Thursday, November 21, 2024

Latest Posts

ಟೇಸ್ಟಿಯಾದ ಗೋಧಿ ದೋಸೆ ಮಾಡೋದು ಹೇಗೆ ಗೊತ್ತಾ..?

- Advertisement -

ಕೆಲವರು ಗೋಧಿಯಿಂದ ಬರೀ ಚಪಾತಿಯಷ್ಟೇ ಮಾಡಬಹುದು ಅಂದುಕೊಂಡಿರ್ತಾರೆ. ಆದ್ರೆ ಗೋಧಿಯಿಂದ ನೀವು ಟೇಸ್ಟಿಯಾಗಿರುವ ದೋಸೆ ಕೂಡ ತಯಾರಿಸಬಹುದು. ಮಕ್ಕಳು ಕೂಡ ಈ ದೋಸೆಯನ್ನ ಇಷ್ಟಪಟ್ಟು ತಿಂತಾರೆ. ಹಾಗಾದ್ರೆ ಈ ದೋಸೆ ಮಾಡೋಕ್ಕೆ ಬೇಕಾಗುವ ಸಾಮಗ್ರಿಗಳೇನು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಮಧುಮೇಹವನ್ನು (ಶುಗರ್) ಕಂಟ್ರೋಲಿನಲ್ಲಿಡುವುದು ಹೇಗೆ..?

ಬೇಕಾಗುವ ಸಾಮಗ್ರಿ: ಎರಡು ಕಪ್ ಗೋಧಿ, ಮೂರು ಒಣ ಮೆಣಸಿನಕಾಯಿ, ಅರ್ಧ ಸ್ಪೂನ್ ಕೊತ್ತೊಂಬರಿ ಕಾಳು, ಕಾಲು ಸ್ಪೂನ್ ಜೀರಿಗೆ, ಒಂದು ಸ್ಪೂನ್ ಉದ್ದಿನಬೇಳೆ, 5ರಿಂದ 6 ಕರಿಬೇವಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲ ರಾತ್ರಿ ಗೋಧಿಯನ್ನು ನೆನೆಸಿಡಿ. ಮರುದಿನ ಬೆಳಿಗ್ಗೆ ಆ ಗೋಧಿಯನ್ನು ರುಬ್ಬಿ ದೋಸೆ ಹಿಟ್ಟಿನ ಹದಕ್ಕೆ, ಹಿಟ್ಟು ರೆಡಿ ಮಾಡಿಕೊಳ್ಳಿ. ನಂತರ ಗ್ಯಾಸ್ ಆನ್ ಮಾಡಿ, ಒಂದು ಪ್ಯಾನ್ ಇರಿಸಿ, ಮೆಣಸಿನಕಾಯಿ, ಕರಿಬೇವು, ಉದ್ದಿನಬೇಳೆ, ಕೊತ್ತೊಂಬರಿ ಕಾಳು, ಜೀರಿಗೆ, ಹಾಕಿ, ಚೆನ್ನಾಗಿ ಹುರಿದು, ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ದೋಸೆ ಹಿಟ್ಟಿಗೆ ಸೇರಿಸಿಕೊಳ್ಳಿ.

ನೀವು ಚಾಕೋಲೇಟ್ ಪ್ರಿಯರಾ..? ಹಾಗಾದ್ರೆ ಈ ಸ್ಟೋರಿ ಖಂಡಿತ ಓದಿ..

ನಂತರ ದೋಸೆ ಮಾಡಿ. ಇಂಥ ದೋಸೆಗೆ ಚಟ್ನಿಯ ಅವಶ್ಯಕತೆ ಇರುವುದಿಲ್ಲ. ನೀವು ಇದನ್ನು ಹಾಗೆಯೇ ತಿನ್ನಬಹುದು. ಈ ದೋಸೆ ರುಚಿಕರವಾಗಿರುತ್ತದೆ. ಆರೋಗ್ಯಕ್ಕೂ ಒಳ್ಳೆಯದು. ಮಕ್ಕಳಿಗೆ ಖಾರ ಕಡಿಮೆ ಹಾಕಿ ಈ ದೋಸೆ ಮಾಡಿಕೊಡುವುದು ಉತ್ತಮ. ಅವರು ಈ ದೋಸೆಯನ್ನ ಇಷ್ಟಪಟ್ಟು ತಿನ್ನುತ್ತಾರೆ.

- Advertisement -

Latest Posts

Don't Miss