Saturday, October 19, 2024

Latest Posts

ತಿರುಪತಿಗೆ ಹೋದಾಗ, ನೀವು ಪಾಲಿಸಬೇಕಾದ ನಿಯಮಗಳೇನು..?

- Advertisement -

Spiritual: ತಿರುಪತಿಗೆ ಹೋಗಿ, ಬಾಲಾಜಿಯ ದರ್ಶನ ಪಡೆಯಬೇಕು ಅಂದ್ರೆ, ಪುಣ್ಯ ಮಾಡಿರಬೇಕು ಅನ್ನೋದು ಹಲವರ ಮಾತು. ಯಾಕಂದ್ರೆ ತಿರುಪತಿಯ ತನಕ ಹೋಗಿ, ಎಷ್ಟೋ ಜನ ಬಾಲಾಜಿಯ ದರ್ಶನ ಪಡಿಯದೇ, ಹಾಗೇ ಮನೆಗೆ ಬಂದವರಿದ್ದಾರೆ. ಹಾಗಾಗಿಯೇ ಬಾಲಾಜಿ ಕರೆಸಿಕೊಂಡರೆ ಮಾತ್ರ, ಅವನ ದರ್ಶನ ಮಾಡಲು ಸಾಧ್ಯ ಅಂತಾ ಹೇಳುವುದು. ನೀವು ತಿರುಪತಿಗೆ ಹೋದಾಗ, ಹಲವು ರೂಲ್ಸ್ ಫಾಲೋ ಮಾಡಬೇಕಾಗುತ್ತದೆ. ಯಾವುದು ಆ ರೂಲ್ಸ್ ಅಂತಾ ತಿಳಿಯೋಣ ಬನ್ನಿ..

ತಿರುಪತಿಗೆ ಹೋಗುವವರು ಮೊದಲೇ ಅಲ್ಲಿ ರೂಂನ್ನು ಬುಕ್‌ ಮಾಡಬೇಕಾಗುತ್ತದೆ. ಹಾಗಾಗಿ ನೀವು ಪ್ಯಾಕೇಜ್ ಟ್ರಿಪ್ ಹೋಗುವುದು ಉತ್ತಮ. ಅವರು ನಿಮಗಾಗಿ ಮೊದಲೇ ರೂಂ ಬುಕ್ ಮಾಡಿರುತ್ತಾರೆ. ಅಲ್ಲಿ ನಿಮಗೆ ವಿಶ್ರಾಂತಿ ಪಡೆಯಲು ಅವಕಾಶವಿರುವುದಿಲ್ಲ. ಬದಲಾಗಿ, ಸ್ನಾನ ಮಾಡಿ, ಹೆಣ್ಣು ಮಕ್ಕಳು ಸೀರೆ, ಚೂಡಿದಾರವನ್ನು ಧರಿಸಬೇಕು. ಪುರುಷರು ಪಂಚೆ ಶರ್ಟು ಶಲ್ಯವನ್ನು ಧರಿಸಬೇಕು. ನಿಮಗೆ ಕೊಟ್ಟ ಸಮಯದಲ್ಲಿ ನೀವು ರೆಡಿಯಾಗಿ ಬರಬೇಕು.

ಮೊದಲು ಲಕ್ಷ್ಮೀ ದೇವಿಯ ದರ್ಶನ ಮಾಡಿ, ಬಳಿಕ ಶ್ರೀನಿವಾಸನ ದರ್ಶನ ಮಾಡಬೇಕು. ತಿರುಮಲ ಬೆಟ್ಟಕ್ಕೆ ಹೋಗುವ ದಾರಿ ಮಧ್ಯೆ ಲಕ್ಷ್ಮೀದೇವಿಯ ದೇವಸ್ಥಾನವಿದೆ. ಹಾಗಾಗಿ ಮೊದಲು ಲಕ್ಷ್ಮೀ ದೇವಿಯ ದರ್ಶನಕ್ಕೆ ಮಾಡಿ, ಬಳಿಕ ಶ್ರೀನಿವಾಸನ ದರ್ಶನ ಮಾಡಬೇಕು. ದರ್ಶನದ ಬಳಿಕ ಲಡ್ಡು ಪ್ರಸಾದ, ಪುಳಿಯೋಗರೆ ಪ್ರಸಾದ ನೀಡಲಾಗುತ್ತದೆ. ಭಕ್ತರಿಗೆ ಅನ್ನಸಂತರ್ಪಣೆ ಇದ್ದು, ಊಟ ಮಾಡಬಹುದು.

ಇನ್ನು ಮುಖ್ಯವಾದ ವಿಷಯ ಅಂದ್ರೆ, ದೇವಸ್ಥಾನಕ್ಕೆ ಹೋಗುವ ಮುನ್ನ ಮಾಂಸಾಹಾರ, ಮೊಟ್ಟೆ, ಮದ್ಯಪಾನ, ಧೂಮಪಾನದ ಸೇವನೆ ಮಾಡಬಾರದು. ಹಲವರು ಈರುಳ್ಳಿ ಬೆಳ್ಳುಳ್ಳಿ ಸೇವನೆಯನ್ನೂ ಮಾಡುವುದಿಲ್ಲ. ಇನ್ನು ಬೆಲೆ ಬಾಳುವ ವಸ್ತುಗಳನ್ನು ಕೊಂಡೊಯ್ಯಬೇಡಿ. ನಿಮ್ಮಲ್ಲಿರುವ ದುಡ್ಡನ್ನು ಜೋಪಾನವಾಗಿ ಇಟ್ಟುಕೊಳ್ಳಿ.

ದೇವರ ದಯೆ ಇಲ್ಲದಿದ್ದರೆ, ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುವುದ್ಯಾಕೆ..?

ಸಾಧ್ವಿಗಳೆಂದರೆ ಯಾರು..? ಇವರ ಜೀವನದ ಉದ್ದೇಶಗಳೇನು..?

ತುಳಸಿ ಮತ್ತು ಸಾಲಿಗ್ರಾಮ ವಿವಾಹದ ಕಥೆ..

- Advertisement -

Latest Posts

Don't Miss