Thursday, November 21, 2024

Latest Posts

ಎಂಥ ಹೂವುಗಳನ್ನು ದೇವರಿಗೆ ಹಾಕಬಾರದು..?

- Advertisement -

Spiritual: ದೇವರಿಗೆ ಪೂಜೆ ಮಾಡುವಾಗ, ಹೂವಿದ್ದರೆ, ಆ ಪೂಜೆ ಪರಿಪೂರ್ಣಗೊಂಡಂತೆ. ಆದರೆ ಆ ಹೂವು ದೇವರಿಗೆ ಹಾಕುವಂತಿರಬೇಕು. ಕೆಲವು ಹೂವುಗಳು ದೇವರಿಗೆ ಹಾಕಲು ಅರ್ಹವಿರುವುದಿಲ್ಲ. ಅಂಥ ಹೂವುಗಳನ್ನು ದೇವರಿಗೆ ಹಾಕಬಾರದು. ಹಾಗಾದರೆ ಎಂಥ ಹೂವುಗಳನ್ನು ದೇವರಿಗೆ ಹಾಕಬಾರದು ಅಂತಾ ತಿಳಿಯೋಣ ಬನ್ನಿ..

ಗುಲಾಬಿ, ಸಂಪಿಗೆ, ಮಲ್ಲಿಗೆ, ಸೇವಂತಿಗೆ ಸೇರಿ ಹಲವು ಹೂವುಗಳನ್ನು ದೇವರಿಗೆ ಹಾಕಲಾಗುತ್ತದೆ. ಇಂಥ ಹೂವುಗಳ ಸುವಾಸನೆ ತೆಗೆದುಕೊಂಡು, ನೀವು ಅದನ್ನು ದೇವರಿಗೆ ಅರ್ಪಿಸುವಂತಿಲ್ಲ. ನೀವು ದೇವರಿಗೆ ಅರ್ಪಿಸುವ ಹೂವಿನ ಪರಿಮಳವನ್ನು ದೇವರೇ ಮೊದಲು ತೆಗೆದುಕೊಳ್ಳಬೇಕು. ಹಾಗಾಗಿ ದೇವರಿಗೆ ಪರಿಮಳ ಕಂಡ ಹೂವನ್ನು ಹಾಕಬಾರದು.

ಅಲ್ಲದೇ, ಈಗಾಗಲೇ ಬಾಡಿಹೋದ ಹೂವು, ನೆಲಕ್ಕೆ ಬಿದ್ದ ಹೂವನ್ನು ಕೂಡ ದೇವರಿಗೆ ಹಾಕಬಾರದು. ಪ್ಲಾಸ್ಟಿಕ್ ಹೂವು ಕೂಡ ದೇವರಿಗೆ ಹಾಕಲು ಯೋಗ್ಯವಲ್ಲ. ಇನ್ನು ಮುಳ್ಳು ಇರುವ ಹೂವನ್ನು ಕೂಡ ದೇವರಿಗೆ ಹಾಕಬಾರದು ಅಂತಾ ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಮುಟ್ಟಾದ ಹೆಣ್ಣು ಮಕ್ಕಳು ಮುಟ್ಟಿದ ಹೂವನ್ನು ದೇವರಿಗೆ ಹಾಕುವುದಿಲ್ಲ. ಹಾಗಾಗಿ ಹೊರಗಿನಿಂದ ಹೂವನ್ನು ಖರೀದಿಸಿ ತಂದರೆ, ಅದನ್ನು ತೊಳೆದೇ ಉಪಯೋಗಿಸಬೇಕು.

ಶಿವನಿಗೆ ಕೇದಿಗೆ, ಸಂಪಿಗೆ ಹೂವು ಅರ್ಪಿಸಬಾರದು. ಲಕ್ಷ್ಮೀ ದೇವಿಗೆ ಕೆಂಪು ಹೂವೆಂದರೆ ಇಷ್ಟ. ಹಾಗಾಗಿ, ಗುಲಾಬಿ, ದಾಸವಾಳ, ಕಮಲದ ಹೂವುಗಳನ್ನು ಲಕ್ಷ್ಮೀ ಪೂಜೆಗೆ ಅರ್ಪಿಸಬೇಕು. ಲಕ್ಷ್ಮೀ ಪೂಜೆಗೆ ಸುವಾಸನೆಯುಕ್ತವಾದ ಹೂವು ಬಳಸಲಾಗುವುದಿಲ್ಲ. ಕೊನೆಯದಾಗಿ ಸ್ವಚ್ಛ ಸ್ಥಳದಲ್ಲಿ ಬೆಳೆಯದ ಹೂವುಗಳನ್ನು ದೇವರಿಗೆ ಅರ್ಪಿಸುವಂತಿಲ್ಲ.

ಕೇರಳದ ತ್ರಿಶೂರಿನಲ್ಲಿರುವ ರೊಬೋಟಿಕ್ ಆನೆ ಬಗ್ಗೆ ಇಲ್ಲಿದೆ ನೋಡಿ ಪುಟ್ಟ ಮಾಹಿತಿ..

ಕಹಿ ಬೇವಿನ ಎಲೆಯನ್ನು ಸಿಹಿ ಬೇವಾಗಿ ಮಾರ್ಪಾಡು ಮಾಡಿದ್ದರಂತೆ ಶಿರಡಿ ಸಾಯಿಬಾಬಾ

ತಿರುಪತಿಗೆ ಹೋದಾಗ, ನೀವು ಪಾಲಿಸಬೇಕಾದ ನಿಯಮಗಳೇನು..?

- Advertisement -

Latest Posts

Don't Miss