ಮಕ್ಕಳು ಗಮನವಿಟ್ಟು ಓದಬೇಕು. ಏಕಾಗೃತೆಯಿಂದ ಅಭ್ಯಸಿಸಬೇಕು ಅಂದ್ರೆ, ಅದಕ್ಕೆ ಮನೆಯಲ್ಲಿ ಸರಿಯಾದ ವಾತಾವರಣವಿರಬೇಕು. ಹಾಗೆ ಉತ್ತಮ ವಾತಾವರಣವನ್ನು ತಂದೆ ತಾಯಿ ಕಲ್ಪಿಸಿಕೊಡಬೇಕು. ಕೆಲವೊಮ್ಮೆ ತಂದೆ ತಾಯಿಯ ನಡುವಳಿಕೆಯೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಹುದು. ಹಾಗಾದ್ರೆ ಮಕ್ಕಳ ಪರೀಕ್ಷೆ ಸಮಯದಲ್ಲಿ ತಂದೆ ತಾಯಿ ಹೇಗಿರಬೇಕು..? ಮಕ್ಕಳಿಗೆ ಹೇಗೆ ವ್ಯವಸ್ಥೆ ಮಾಡಿಕೊಡಬೇಕು ಅಂತಾ ತಿಳಿಯೋಣ ಬನ್ನಿ..
ಮಕ್ಕಳ ಪರೀಕ್ಷೆ ಇರುವಾಗ ತಂದೆ ತಾಯಿ ಮಾಡಬೇಕಾದ ಮೊದಲ ಕೆಲಸ ಅಂದ್ರೆ, ಓದಲು ಮಕ್ಕಳ ಮೇಲೆ ಒತ್ತಡ ಹಾಕುವುದನ್ನ ತಪ್ಪಿಸಬೇಕು. ಯಾವುದೇ ಕಾರಣಕ್ಕೂ ನೀವು ಮಕ್ಕಳಿಗೆ ಓದು ಓದು ಓದು ಎಂದು ದುಂಬಾಲು ಬೀಳಬೇಡಿ. ಅದರ ಬದಲು ಅವನ ಶಾಲೆ ಶುರುವಾದಾಗಿನಿಂದಲೇ, ಪ್ರತಿದಿನ ಓದಿ, ಅರ್ಥ ಮಾಡಿಕೊಳ್ಳುವುದನ್ನ ರೂಢಿ ಮಾಡಿ. ಆಗ ಪರೀಕ್ಷೆಯ ಸಮಯದಲ್ಲಿ ಕಷ್ಟ ಪಡುವ ಪರಿಸ್ಥಿತಿ ಬರುವುದಿಲ್ಲ.
ನಿಮ್ಮ ಲವ್ ಸಕ್ಸಸ್ ಆಗಬೇಕಾ ಇಲ್ಲಿಗೆ ಭೇಟಿ ನೀಡಿ…!
ಮಕ್ಕಳಿಗೆ ಅನುಕೂಲವಾಗುವಂಥ ವಾತಾವರಣ ನಿರ್ಮಿಸಿಕೊಡಿ. ಕೆಲ ಹೆಂಗಸರು ಸಂಜೆಯಾದ ತಕ್ಷಣ, ಮನೆಯ ಎದುರು ಅಕ್ಕಪಕ್ಕದ ಮನೆಯವರನ್ನ ಕೂರಿಸಿಕೊಂಡು ಜೋರು ಜೋರಾಗಿ ಹರಟೆ ಹೊಡೆಯುತ್ತಿರುತ್ತಾರೆ. ಇದರಿಂದ ಮಕ್ಕಳಿಗೆ ಓದಿನ ಕಡೆ ಗಮನವಿರುವುದಿಲ್ಲ. ಬದಲಾಗಿ ಹರಟೆಯ ಕಡೆ ಗಮನ ಹೋಗುತ್ತದೆ. ಇನ್ನು ಕೆಲವರು ಟಿವಿ ನೋಡುತ್ತಾರೆ. ಮೊಬೈಲ್ ಸೌಂಡ ಜೋರಾಗಿಡುತ್ತಾರೆ. ಇದರಿಂದಲೂ ಮಗುವಿನ ಓದಿಗೆ ಧಕ್ಕೆ ಯಾಗುತ್ತದೆ. ಹಾಗಾಗಿ ಮನೆಯಲ್ಲಿ ಶಾಂತವಾದ ವಾತಾವರಣವನ್ನ ಕಲ್ಪಿಸಿಕೊಡಿ.
ಇನ್ನು ಮೂರನೇಯದಾಗಿ ಮಕ್ಕಳಿಗೆ ಯಾವಾಗಲೂ ಆರೋಗ್ಯಕರ ಆಹಾರವನ್ನೇ ಕೊಡಿ. ಹಾಗಂತ ಅಂಗಡಿ ತಿಂಡಿ ಕೊಡಲೇಬಾರದು ಅಂತಲ್ಲ. ಆದರೆ ಅದು ಲಿಮಿಟಿನಲ್ಲಿರಲಿ. ಅದರಿಂದ ಮಗುವಿನ ಆರೋಗ್ಯಕ್ಕೇನೂ ಧಕ್ಕೆಯಾಗದಿರಲಿ. ಜಂಕ್ ಫುಡ್ ಹೆಚ್ಚಾಗಿ ಸೇವಿಸುವುದರಿಂದ, ಅದು ನಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೇ, ಮಾನಸಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಪರೀಕ್ಷೆ ಸಮಯದಲ್ಲಿ ನರ್ವಸ್ ಆಗೋದು, ವಾಂತಿ ಬೇಧಿಯಾಗೋದೆಲ್ಲ ಶುರುವಾಗುತ್ತದೆ.
ಹೃದಯ ಸಂಬಂಧಿ ಖಾಯಿಲೆ ಬರುತ್ತಿದೆ ಎಂದರೆ ಈ ಸೂಚನೆ ಸಿಗುತ್ತದೆ ನೋಡಿ..
ಕೊನಯದಾಗಿ, ಮಕ್ಕಳಿಗೆ ನಿಮ್ಮ ಸಮಯ ಕೊಡಿ. ಅವರಿಗೂ ಅಪ್ಪ ಅಮ್ಮನ ಜೊತೆ ಆಟವಾಡಬೇಕು. ತಾವು ಬರೆಯುವುದನ್ನ, ಓದುವುದನ್ನ ತಮ್ಮ ಟ್ಯಾಲೆಂಟನ್ನ ಅಪ್ಪ ಅಮ್ಮ ನೋಡಿ ಹೊಗಳಬೇಕು. ಬೆಂಬಲಿಸಬೇಕು ಅನ್ನೋ ಆಸೆ ಇರತ್ತೆ. ಆದ್ರೆ ಹಲವು ಪೋಷಕರು ಅದನ್ನು ಗಮನಿಸುವುದೇ ಇಲ್ಲ. ಮಕ್ಕಳನ್ನ ಅವರಷ್ಟೇ ಬಿಟ್ಟು ಬಿಡುತ್ತಾರೆ. ಇದು ಮಕ್ಕಳ ಮಾನಸಿಕ ಆರೋಗ್ಯ ಹಾಳಾಗೋಕ್ಕೆ ಕಾರಣವಾಗತ್ತೆ.

