಎರಡು ಬಾರಿ ಬ್ರಶ್ ಮಾಡಬೇಕು. ತಿಂದ ಬಳಿಕ ಬಾಯಿ ಮುಕ್ಕಳಿಸಬೇಕು. ವರ್ಷಕ್ಕೊಮ್ಮೆ ದಂತ ಪರೀಕ್ಷೆ ಮಾಡಿಸಿಕೊಳ್ಳಬೇಕು ಅಂತಾರೆ ವೈದ್ಯರು.

ಏಕೆಂದರೆ ಆಹಾರಗಳು ಅನ್ನನಾಳದ ಮುಖಾಂತರ ನಮ್ಮ ಜಠರಕ್ಕೆ ಹೋಗುತ್ತದೆ. ನಾವು ತಿಂದ ಆಹಾರವನ್ನು ಜಠರ ಅರಿಯುತ್ತದೆ. ಅಲ್ಲಿ ಕಲಬೆರಕೆ ಆಹಾರಗಳು ಬೇರೆ, ಆರೋಗ್ಯಕರ ಆಹಾರ ಬೇರೆ ಬೇರೆಯಾಗುತ್ತದೆ. ಆದರೂ ಹೆಚ್ಚು ಬ್ಯಾಕ್ಟಿರಿಯಾಗಳು ನಮ್ಮ ಆಹಾರದಲ್ಲಿದ್ದರೆ, ಅದರಿಂದಲೇ ನಮ್ಮ ದೇಹದಲ್ಲಿ ರೋಗ ಹರಡುತ್ತದೆ.

ಇನ್ನು ಗ್ಯಾಸ್ಟ್ರಿಕ್ ಬಗ್ಗೆ ವಿವರಿಸಿರುವ ವೈದ್ಯರು ನಾವು ಹೆಚ್ಚು ಚಿಂತೆ ಮಾಡಿದರೆ, ಅನಾರೋಗ್ಯಕರ ಆಹಾರ ಸೇವಿಸಿದರೆ, ನಮ್ಮ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಪ್ರಾಬ್ಲಮ್ ಆಗುತ್ತದೆ ಎಂದಿದ್ದಾರೆ.

ಇನ್ನು ನಾವು ಸೇವಿಸುವ ಕೆಲವು ದ್ರವ ಪದಾರ್ಥಗಳಿಂದಲೂ ನಮ್ಮ ಹೊಟ್ಟೆಯ ಸಮಸ್ಯೆ ಉದ್ಭವಿಸುತ್ತದೆ. ಹಾಗಾಗಿ ಕೆಲವು ಸಲ ಹಾಲು, ಮಜ್ಜಿಗೆ, ಮೊಸರಿನ ಸೇವನೆಯಿಂದಲೂ ಹೊಟ್ಟೆಯ ಸಮಸ್ಯೆ ಬರುತ್ತದೆ. ಆದರೆ ನಾವು ಎಳನೀರಿನ ಸೇವನೆ ಯಥೇಚ್ಛವಾಗಿ ಮಾಡಬಹುದು. ಎಳನೀರಿನ ಸೇವನೆಯಿಂದ ಜಠರ ಸಮಸ್ಯೆ ಬರುವುದಿಲ್ಲ. ಆರೋಗ್ಯವೂ ಉತ್ತಮವಾಗಿರುತ್ತದೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss