ಇಂದಿನ ಕಾಲದಲ್ಲಿ ಮಾರುಕಟ್ಟೆ ತರಹೇವಾರಿ ವಾಟರ್ ಬಾಟಲಿಗಳು ಲಗ್ಗೆ ಇಟ್ಟಿದೆ. ಅದರಲ್ಲೂ ಪ್ಲಾಸ್ಟಿಕ್ ಬಾಟಲಿಗಳೇ ಹೆಚ್ಚು. ಮಕ್ಕಳಿಗೆ ಅಟ್ರ್ಯಾಕ್ಟ್ ಆಗುವಂಥ, ಯುವ ಪೀಳಿಗೆಯವರಿಗೆ ಇಷ್ಟವಾಗುವಂಥ ವಿವಿಧ ರೀತಿಯ ಬಾಟಲಿಗಳು ಸಿಗುತ್ತದೆ. ಕಡಿಮೆ ಕ್ವಾಲಿಟಿಯ ಪ್ಲಾಸ್ಟಿಕ್ ಬಾಟಲಿಗಳಿಗೆ ಕಡಿಮೆ ರೇಟಾದರೆ, ಉತ್ತಮ ಕ್ವಾಲಿಟಿಯ ಪ್ಲಾಸ್ಟಿಕ್ ಬಾಟಲಿಗಳಿಗೆ ಹೆಚ್ಚು ರೇಟ್. ಎಷ್ಟೇ ಉತ್ತಮ ಕ್ವಾಲಿಟಿ ಇದ್ರೂ ಪ್ಲಾಸ್ಟಿಕ್ ಪ್ಲಾಸ್ಟಿಕ್ಕೇ.. ಅದು ಹಾನಿಕಾರಕವೇ.. ಹಾಗಾದ್ರೆ ನಾವು ನೀರು ಕುಡಿಯಲು ಎಂಥ ಬಾಟಲಿಯನ್ನು ಬಳಸಬೇಕು ಅಂತಾ ತಿಳಿಯೋಣ ಬನ್ನಿ..
ಊಟ ಮಾಡುವಾಗ ನೀರು ಕುಡಿಯಬಹುದಾ..? ಇಲ್ಲವಾ..?
ಆಯುರ್ವೇದದ ಪ್ರಕಾರ, ನೀರು ಕುಡಿಯಲು ಅದರದ್ದೇ ಆದ ನಿಯಮಗಳಿದೆ. ಬೇಸಿಗೆ ಗಾಲದಲ್ಲಿ ಮಣ್ಣಿನ ಮಡಿಕೆ ಅಥವಾ ಮಣ್ಣಿನ ಬಾಟಲಿಯಲ್ಲಿ ಇಟ್ಟ ನೀರನ್ನು ಕುಡಿಯಬೇಕು. ಮಳೆಗಾಲ ಶುರುವಾದ ಬಳಿಕ ತಾಮ್ರದ ಬಾಟಲಿ ಅಥವಾ ಪಾತ್ರೆಯಲ್ಲಿ ಇಟ್ಟ ನೀರನ್ನು ಕುಡಿಯಬೇಕು. ನಂತರ ಮಳೆಗಾಲ ಮುಗಿದು ಚಳಿಗಾಲ ಶುರುವಾಗಿ, ಮತ್ತೆ ಬೇಸಿಗೆ ಬರುವವರೆಗೂ ಚಿನ್ನದ ಪಾತ್ರೆಯಲ್ಲಿ ತುಂಬಿಸಿಟ್ಟ ನೀರನ್ನು ಕುಡಿಯಬೇಕು.
ಹೀಗೆ ಕಾಲಕ್ಕೆ ತಕ್ಕಂತೆ ನೀರನ್ನು ಕುಡಿದರೆ, ನೀವು ಆರೋಗ್ಯವಂತರಾಗಿರುತ್ತೀರಿ. ಎಲ್ಲರ ಮನೆಯಲ್ಲೂ ಚಿನ್ನದ ಪಾತ್ರೆ ಅಥವಾ ಲೋಟವಿರುವುದಿಲ್ಲ. ಅಂಥವರು ತಾಮ್ರದ ತಂಬಿಗೆಯಲ್ಲೇ ನೀರು ಕುಡಿಯಬಹುದು. ಆದ್ರೆ ಚಳಿಗಾಲದಲ್ಲಿ ಚಿನ್ನದ ಪಾತ್ರೆಯಲ್ಲಿಟ್ಟ ನೀರು ಕುಡಿಯುವುದು ಶ್ರೇಷ್ಠವೆಂದು ಹೇಳಲಾಗಿದೆ. ನಿಮ್ಮ ಬಳಿ ಚಿನ್ನದ ಪಾತ್ರೆ ಇಲ್ಲವೆಂದಲ್ಲಿ ಮಣ್ಣಿನ ಪಾತ್ರೆಯಲ್ಲಿ ನೀರು ತುಂಬಿಸಿಟ್ಟು, ಅದರಲ್ಲೊಂದು ಚಿನ್ನದ ಉಂಗುರವನ್ನು ಅಥವಾ ಚೈನನ್ನ ಹಾಕಿಡಿ. ಈ ನೀರನ್ನು ಕುಡಿಯುವುದರಿಂದ ನಿಮಗೆ ಆರೋಗ್ಯ ಲಾಭವಾಗುತ್ತದೆ. ಆದರೆ ಈ ಚಿನ್ನದ ನೀರನ್ನು ಚಳಿಗಾಲದಲ್ಲಷ್ಟೇ ಸೇವಿಸಿ. ಬೇಸಿಗೆಯಲ್ಲಿ ಬೇಡ.
ಕಿಡ್ನಿ ಸ್ಟೋನ್ ಆಗಬಾರದೆಂದರೆ ಏನು ಮಾಡಬೇಕು..?
ಇನ್ನು ನಿಮ್ಮ ದೇಹದಲ್ಲಿ ಕಬ್ಭಿಣಾಂಶ ಸರಿಯಾದ ಪ್ರಮಾಣದಲ್ಲಿ ಇಲ್ಲವೆಂದಲ್ಲಿ, ನೀವು ಕುಡಿಯ ನೀರಿನ ಪಾತ್ರೆಯಲ್ಲಿ ಶುದ್ಧವಾದ ಕಬ್ಬಿಣದ ದೊಡ್ಡ ಮೊಳೆಯನ್ನು ಹಾಕಿಡಿ. ನಂತರ ಆ ನೀರನ್ನು ಕುಡಿಯಿರಿ. ಆದರೆ ಆ ನೀರು ಕುದಿಸಿ, ತಣಿಸಿದ ನೀರೇ ಆಗಿರಬೇಕು ವಿನಃ ಫ್ರಿಜ್ ನೀರು ಅಥವಾ ತಣ್ಣೀರು ಆಗಿರಬಾರದು. ಇನ್ನು ತಾಮ್ರ, ಮಣ್ಣು ಮತ್ತು ಬೆಳ್ಳಿಯ ಪಾತ್ರೆಯಲ್ಲಿ ಸತತ 8 ಗಂಟೆಗಳ ಕಾಲವಾದ್ರೂ ನೀರು ತುಂಬಿಸಿಟ್ಟು ನಂತರವೇ ಕುಡಿಯಬೇಕು.