Health Tips: ಮಕ್ಕಳಿಗೆ ಕಣ್ಣು ಕೆಂಪಗೆ ಆಗೋದು ಅಂದ್ರೆ ಮದ್ರಾಸ್ ಐ ಬರುವುದು ಅಥವಾ ಕಣ್ಣಿನಲ್ಲಿ ಇನ್‌ಫೆಕ್ಷನ್ ಆಗುವುದು. ಇಂಥ ಸಂದರ್ಭದಲ್ಲಿ ಒಂದು ಮಗುವಿಗೆ ಇರುವ ಕಣ್ಣು ನೋವು ಬೇರೆ ಮಗುವಿಗೂ ಬರಬಹುದು. ಹಾಗಾದ್ರೆ ಮಕ್ಕಳಿಗೆ ಕಣ್ಣು ಕೆಂಪಗಾದ್ರೆ ಏನು ಮಾಡಬೇಕು ಅಂತಾ ವೈದ್ಯರು ಹೇಳಿದ್ದಾರೆ ಕೇಳಿ.
ಡಾ.ಗೇರಿಕ್ ಕುಂಡು ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ. ಮಕ್ಕಳಿಗೆ ಕಣ್ಣು ಕೆಂಪಗಾದಾಗ, ಅವರಿಗೆ ರೆಸ್ಟ್ ಬೇಕಿರುತ್ತದೆ. ಹಾಗಾಗಿ ಮಕ್ಕಳಿಗೆ ಶಾಲೆಗೆ ಕಳುಹಿಸಬೇಡಿ. ಇದರಿಂದ ಎರಡು ಲಾಭವಿದೆ. ಒಂದು ಮಗುವಿಗೆ ರೆಸ್ಟ್ ಸಿಗುತ್ತದೆ ಮತ್ತೊಂದು ನಿಮ್ಮ ಮಗುವಿನಿಂದ ಬೇರೆ ಮಕ್ಕಳಿಗೆ ಕಣ್ಣು ನೋವಾಗುವುದಿಲ್ಲ. ಆದರೆ ಮಗು ಮನೆಯಲ್ಲಿದೆ ಎಂದು ಅದಕ್ಕೆ ನೀವು ಟಿವಿ ನೋಡುವ ಅವಕಾಶವಾಗಲಿ, ಗೇಮ್ ಆಡುವ ಅವಕಾಶವಾಗಲಿ ನೀಡಬಾರದು. ಯಾಕಂದ್ರೆ ಆ ಮಗುವಿನ ಕಣ್ಣು ನೋವು ಬೇಗ ಗುಣವಾಗಬೇಕು ಅಂದ್ರೆ, ಮಗುವಿಗೆ ಸ್ಕ್ರೀನ್ ಟೈಮ್ ಕೊಡಲೇಬಾರದು.
ಇನ್ನು ಮಕ್ಕಳಿಗೆ ಕಂಪು ಕೆಂಪಗಾದಾಗ, ನೀವೇ ಮನೆಯಲ್ಲೇ ಮದ್ದು ಮಾಡಿ ಗುಣ ಪಡಿಸುತ್ತೇವೆ ಎಂದು ಹೋಗಬೇಡಿ. ಬದಲಾಗಿ ಮಗುವನ್ನು ವೈದ್ಯರ ಬಳಿ ಕರೆದೊಯ್ದು ಪರೀಕ್ಷಿಸಿ. ಇದರಿಂದ ಮಗುವಿನ ಕಣ್ಣು ನೋವು ಬೇಗ ವಾಸಿಯಾಗುತ್ತದೆ. ಮನೆ ಮದ್ದು ಮಾಡಲು ಹೋಗಿ, ಎಡವಟ್ಟಾದರೆ, ಮಗುವಿನ ಕಣ್ಣಿಗೆ ಹಾನಿಯಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..