Thursday, September 19, 2024

Latest Posts

ಸಮಯಕ್ಕೆ ಸರಿಯಾಗಿ ಮುಟ್ಟಾಗಲು ಏನು ಮಾಡಬೇಕು..?

- Advertisement -

Health Tips: ನಾವು ಈ ಮೊದಲು ನಿಮಗೆ ಸಮಯಕ್ಕೆ ಸರಿಯಾಗಿ ಮುಟ್ಟಾಗದಿರಲು ಕಾರಣವೇನು ಅಂತಾ ಹೇಳಿದ್ದೆವು. ಇದೀಗ ಸಮಯಕ್ಕೆ ಸರಿಯಾಗಿ ಮುಟ್ಟಾಗಲು ಏನು ಮಾಡಬೇಕು ಎಂದು ಹೇಳಲಿದ್ದೇವೆ.

ಮೈ ತೂಕ ಹೆಚ್ಚಾಗಿದ್ದರೆ ಕಡಿಮೆ ಮಾಡಿಕೊಳ್ಳಿ. ಕಡಿಮೆ ಇದ್ದಲ್ಲಿ ಸರಿ ಮಾಡಿಕೊಳ್ಳಿ. ಆಯಾ ವಯಸ್ಸಿಗೆ ಸರಿಯಾಗಿ ಮೈತೂಕವಿರುವುದು, ಆರೋಗ್ಯಕರ ವ್ಯಕ್ತಿಯ ಲಕ್ಷಣ. ಹಾಗಾಗಿ ನಿಮ್ಮ ವಯಸ್ಸಿಗೆ ತಕ್ಕಂತೆ ಎಷ್ಟು ದೇಹದ ತೂಕ ಹೊಂದಬೇಕೋ, ಅಷ್ಟನ್ನು ಹೊಂದಲು ಪ್ರಯತ್ನಿಸಿ. ಆರೋಗ್ಯಕರ ಆಹಾರದಿಂದ ದೇಹದ ತೂಕವನ್ನು ಇಳಿಸಬಹುದು ಮತ್ತು ಹೆಚ್ಚಿಸಬಹುದು.

ಎರಡನೇಯದಾಗಿ ಮಿತವಾಗಿ, ಸರಿಯಾಗಿ ವ್ಯಾಯಾಮ ಮಾಡಿ. ಕೆಲವರು ವ್ಯಾಯಾಮ, ಸೈಕ್ಲಿಂಗ್, ವಾಕಿಂಗ್, ಯೋಗವನ್ನೆಲ್ಲಾ ಅತೀಯಾಗಿ ಮಾಡುತ್ತಾರೆ. ಇನ್ನು ಕೆಲವರು ಇದರ ಸುದ್ದಿಗೂ ಹೋಗುವುದಿಲ್ಲ. ಆದರೆ ಇವನ್ನೆಲ್ಲ ಮಿತವಾಗಿ, ಸರಿಯಾಗಿ, ಸರಿಯಾದ ಸಮಯಕ್ಕೆ ಮಾಡಿದಾಗ, ನಮ್ಮ ದೇಹ ಸಮತೋಲನ ಕಾಪಾಡಿಕೊಳ್ಳುತ್ತದೆ. ಆಗ ಆರೋಗ್ಯಕರವಾಗಿ, ಸಮಯಕ್ಕೆ ಸರಿಯಾಗಿ ಋತುಸ್ರಾವವಾಗುತ್ತದೆ.

ಮೂರನೇಯದಾಗಿ ಯಾವುದೇ ವಿಷಯಕ್ಕೂ ಹೆಚ್ಚು ಟೆನ್ಶನ್ ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಹಾಯಾಗಿರಲು ಪ್ರಯತ್ನಿಸಿ, ನಿಮ್ಮ ಸಮಸ್ಯೆಗೆ ಪರಿಹಾರ ಹೇಗೆ ಕಂಡುಕೊಳ್ಳಬೇಕು..? ತಪ್ಪನ್ನು ಹೇಗೆ ತಿದ್ದಿಕೊಳ್ಳಬೇಕು ಎಂಬುದನ್ನು ನೋಡಿ. ಅದನ್ನು ಬಿಟ್ಟು ಟೆನ್ಶನ್ ತೆಗೆದುಕೊಂಡಾಗ, ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಆಗಲೇ ಮುಟ್ಟಿನ ಸಮಸ್ಯೆಯಾಗುತ್ತದೆ. ಹಾಗಾಗಿ ಹೆಚ್ಚು ಮಾನಸಿಕ ಒತ್ತಡ ಬರದಂತೆ ನೋಡಿಕೊಳ್ಳಿ.

ನಾಲ್ಕನೇಯದಾಗಿ ಸರಿಯಾದ ಸಮಯಕ್ಕೆ, ಆರೋಗ್ಯಕರವಾದ ಆಹಾರವನ್ನು ಸೇವಿಸಿ. ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ನಿದ್ದೆ ಮಾಡಿ. ತರಕಾರಿ, ಹಣ್ಣು, ಸೊಪ್ಪು, ಮೊಳಕೆ ಕಾಳು, ಹಾಲು, ಹಾಲಿನ ಪದಾರ್ಥಗಳನ್ನು ಸೇವಿಸಿ. ಇದರ ಸೇವನೆಯಿಂದ ನಿಮ್ಮ ದೇಹಕ್ಕೆ ಪೋಷಕಾಂಶಗಳು ಸಿಗುತ್ತದೆ. ಪೋಷಕಾಂಶ ಸಿಕ್ಕಾಗ, ನೀವು ಆರೋಗ್ಯವಾಗಿರುತ್ತೀರಿ. ಸಮಯಕ್ಕೆ ಸರಿಯಾಗಿ ಋತುಸ್ರಾವವಾಗುತ್ತದೆ.

ಐದನೇಯದಾಗಿ ಜಂಕ್ ಫುಡ್, ಬೇಕರಿ ತಿಂಡಿ, ಕೂಲ್ ಡ್ರಿಂಕ್ಸ್ ಸೇವನೆಯಿಂದ ದೂರವಿರಿ. ಮುಟ್ಟನ್ನು ಮುಂದೂಡಲು ಅಥವಾ ಮೊದಲೇ ಮುಟ್ಟಾಗಲು ಹೆಚ್ಚು ಗುಳಿಗೆ ತೆಗೆದುಕೊಳ್ಳಬೇಡಿ. ಇದರಿಂದಲೇ, ಹೆಚ್ಚು ಮುಟ್ಟಿನ ಸಮಸ್ಯೆ ಬರುತ್ತದೆ.

ಮಗುವಿನ ಬಾಯಿಗೆ ಬೆರಳು ಹಾಕಿ ಕಫ ತೆಗೆಯುವ ತಪ್ಪು ಎಂದಿಗೂ ಮಾಡಬೇಡಿ..

ಕ್ಯಾನ್ಸರ್ ಇದ್ದರೆ ಹೇಗೆ ಗೊತ್ತಾಗುತ್ತದೆ..?

ಇತ್ತೀಚೆಗೆ ಸಲಿಂಗ ವಿವಾಹ ಹೆಚ್ಚಾಗಿದೆಯಾ..? ಈ ಬಗ್ಗೆ ವೈದ್ಯರು ಏನಂತಾರೆ..?

- Advertisement -

Latest Posts

Don't Miss