Health Tips: ಹೆಣ್ಣಿನ ಜೀವನದದ ಮುಖ್ಯವಾದ ಕ್ಷಣ ಅಂದ್ರೆ, ಆಕೆ ತಾಯಿಯಾಗುವ ಕ್ಷಣ. ಈ ಕ್ಷಣದಿಂದ ಮಗು ಹುಟ್ಟುವವರೆಗೂ, ತಾಯಿಯಾದವಳು ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಆಹಾರ ಸೇವನೆ, ಚೆಕಪ್ ಮಾಡಿಸಿಕೊಳ್ಳುವುದು, ಗುಳಿಗೆ ಸೇವನೆ ಸೇರಿ ಡಿಲೆವರಿ ಡೇಟ್ ತನಕ ಎಲ್ಲದರ ಬಗ್ಗೆಯೂ ಕಾಳಜಿ ಮಾಡಬೇಕಾಗುತ್ತದೆ. ಆದರೆ ಡಿಲೆವರಿ ಡೇಟ್ ದಾಟಿದ ಮೇಲೂ ಮಗುವಾಗಲಿಲ್ಲ ಅಂದ್ರೆ ಏನೆಲ್ಲ ತೊಂದರೆಯಾಗುತ್ತದೆ ಅಂತಾ ಹಲವರಿಗೆ ಗೊತ್ತಿಲ್ಲ. ಆ ಬಗ್ಗೆ ವೈದ್ಯರಾದ ಸಹನಾ ದೇವದಾಸ್ ಅವರೇ ವಿವರಿಸಿದ್ದಾರೆ ನೋಡಿ..
ಡಿಲೆವರಿ ಸಮಯ ತಡವಾದಾಗ, ಹೊಟ್ಟೆಯಲ್ಲಿರುವ ಮಗು ಕಕ್ಕಸು ಮಾಡಿಕೊಂಡು, ಅದರ ಸೇವನೆ ಮಾಡಿ, ಉಸಿರಾಟದ ತೊಂದರೆಗೆ ಸಿಕ್ಕಿಹಾಕಿಕೊಳ್ಳಬಹುದು. ಇದರಿಂದ ಮಗುವಿನ ಜೀವಕ್ಕೆ ಅಪಾವಾಗುತ್ತದೆ. ಹಾಗಾಗಿ 42 ವಾರಕ್ಕೂ ಹೆಚ್ಚು ಸಮಯ ಹೊಟ್ಟೆ ನೋವು ಬರಲೇ ಇಲ್ಲ, ಡಿಲೆವರಿ ಆಗಲೇ ಇಲ್ಲವೆಂದಲ್ಲಿ, ವೈದ್ಯರ ಬಳಿ ಪರೀಕ್ಷಿಸಿಕೊಳ್ಳಲೇಬೇಕು. ಇಂಥ ಮಕ್ಕಳನ್ನು ಪೋಸ್ಟ್ ಟರ್ಮ್ ಬೇಬಿಸ್ ಎಂದು ಕರೆಯಲಾಗುತ್ತದೆ.
ಇಂಥ ಮಕ್ಕಳ ಜೀವಕ್ಕೆ ಹೆಚ್ಚು ಹಾನಿಯಾಗಬಹುದು. ಅಂಥ ಮಕ್ಕಳ ಆರೋಗ್ಯ ಕ್ಷೀಣಿಸಬಹುದು. ಬೇಳವಣಿಗೆ ಕುಂಠಿತಗೊಳ್ಳಬಹುದು, ಹಾಗಾಗಿ ಗರ್ಭಾವಸ್ಥೆಯಲ್ಲಿ ಎಲ್ಲ ರೀತಿಯ ಕಾಳಜಿ ವಹಿಸುವುದು ತುಂಬಾ ಮುಖ್ಯವಾಗಿರುತ್ತದೆ. ಕೆಲವರು ಮುಹೂರ್ತ ಕಂಡು ಹೆರಿಗೆ ಮಾಡಿಸಿಕೊಳ್ಳುವವರೂ, ತಮ್ಮ ಡಿಲೆವರಿ ದಿನಾಂಕವನ್ನು ಮುಂದೂಡುತ್ತಾರೆ. ಇದಕ್ಕಿಂತ ಹೆಚ್ಚಿನ ಮೂರ್ಖತನ ಇನ್ನೊಂದಿಲ್ಲ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..