Beauty Tips: ಸ್ಕಿನ್ ಸ್ಪೆಶಲಿಸ್ಟ್ ಆಗಿರುವ ಡಾ.ವಿದ್ಯಾ.ಟಿ.ಎಸ್ ಎಂಬುವವರು ತ್ವಚೆಯ ಆರೈಕೆ ಹೇಗಿರಬೇಕು..? ಯಾವ ಕ್ರೀಮ್ ಯಾಾವಾಗ ಬಳಸಬೇಕು ಎಂಬ ಬಗ್ಗೆ ವಿವರಿಸಿದ್ದಾರೆ.
ಒಮ್ಮೊಮ್ಮೆ ವಯಸ್ಸಾಾದ ಬಳಿಕ, ಅಥವಾ ಬಿಸಿಲಿನ ಬೇಗೆ ಹೆಚ್ಚಾಗಿ ಮುಖದ ಮೇಲೆ ದುಷ್ಪರಿಣಾಮ ಬೀರಿದಾಗ, ಡಾರ್ಕ್ ಸ್ಪಾಟ್‌ಸ್ ಆಗುವ ಸಾಧ್ಯತೆ ಇರುತ್ತದೆ. ಆದರೆ ಡಾರ್ಕ್ ಸರ್ಕಲ್ಸ್ ಅಂದ್ರೆ, ಕಣ್ಣಿನ ಸುತ್ತಲೂ ಕಪ್ಪಗಾಗೋದು. ಹೆಚ್ಚು ಸೀನುವ ಗುಣ, ಅಲರ್ಜಿ, ಬಿಸಿಲು, ನಿದ್ದೆ ಗೆಡುವುದು, ಅನಾರೋಗ್ಯ ಸಮಸ್ಯೆ ಇತ್ಯಾದಿ ಕಾರಣಗಳಿಂದ ಈ ಡಾರ್ಕ್ ಸರ್ಕಲ್ಸ್ ಆಗುತ್ತದೆ.
ಇಷ್ಟೇ ಅಲ್ಲದೇ ನೀವು ಹೆಚ್ಚು ಮೊಬೈಲ್, ಟಿವಿ, ಲ್ಯಾಪ್‌ಟಾಪ್ ಬಳಕೆ ಮಾಡುತ್ತಿದ್ದಲ್ಲಿ ಕೂಡ ನಿಮಗೆ ಡಾರ್ಕ್ ಸರ್ಕಲ್ ಬರುವ ಸಾಧ್ಯತೆ ಇರುತ್ತದೆ. ಇನ್ನು ದೇಹದಲ್ಲಿ ಹಾರ್ಮೋನುಗಳ ಇಂಬ್ಯಾಲೆನ್ಸ್ ಆಗಿದರೆ, ಅದರಿಂದಲೂ ಬಂಗು ಬರುತ್ತದೆ. ಈ ಎಲ್ಲ ಸಮಸ್ಯೆಯಿಂದ ಮುಕ್ತಿ ಪಡೆಯಲು ಉತ್ತಮ ಕ್ವಾಲಿಟಿಯ ಸೋಪ್, ಸನ್‌ಸ್ಕ್ರೀಮ್, ಮಾಯಿಶ್ಚರೈಸರ್ ಬಳಸಬೇಕು.
ಆಗ ನಮ್ಮ ಸ್ಕಿನ್ ರಿಂಕಲ್ಸ್ ಆಗುವುದಿಲ್ಲ. ಹೈಡ್ರೇಟೆಡ್ ಆಗಿರುತ್ತದೆ. ಇನ್ನು ಆ್ಯಂಟಿ ಏಜಿಂಗ್ ಕ್ರೀಮನ್ನು ರಾತ್ರಿ ಹೊತ್ತು ಬಳಸಬಹುದು. ಇನ್ನು ಬರೀ ಸ್ಕಿನ್‌ಗೆ ಕ್ರೀಮ್ ಹಚ್ಚಿಕೊಳ್ಳುವುದಷ್ಟೇ ಮುಖ್ಯವಲ್ಲ. ಬದಲಾಗಿ, ನಾವು ಏನು ಸೇವಿಸುತ್ತೇವೆ ಅನ್ನೋದು ಮುಖ್ಯ. ಹಸಿ ತರಕಾರಿ, ಬೇಯಿಸಿರುವ ತರಕಾರಿ, ಹಣ್ಣು, ಸೊಪ್ಪು, ಮೊಳಕೆ ಕಾಳು, ಇವೆಲ್ಲದರ ಸೇವನೆಯಿಂದ ನಮ್ಮ ಸ್ಕಿನ್ ಆರೋಗ್ಯಕರವಾಗಿರುತ್ತದೆ.