ನಾವು ಮೊದಲ ಭಾಗದಲ್ಲಿ ಉತ್ತಮ ಸಂತಾನ ಬೇಕಾದಲ್ಲಿ ಅಪ್ಪ ಅಮ್ಮ ಹೇಗಿರಬೇಕು..? ಹೇಗೆ ಮಾತನಾಡಬೇಕು..? ಆ ಮಗುವಿನಿಂದ ಎಂಥ ಕೆಲಸ ಮಾಡಿಸಬಾರದು ಅಂತಾ ಹೇಳಿದ್ದೆವು. ಇಂದು ನಾವು ಉತ್ತಮ ಸಂತಾನಕ್ಕಾಗಿ ಹೇಗೆ ತಯಾರಾಗಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ..
ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 1
ಪತ್ನಿ ಋತುಸ್ನಾನ ಮಾಡಿ ಏಳು ದಿನದವರೆಗೂ ಯಾವುದೇ ಕಾರಣಕ್ಕೂ ಸಂಭೋಗ ಮಾಡುವಂತಿಲ್ಲ. ಯಾಕಂದ್ರೆ ಈ ವೇಳೆ ಆಕೆಯ ಶರೀರದಲ್ಲಿ ಶಕ್ತಿ ಇರುವುದಿಲ್ಲ. ಹಾಗಾಗಿ ಇಂಥ ಸಮಯದಲ್ಲಿ ಸಂಭೋಗ ಮಾಡಿದರೆ ಆರೋಗ್ಯಕರ ಮಕ್ಕಳಾಗುವುದಿಲ್ಲ. ಅಲ್ಲದೇ ಋತುಸ್ನಾನವಾಗಿ ಸಮ ಸಂಖ್ಯೆ ಬರುವ ದಿನ ಪತಿ ಪತ್ನಿ ಸೇರಬೇಕು. ಬೆಸ ಸಂಖ್ಯೆ ಬರುವ ದಿನ ಸೇರಬಾರದು. ಅಂದ್ರೆ ಋತುಸ್ನಾನವಾಗಿ 10 ದಿನ 12ನೇಯ ದಿನ 14ನೇ ದಿನ ಹೀಗೆ ಸೇರಬಹುದು. ಆದರೆ 11ನೇ ದಿನ 13ನೇ ದಿನ ಹೀಗೆ ಬೆಸ ಸಂಖ್ಯೆ ಬರುವ ದಿನ ಸೇರಬಾರದು.
ಯಾಕಂದ್ರೆ ಸಮ ಸಂಖ್ಯೆ ಇರುವ ದಿನ ಪತಿ ಪತ್ನಿ ಸೇರಿದಾಗ ಧನಾತ್ಮಕ ಯೋಚನೆಯುಳ್ಳ ಮಗು ಹುಟ್ಟುತ್ತದೆ. ಬೆಸ ಸಂಖ್ಯೆ ಇರುವ ಸಮಯದಲ್ಲಿ ಪತಿ- ಪತ್ನಿ ಸೇರಿದರೆ, ಋಣಾತ್ಮಕ ಯೋಚನೆಯುಳ್ಳ ಮಗು ಹುಟ್ಟುತ್ತದೆ ಅಂತಾ ಹೇಳಲಾಗಿದೆ. ಇನ್ನು ದಿನದ ಬಗ್ಗೆ ಹೇಳುವುದಾದರೆ, ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಗರ್ಭಧಾರಣೆಗೆ ಉತ್ತಮ ದಿನವಾಗಿದೆ. ತಿಥಿ ದನ ನೋಡುವುದಾದರೆ, ಅಷ್ಠಮಿ, ದಶಮಿ ಮತ್ತು ದ್ವಾದಶಿಯನ್ನು ಉತ್ತಮ ದಿನವೆಂದು ಪರಿಗಣಿಸಲಾಗಿದೆ.
ಚಾಣಕ್ಯನ ಈ 5 ಮಾತನ್ನ ಜೀವನದಲ್ಲಿ ಅಳವಡಿಸಿಕೊಂಡರೆ, ನೆಮ್ಮದಿಯ ಜೀವನ ನಿಮ್ಮದಾಗುತ್ತದೆ..
ಇನ್ನು ಈ ದಿನಗಳಲ್ಲಿ ಪತಿ ಪತ್ನಿ ಸೇರುವಾಗ, ಉತ್ತಮ ವಿಚಾರವನ್ನ ಯೋಚಿಸಬೇಕು. ನಿಮ್ಮ ಮನಸ್ಸು ಖುಷಿಯಾಗಿರಬೇಕು. ಅದನ್ನು ಬಿಟ್ಟು ನೀವು ಮುಖದಲ್ಲಿ ಖುಷಿ ತೋರಿಸಿ, ಮನಸ್ಸಿನಲ್ಲಿ ಕೆಟ್ಟ ಯೋಚನೆ, ಅಥವಾ ಯಾರಿಗಾದರೂ ಕೇಡು ಬಯಸುತ್ತಿದ್ದರೆ, ಅದರ ಪರಿಣಾಮ ಮಗುವಿನ ಮೇಲೆ ಬೀಳುತ್ತದೆ. ಇನ್ನು ಕೆಲವರು ಗರ್ಭಧಾರಣೆಯಾದ ಬಳಿಕ ಮನೆಯಲ್ಲಿ ನವಗ್ರಹ ಶಾಂತಿ ಮಾಡಿಸುತ್ತಾರೆ. ಯಾಕಂದ್ರೆ ಇದರಿಂದ ಮಗುವಿನ ಆರೋಗ್ಯ ಮತ್ತು ಭವಿಷ್ಯ ಉತ್ತಮವಾಗಿರುತ್ತದೆ ಅನ್ನೋ ನಂಬಿಕೆ ಇದೆ.