Thursday, September 25, 2025

Latest Posts

ತಾಯಿಗೆ ಮಗುವಿನ ಬಗ್ಗೆ ಏನೇನು ತಿಳಿದಿರಬೇಕು..?

- Advertisement -

Health Tips: ನಾವು ತಾಯಿತನದ ಬಗ್ಗೆ, ಸ್ತನಪಾನದ ಬಗ್ಗೆ, ಮಗುವಿನ ಆರೋಗ್ಯದ ಬಗ್ಗೆ ಈಗಾಗಲೇ ನಿಮಗೆ ವಿವರಿಸಿದ್ದೇವೆ. ಇಂದು ವೈದ್ಯರಾದ ಸುರೇಂದ್ರ ಅವರು, ಮಗುವಿನ ಬಗ್ಗೆ ತಾಯಿಗೆ ಯಾವ ಯಾವ ಸಂಗತಿ ತಿಳಿದಿರಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನೀವು ಗರ್ಭಿಣಿಯಾಗಿದ್ದಾಗಲೇ, ಮಗುವಿನ ಬಗ್ಗೆ ಯೋಚಿಸಬೇಕು ಎನ್ನುತ್ತಾರೆ ಡಾ.ಸುರೇಂದ್ರ. ಯಾಕಂದ್ರೆ ಕೆಲ ಮಗು ಹುಟ್ಟಿದ ಬಳಿಕ ಹಾಲು ಕುಡಿಯುವುದಿಲ್ಲ. ಇದಕ್ಕೆ ಕಾರಣ, ತಾಯಿಯ ಯೋಚನೆ. ನೀವು ಗರ್ಭಿಣಿಯಾಗಿದ್ದಾಗಲೇ, ಹಾಲು ಹೆಚ್ಚಾಗಲು ಯಾವ ಆಹಾರ ಸೇವಿಸಬೇಕು..? ಮಗುವಿಗೆ ಹಾಲು ಕುಡಿಸುವ ಬಗ್ಗೆ ಯಾವ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ, ಮೊದಲು ಸಿದ್ಧರಾಗಿರಬೇಕು. ಆಗ ಮಗು ಹುಟ್ಟಿದ ಬಳಿಕ, ನೀವು ಸರಿಯಾಗಿ ಅದಕ್ಕೆ ಸ್ತನಪಾನ ಮಾಡಿಸಬಹುದು.

ಇನ್ನು ಮಗುವಿಗೆ ಆಗಾಗ ಹಾಲು ಕೊಡಬೇಕು ಅನ್ನೋದು ಎಲ್ಲರಿಗೂ ಗೊತ್ತು. ಹಾಗಾಗಿ ಕೆಲವರು ಅಲಾಂ ಇಟ್ಟುಕೊಂಡು ಮಗುವಿಗೆ ಹಾಲುಣಿಸುತ್ತಾರೆ. ಆದರೆ ಹೀಗೆ ಮಾಡುವ ಬದಲು, ಮಗು ಅತ್ತಾಗ ಆ ಮಗುವಿಗೆ ಹಾಲು ಕುಡಿಸಿ. ಅಥವಾ 3 ಗಂಟೆಗೊಮ್ಮೆ ಮಗುವಿಗೆ ಹಾಲುಣಿಸಿ.

ಇನ್ನು ಹಾಲು ಕುಡಿಸುವಾಗ, ತಾಯಿಗೆ ಮಗುವಿನ ಬಗ್ಗೆ ತಿಳಿದಿರಬೇಕಾದ ಸಂಗತಿಗಳು ಅಂದ್ರೆ, ಮಗುವಿನ ಬೆಳವಣಿಗೆ ಹೇಗೆ ಆಗುತ್ತಿದೆ. ಮಗುವಿನ ತೂಕ ವಯಸ್ಸಿಗೆ ಸರಿಯಾಗಿ ಇದೆಯಾ ಇಲ್ಲವಾ..? ಮಗು ಸರಿಯಾಗಿ ನಿದ್ದೆ ಮಾಡುತ್ತಿದೆಯಾ ಇಲ್ಲವಾ..? ಮಗು ದಿನಕ್ಕೆ 8 ಬಾರಿಯಾದರೂ ಮೂತ್ರ ವಿಸರ್ಜಿಸುತ್ತಿದೆಯಾ, ಇಲ್ಲವಾ ಅನ್ನೋದು ತಾಯಿಗೆ ಗೊತ್ತಿರಬೇಕು.

ಆ ಮಗು ನಾರ್ಮಲ್ ವೇಟ್‌ಗಿಂತ ಕಡಿಮೆ ತೂಕದ್ದಾಗಿರಬಹುದು. ಅಥವಾ ಹೆಚ್ಚು ನಿದ್ರೆ ಮಾಡದಿರಬಹುದು. ಆಗ ಅದು ಆ್ಯಕ್ಟಿವ್ ಆಗಿರುವ ಮಗುವಾಗಿದ್ದರೆ, ತೊಂದರೆ ಇಲ್ಲ. ಆದರೆ ಮಗು ಮೌನವಾಗಿದ್ದು, ಈ ರೀತಿ ನಿದ್ದೆ ಕಡಿಮೆ, ಊಟ ಕಡಿಮೆ, ತೂಕ ಕಡಿಮೆ ಇದ್ದರೆ, ವೈದ್ಯರ ಬಳಿ ಈ ಬಗ್ಗೆ ಸಲಹೆ ಕೇಳುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಈ 5 ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ..

ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?

ಮಗುವಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯ..?

- Advertisement -

Latest Posts

Don't Miss